Neer Dose Karnataka
Take a fresh look at your lifestyle.

ಯಾವುದೇ ರಿಸ್ಕ್ ಇಲ್ಲದೆ, ಖಚಿತವಾಗಿ ಹಣ ಗಳಿಸುವಲ್ಲಿ ಇನ್ವೆಸ್ಟ್ ಮಾಡಿ ಕೋಟ್ಯಧಿಪತಿಯಾಗುವುದು ಹೇಗೆ ಗೊತ್ತೇ?? ಒಂದು ರೂಪಾಯಿ ಕೂಡ ರಿಸ್ಕ್ ಇಲ್ಲ

ಹೆಚ್ಚಿನ ಹಣ ಉಳಿತಾಯ ಮಾಡಬೇಕು ಎನ್ನುವುದು ಎಲ್ಲರ ಆಸೆ ಆಗಿರುತ್ತದೆ. ಅದರಲ್ಲೂ ನಿವೃತ್ತಿ ಪಡೆಯುವ ಸಮಯದಲ್ಲಿ ಉತ್ತಮ ಮೊತ್ತದ ಹಣ ಪಡೆದು, ಒಳ್ಳೆಯ ರೀತಿಯಲ್ಲಿ ಜೀವನ ನಡೆಸಬೇಕು ಎನ್ನುವುದು ಎಲ್ಲರ ಆಸೆ. ಅದಕ್ಕಾಗಿ ನೀವು ಕಡಿಮೆ ಹಣ ಹೂಡಿಕೆ ಮಾಡಿ, ದೀರ್ಘಕಾಲದ ಬಳಿಕ ಒಳ್ಳೆಯ ರಿಟರ್ನ್ಸ್ ಪಡೆಯುವ ಹೂಡಿಕೆ ಯೋಜನೆ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಇದು ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಪಿಪಿಎಫ್ ಆಗಿದೆ. ಇದರಲ್ಲಿ ಹೂಡಿಕೆ ಮಾಡುವುದರಿಂದ ನೀವು ರಿಟರ್ನ್ಸ್ ಪಡೆಯುವಾಗ, ಟ್ಯಾಕ್ಸ್ ತೊಂದರೆ ಸಹ ಇರುವುದಿಲ್ಲ. ಈ ಯೋಜನೆಯ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತೇವೆ ನೋಡಿ..

ಭಾರತದಲ್ಲಿ ಅಪಾಯವಿಲ್ಲ ಹೂಡಿಕೆ ಯೋಜನೆಯಲ್ಲಿ ಇದು ಸಹ ಒಂದಾಗಿದೆ. 15 ವರ್ಷಗಳ ಕಾಲ ಹಣ ಹೂಡಿಕೆ ಮಾಡಿದರೆ, ಶೇ.7.1 ರಷ್ಟು ಬಡ್ಡಿ ಬರುತ್ತದೆ. 15 ವರ್ಷಗಳ ಬಳಿಕ ಸಹ ಹೂಡಿಕೆ ಸಮಯವನ್ನು 5 ವರ್ಷಗಳ ವರೆಗೂ ವಿಸ್ತರಿಸಬಹುದು. ಈ ಯೋಜನೆಯಲ್ಲಿ ವಾರ್ಷಿಕವಾಗಿ 500 ರೂಪಾಯಿ ಹೂಡಿಕೆ ಮಾಡಿದರೆ, 1.5ಲಕ್ಷ ರೂಪಾಯಿ ಹಣವನ್ನು ಉಳಿತಾಯ ಮಾಡಬಹುದು. ಈ ಯೋಜನೆಯಲ್ಲಿ ದಿನಕ್ಕೆ 417 ರೂಪಾಯಿ ಉಳಿತಾಯ ಮಾಡಿದರೆ, ತಿಂಗಳಿಗೆ, 12,500 ರೂಪಾಯಿ ಆಗುತ್ತದೆ. ವಾರ್ಷಿಕವಾಗಿ 1,50,000 ರೂಪಾಯಿ ಉಳಿತಾಯ ಮಾಡಿದ ಹಾಗೆ ಆಗುತ್ತದೆ. ಇದು 15 ವರ್ಷಕ್ಕೆ 40.58 ಲಕ್ಷ ರೂಪಾಯಿ ಆಗುತ್ತದೆ. ಈ ಯೋಜನೆಯನ್ನು ಎರಡು ಸಾರಿ ವಿಸ್ತರಣೆ ಮಾಡಿದಲ್ಲಿ, ಕೋಟ್ಯಾಧಿಪತಿ ಆಗುತ್ತೀರಿ.

ಉದಾಹರಣೆಗೆ ನಿಮ್ಮ ವಯಸ್ಸು 35 ಇದ್ದಾಗ, ನೀವು ಹೂಡಿಕೆ ಮಾಡಲು ಶುರು ಮಾಡಿದರೆ, 60ನೇ ವಯಸ್ಸಿನ ವರೆಗೂ ಹೂಡಿಕೆ ಮಾಡಬೇಕಾಗುತ್ತದೆ. 25 ವರ್ಷಗಳ ಕಾಲ ನೀವು ಹೂಡಿಕೆ ಮಾಡಿದಲ್ಲಿ, 1.03 ಕೋಟಿ ರೂಪಾಯಿ ನಿಮ್ಮ ಕೈಗೆ ಸಿಗಲಿದೆ. ಇಲ್ಲಿ ನಿಮಗೆ 66 ಲಕ್ಷ ರೂಪಾಯಿ ಬಡ್ಡಿಯ ಹಾಗೆ ಸಿಗಲಿದೆ. ಇದು ಪೂರ್ತಿಯಾಗಿ ತೆರಿಗೆ ರಹಿತ ಆಗಿರುವ ಕಾರಣ, ಪೂರ್ತಿ ಹಣ ನಿಮ್ಮ ಕೈಸೇರುತ್ತದೆ. ನಿಮ್ಮ ಯೋಜನೆ 25 ವರ್ಷಗಳ ಕಾಲ ನೀವು ಸುಮಾರು 37 ಲಕ್ಷ ರೂಪಾಯಿ ಉಳಿತಾಯ ಮಾಡುತ್ತೀರಿ. ಬಡ್ಡಿಯ ಮೊತ್ತ ಸೇರಿ 1 ಕೋಟಿ ರೂಪಾಯಿ ಆಗುತ್ತದೆ. ಹಾಗಾಗಿ ತಡ ಮಾಡದೆ, ಹೂಡಿಕೆ ಮಾಡಿ.

Comments are closed.