Neer Dose Karnataka
Take a fresh look at your lifestyle.

ಕೊನೆಗೂ ಬಯಲಾಯ್ತು ನಟಿ ಮೀನಾ ರವರ ಗಂಡನ ಸಾವಿಗೆ ಕಾರಣ: ಕಾರಣ ಕೇಳಿ ಶಾಕ್ ಆದ ನೆಟ್ಟಿಗರು. ಪಾಪ ಮತ್ಯಾರಿಗೂ ಈ ರೀತಿ ಆಗಬಾರದು ಕಣ್ರೀ.

86

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಮೀನಾ ಅವರು ಇತ್ತೀಚೆಗೆ ತಮ್ಮ ಪತಿಯನ್ನು ಕಳೆದುಕೊಂಡರು. ಬೆಂಗಳೂರು ಮೂಲದ ಉದ್ಯಮಿ ವಿದ್ಯಾಸಾಗರ್ ಅವರೊಡನೆ ಮದುವೆಯಾಗಿದ್ದರು ನಟಿ ಮೀನಾ. ಕಳೆದ ಒಂದೂವರೆ ತಿಂಗಳ ಹಿಂದೆ ವಿದ್ಯಾಸಾಗರ್ ಅವರು ಆರೋಗ್ಯ ಸಮಸ್ಯೆಯಿಂದ ಮೃತರಾದರು. ಇವರಿಗೆ ಆಗಿದ್ದೇನು ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಮೀನಾ ಅವರ ಪತಿ ನಿಧನರಾಗಲು ಕಾರಣ ಏನು ಎಂದು ತಿಳಿದು ಬಂದಿದೆ.

ವಿದ್ಯಾಸಾಗರ್ ಅವರು ಕೆಲವು ವರ್ಷಗಳಿಂದ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು. ಈ ವರ್ಷದ ಆರಂಭದಲ್ಲಿ ಅವರ ಇಡೀ ಕುಟುಂಬಕ್ಕೆ ಕೋವಿಡ್ ಸೋಂಕು ತಗುಲಿತ್ತು, ಆಗ ವಿದ್ಯಾಸಾಗರ್ ಅವರು ಚಿಕಿತ್ಸೆ ಪಡೆದು, ಗುಣಮುಖರಾಗಿದ್ದರು. ಆದರೆ ಮತ್ತೊಮ್ಮೆ ಶ್ವಾಸಕೋಶದ ತೊಂದರೆ ಕಾಣಿಸಿಕೊಂಡು, ಅವರು ಚೆನ್ನೈನ ಖಾಸಗಿ ಆಸ್ಪಟ್ಟೆಗೆ ದಾಖಲಾಗಿದ್ದರು ಎನ್ನಲಾಗಿದೆ. ವಿದ್ಯಾಸಾಗರ್ ಅವರ ಶ್ವಾಸಕೋಶದ ಸಮಸ್ಯೆ ಉಲ್ಬಣಗೊಂಡ ಕಾರಣ ವೈದ್ಯರು ಶ್ವಾಸಕೋಶದ ಕಸಿ ಮಾಡಿಸಿಕೊಳ್ಳಲು ಸಲಹೆ ನೀಡಿದ್ದರು. ಆದರೆ ಆ ಸಮಯದಲ್ಲಿ ದಾನಿ ಸಿಗದೆ, ವಿದ್ಯಾಸಾಗರ್ ಅವರ ಆರೋಗ್ಯಕ್ಕೆ ಹೆಚ್ಚು ತೊಂದರೆಯಾಗಿ, ನಿಧನರಾದರು.

ಗಂಡ ಇನ್ನಿಲ್ಲವಾದ ಬಳಿಕ ಕೆಲ ದಿನಗಳ ಕಾಲ ನಟಿ ಮೀನಾ ಅವರು ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಇದೀಗ ಆ ನೋವಿನಿಂದ ಹೊರಬರಲು ಪ್ರಯತ್ನ ಮಾಡುತ್ತಿರುವ ಮೀನಾ ಅವರು, ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರ ಸ್ನೇಹಿತೆಯರಾದ ರಂಭ, ಸಾಂಘವಿ ಅವರೆಲ್ಲರೂ ಮೀನಾ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಅದಾದ ಬಳಿಕ ನಟಿ ಮೀನಾ ಅವರು ಈಗ ತಮ್ಮ ಜೀವನದ ಬಗ್ಗೆ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಅದೇನೆಂದರೆ, ಆಗಸ್ಟ್ 13ರಂದು ವರ್ಲ್ಡ್ ಆರ್ಗನ್ ಡೊನೇಷನ್ ದಿನದಂದು, ಮೀನಾ ಅವರು ತಮ್ಮ ಅಂಗಾಂಗ ದಾನ ನೀಡಲು ಸಹಿ ಹಾಕಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಾಲುಗಳನ್ನು ಸಹ ಬರೆದುಕೊಂಡಿದ್ದಾರೆ. ಮೀನಾ ಅವರ ಈ ನಿರ್ಧಾರಕ್ಕೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Leave A Reply

Your email address will not be published.