Neer Dose Karnataka
Take a fresh look at your lifestyle.

ಟೆಲೆಕಾಂ ಕ್ಷೇತ್ರದಲ್ಲಿ ಮುಂದುವರೆದ ಫೈಟ್: ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಏರ್ಟೆಲ್: ಎರಡು ಹೊಸ ಯೋಜನೆಯಲ್ಲಿ ಕಡಿಮೆ ಬೆಲೆಗೆ ಏನೆಲ್ಲಾ ಸಿಗಲಿದೆ ಗೊತ್ತೇ?

18

ಭಾರತದ ಟೆಲಿಕಾಂ ಕಂಪನಿಗಳಲ್ಲಿ ಏರ್ಟೆಲ್ ಸಂಸ್ಥೆ ಗ್ರಾಹಕರಿಗೆ ಉತ್ತಮವಾದ ಸೇವೆಗಳನ್ನು ನೀಡುವಲ್ಲಿ ಎರಡನೆಯ ಸ್ಥಾನದಲ್ಲಿದೆ. ಏರ್ಟೆಲ್ ಸಂಸ್ಥೆಯು ಗ್ರಾಹಕರಿಗೆ ಉತ್ತಮವಾದ ಯೋಜನೆಗಳನ್ನು ನೀಡುತ್ತಿದೆ. ಟೆಲಿಕಾಂ ಕ್ಷೇತ್ರದಲ್ಲಿ ಹೆಚ್ಚು ಕಾಂಪಿಟೇಶನ್ ಇರುವ ಕಾರಣ, ಏರ್ಟೆಲ್ ಸಂಸ್ಥೆ ಇದೀಗ ಎರಡು ಹೊಸ ಪ್ಲಾನ್ ಗಳನ್ನು ಹೊರತಂದಿದೆ. ಕಡಿಮೆ ಬೆಲೆಯಲ್ಲಿ ಒಳ್ಳೆಯ ಆಫರ್ ಈ ಪ್ಲಾನ್ ನಲ್ಲಿದ್ದು, ಅದರ ಬಗ್ಗೆ ತಿಳಿಸುತ್ತೇವೆ ನೋಡಿ..

₹519 ಮತ್ತು ₹779 ರೂಪಾಯಿಯ ಹೊಸ ಪ್ಲಾನ್ ಗಳು ಇದಾಗಿದ್ದು, ಇದರಲ್ಲಿ ದಿನಕ್ಕೆ 1.5ಜಿಬಿ ಡೇಟಾ, ಅನಿಯಮಿತ ಕರೆಗಳು ಹಾಗೂ ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು ಸಿಗಲಿದೆ. ಏರ್ಟೆಲ್ ವೆಬ್ಸೈಟ್ ನಲ್ಲಿ ಮತ್ತು ಆಪ್ ನಲ್ಲಿ ರೀಚಾರ್ಜ್ ಮಾಡಿಕೊಳ್ಳಲು ಈ ಪ್ಲಾನ್ ಈಗಾಗಲೇ ಲಭ್ಯವಿದೆ. 519 ರೂಪಾಯಿ ಪ್ಲಾನ್ ನ ವಿಶೇಷತೆ ಏನೆಂದರೆ, ಇದರ ವ್ಯಾಲಿಡಿಟಿ 60 ದಿನಗಳ ಕಾಲ ಇರುತ್ತದೆ. ಇದರಲ್ಲಿ ದಿನಕ್ಕೆ 1.5ಜಿಬಿ ಡೇಟಾ, ಅನಿಯಮಿತ ಕರೆಗಳು, ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು ಜೊತೆಗೆ 90 ಜಿಬಿ ಡೇಟಾ ಸಿಗುತ್ತದೆ, ಜೊತೆಗೆ ಏರ್ಟೆಲ್ ಥ್ಯಾಂಕ್ಸ್ ನ ಸೌಲಭ್ಯಗಳು ಸಿಗುತ್ತದೆ. ಇವುಗಳ ಜೊತೆಗೆ ಹಲೋ ಟ್ಯುನ್ಸ್, ಅಪೋಲೊ ಸರ್ಕಲ್, ಫಾಸ್ಟ್ ಟ್ಯಾಗ್ ಕ್ಯಾಶ್ ಬ್ಯಾಕ್ ಸಿಗುತ್ತದೆ.

ಜೊತೆಗೆ ದೈನಂದಿನ ಡೇಟಾ ಮುಗಿದ ನಂತರ 64kbps ವೇಗದಲ್ಲಿ ಇಂಟರ್ನೆಟ್ ಬಳಸಬಹುದು. 779 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ ನಲ್ಲಿ ದಿನಕ್ಕೆ 1.5ಜಿಬಿ ಡೇಟಾ, ಉಚಿತ ಕರೆಗಳು, ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು, ಹಾಗೂ ಹೆಚ್ಚುವರಿ 135 ಜಿಬಿ ಡೇಟಾ ಸಿಗುತ್ತದೆ. ಈ ಪ್ಲಾನ್ 90 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ. 519 ರೂಪಾಯಿಯ ಪ್ಲಾನ್ ನ ಹಾಗೆ, ಎಲ್ಲಾ ಬೇರೆ ಸೇವೆಗಳು ಸಹ ಲಭಿಸುತ್ತದೆ. 299 ರೂಪಾಯಿಯ ಪ್ಲಾನ್ ನಲ್ಲಿ ಇದೇ ಸೌಲಭ್ಯಗಳು ಇದ್ದು, ಆ ಪ್ಲಾನ್ ನ ವ್ಯಾಲಿಡಿಟಿ 28 ದಿನಗಳ ವರೆಗೂ ಇರುತ್ತದೆ.

Leave A Reply

Your email address will not be published.