Neer Dose Karnataka
Take a fresh look at your lifestyle.

ಕೇವಲ 10 ಸಾವಿರಕ್ಕೆ ಸ್ವಂತ ಉದ್ಯಮ ಮಾಡಿ, ಬರುವ ಲಾಭ ನೋಡಿದರೇ ನೀವೇ ಇರುವ ಕೆಲಸ ಬಿಟ್ಟು ಬಿಡುತ್ತೀರಾ. ಏನೆಲ್ಲಾ ಮಾಡಬಹುದು ಗೊತ್ತೇ??

ಇತ್ತೀಚಿನ ದಿನಗಳಲ್ಲಿ ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡಲು ಹೆಚ್ಚಿನ ಜನರಿಗೆ ಇಷ್ಟ ಆಗುವುದಿಲ್ಲ. ಅಷ್ಟೇ ಅಲ್ಲದೆ, ಹಲವು ಜನರು 9 ರಿಂದ 6 ಗಂಟೆ ವರೆಗೂ ಮಾಡುವ ಕೆಲಸಗಳಿಂದ ಬೋರ್ ಆಗುತ್ತಾರೆ. ಅಂಥವರು ಬ್ಯುಸಿನೆಸ್ ಮಾಡಬೇಕು ಎಂದು ಯೋಚನೆ ಮಾಡುತ್ತಾರೆ. ಒಂದು ಬ್ಯುಸಿನೆಸ್ ಅನ್ನು ಹೇಗೆಂದರೆ ಹಾಗೆ ಶುರು ಮಾಡಲು ಆಗುವುದಿಲ್ಲ. ಅದಕ್ಕಾಗಿ ಒಂದು ಐಡಿಯಾ ಇರಬೇಕು. ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಪಡೆಯುವ ಬ್ಯುಸಿನೆಸ್ ಮಾಡಬೇಕು.

ಇದೇ ರೀತಿ ಕಡಿಮೆ ಹೂಡಿಕೆ ಮಾಡಿ, ಹೆಚ್ಚು ಲಾಭ ಪಡೆಯುವ ಬ್ಯುಸಿನೆಸ್ ಒಂದನ್ನು ಶುರು ಮಾಡುವ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ. 5 ರಿಂದ 10 ಸಾವಿರ ರೂಪಾಯಿ ಹೂಡಿಕೆ ಮಾಡಿ ನೀವು ಈ ಬ್ಯುಸಿನೆಸ್ ಶುರು ಮಾಡಬಹುದು. ಲಾಭ ಪಡೆದು, ಬ್ಯುಸಿನೆಸ್ ವೃದ್ಧಿಯಾದ ನಂತರ ಅದನ್ನು ವಿಸ್ತರಿಸಿಕೊಂಡು ಹೋಗಬಹುದು. ಆ ಸುಲಭದ ಬ್ಯುಸಿನೆಸ್ ಯಾವುದು, ಅದರಿಂದ ಲಾಭ ಹೇಗೆ ಪಡೆಯುವುದು ಎಂದು ತಿಳಿಯಲು, ಈ ಲೇಖನಿಯನ್ನು ಪೂರ್ತಿಯಾಗಿ ಓದಿ..

ಮನೆಗಳಲ್ಲಿ ಬಟ್ಟೆ ತೊಳೆಯಲು ವಾಷಿಂಗ್ ಮಷಿನ್ ಅನ್ನು ಬಳಸುತ್ತೇವೆ. ಬಟ್ಟೆ ತೊಳೆಯಲು ಮಾತ್ರ ಇಂತಹ ಯಂತ್ರ ಇಲ್ಲ. ಬದಲಾಗಿ ಶೂಗಳನ್ನು ತೊಳೆಯಲು ಸಹ ಇಂತಹ ಒಂದು ಯಂತ್ರ ಇದೆ. ಲಾಂಡ್ರಿಗಳಲ್ಲಿ ಬಟ್ಟೆಗಳ ಜೊತೆಗೆ ಬೂಟ್ಸ್ ಗಳನ್ನು ಸಹ ತೊಳೆದುಕೊಳ್ಳಲು ಈಗ ಅವಕಾಶ ಇದೆ. ದೊಡ್ಡ ನಗರಗಳಲ್ಲಿ ಇದನ್ನು ನೀವು ಶುರು ಮಾಡಬಹುದು.

ಈಗೆಲ್ಲಾ ಮೊಬೈಲ್ ರೀಚಾರ್ಜ್ ಮಾಡಲು ಗೂಗಲ್ ಪೇ, ಫೋನ್ ಪೇ ಇದೆ. ಆದರೆ ಗ್ರಾಮೀಣ ಭಾಗದಲ್ಲಿ ಈಗಲೂ ಜನರು ಅಂಗಡಿಗಳಿಗೆ ಹೋಗಿ ರೀಚಾರ್ಜ್ ಮಾಡಿಸಿಕೊಳ್ಳುತ್ತಾರೆ. ಹಾಗಾಗಿ ಮೊಬೈಲ್ ರೀಚಾರ್ಜ್ ಅಂಗಡಿಯನ್ನು ಸಹ ಶುರುಮಾಡಬಹುದು. ರೀಚಾರ್ಜ್ ಜೊತೆಗೆ ಸಿಮ್ ಕಾರ್ಡ್ ಮಾರಾಟ ಮಾಡಬಹುದು. ಅಂಗಡಿಯಲ್ಲಿ ಇದರ ಜೊತೆಗೆ ಎಲೆಕ್ಟ್ರಾನಿಕ್ ಐಟಮ್ಸ್ ಗಳನ್ನು ಸಹ ಮಾರಾಟ ಮಾಡಬಹುದು.

ಪ್ರಿಂಟಿಂಗ್ ಮತ್ತು ಜೆರಾಕ್ಸ್ ಅಂಗಡಿಯಿಂದ ಸಹ ಒಳ್ಳೆಯ ಲಾಭ ಪಡೆಯಬಹುದು. ಅದರಲ್ಲೂ ಯಾವುದಾದರೂ ಶಾಲೆ ಅಥವಾ ಕಾಲೇಜಿನ ಬಳಿ ಪ್ರಿಂಟಿಂಗ್ ಮತ್ತು ಜೆರಾಕ್ಸ್ ಅಂಗಡಿ ಇಟ್ಟುಕೊಂಡರೆ ಒಳ್ಳೆಯ ಲಾಭ ಪಡೆಯಬಹುದು. ವಿದ್ಯಾರ್ಥಿಗಳಿಗೆ ಇದು ಬಹಳ ಅನುಕೂಲ ಆಗಲಿದೆ .

ಮನೆಯಲ್ಲಿ ಕೂತು ಕೆಲಸ ಮಾಡಲು ಬಯಸುವವರಿಗೆ ಟೈಲರಿಂಗ್ ಸಹ ಉತ್ತಮವಾದ ಆಯ್ಕೆಯಾಗಿದೆ. ಮಹಿಳೆಯರು ಹೆಚ್ಚಾಗಿ ಈ ಕೆಲಸ ಮಾಡುತ್ತಾರೆ. ಇದರಿಂದ ಲಾಭದ ಜೊತೆಗೆ, ಶ್ರದ್ಧೆಯಿಂದ ಕೆಲಸ ಮಾಡಿ, ಅನುಕೂಲ ಮಾಡಿಕೊಳ್ಳಬಹುದು. ಟೈಲರಿಂಗ್ ಸಹ ಒಳ್ಳೆಯ ಆಯ್ಕೆ ಆಗಿದೆ. ಆದರೆ ಟೈಲರಿಂಗ್ ಶುರು ಮಾಡುವ ಮೊದಲು, ತರಬೇತಿ ಪಡೆದುಕೊಳ್ಳಬೇಕು.

Comments are closed.