Neer Dose Karnataka
Take a fresh look at your lifestyle.

ರವಿ ಚಂದ್ರನ್, ಜಗ್ಗೇಶ್ ನಟನೆಯ ರಾಮಕೃಷ್ಣ ಖ್ಯಾತಿಯ ನಟಿ ಲೈಲಾ ಈಗ ಹೇಗಿದ್ದಾರೆ ಗೊತ್ತಾ?? ಇವರ ಪರಿಸ್ಥಿತಿ ನೋಡಿದರೆ ನಿಜಕ್ಕೂ ಕಣ್ಣೀರು ಬರುತ್ತಾರೆ.

ನಮಸ್ಕಾರ ಸ್ನೇಹಿತರೇ ನಾವು ಸಿನಿಮಾ ಸೆಲೆಬ್ರಿಟಿಗಳ ಕುರಿತಂತೆ ತಪ್ಪಾದ ಭಾವನೆಯನ್ನು ಇಟ್ಟುಕೊಂಡಿರುತ್ತೇವೆ. ನಮ್ಮ ಪ್ರಕಾರ ಅಂದರೆ ಸಿನಿಮಾ ಪ್ರೇಕ್ಷಕರ ಪ್ರಕಾರ ಸಿನಿಮಾದಲ್ಲಿ ನಟಿಸುವ ಕಲಾವಿದರ ಜೀವನ ಚೆನ್ನಾಗಿರುತ್ತದೆ ಅವರು ಆಡಂಬರದ ಜೀವನವನ್ನು ನಡೆಸುತ್ತಾರೆ ಎಂಬುದಾಗಿ ನಾವು ಅಂದುಕೊಂಡಿರುತ್ತೇವೆ. ಆದರೆ ಕೆಲವೊಂದು ಸಿನಿಮಾ ಸೆಲೆಬ್ರಿಟಿಗಳ ಹಾಗೂ ಕಲಾವಿದರ ಜೀವನದಲ್ಲಿ ಎಷ್ಟು ಕಷ್ಟಗಳು ಇರುತ್ತವೆ ಎನ್ನುವುದರ ಅರಿವು ಕೂಡ ನಮಗೆ ಇರುವುದಿಲ್ಲ.

ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಅವರನ್ನು ನಾವು ಸುಖದಸುಪ್ಪತಿಗೆಯಲ್ಲಿ ತೇಲಾಡುತ್ತಿದ್ದಾರೆ ಎಂಬುದಾಗಿ ಎಂದುಕೊಳ್ಳುತ್ತೇವೆ. ಆದರೆ ನಿಜ ಜೀವನದಲ್ಲಿ ಅವರು ಬರುವಂತಹ ಕಷ್ಟ ಕೇವಲ ಅವರಿಗೆ ಮತ್ತು ಅವರ ಆತ್ಮೀಯರಿಗೆ ಮಾತ್ರ ತಿಳಿದಿರುತ್ತದೆ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ತನ್ನದೇ ಆದಂತಹ ಮುಗ್ಧ ನಟನೆಯ ಮೂಲಕ ಎಲ್ಲರ ಮಾನವನ್ನು ಗೆದ್ದಿದ್ದ ನಟಿ ಲೈಲಾ ಅವರ ಕುರಿತಂತೆ.

ಅಂದಿನ ಕಾಲದಲ್ಲಿ ಇವರ ನಟನೆ ಎಲ್ಲಾ ಭಾಷೆಯ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇವರ ಮುಗ್ಧ ಸೌಂದರ್ಯ ಎನ್ನುವುದು ಪ್ರತಿಯೊಬ್ಬರ ಮನಸ್ಸಿನಲ್ಲಿ ಕೂಡ ಅವರ ನಟನೆಯನ್ನು ಅಚ್ಚಳಿಯದಂತೆ ಉಳಿಯುವಂತೆ ಮಾಡಿತ್ತು. ಹಾಗಾದರೆ ಇಂದು ಅವರ ಕುರಿತಂತೆ ಸವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಮುಗ್ಧ ನಟನೆಯ ಮೂಲಕ ನಟಿ ಲೈಲಾ ರವರು ಕನ್ನಡ ಪ್ರೇಕ್ಷಕರ ಮಾನವನ ಸಂಪೂರ್ಣವಾಗಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ ಎಂದರೆ ಖಂಡಿತವಾಗಿ ತಪ್ಪಾಗಲಾರದು.

ಅದರಲ್ಲೂ ಪ್ರಮುಖವಾಗಿ ರಿಯಲ್ ಸ್ಟಾರ್ ಉಪೇಂದ್ರ ರವರ ತಂದೆಗೆ ತಕ್ಕ ಮಗ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ನವರಸ ನಾಯಕ ಜಗ್ಗೇಶ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ರಾಮಕೃಷ್ಣ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯರಲ್ಲಿ ಸಂಚಲನವನ್ನು ಸೃಷ್ಟಿಸಿದ್ದರು ನಟಿ ಲೈಲಾ. ಈ ಎರಡು ಚಿತ್ರಗಳಲ್ಲಿ ಕೂಡ ಲೈಲಾ ರವರು ಮುಗ್ಧ ಪಾತ್ರದ ಮೂಲಕ ಯಶಸ್ಸನ್ನು ಪಡೆದುಕೊಂಡಿದ್ದರು ಎನ್ನುವುದನ್ನು ವಿಶೇಷವಾಗಿ ಇಲ್ಲಿ ಉಲ್ಲೇಖಿಸಬೇಕು. ಈ ಪಾತ್ರಗಳು ಲೈಲಾ ರವರಿಗೆ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷಿತ ಗೆಲುವನ್ನು ಹಾಗೂ ಜನಪ್ರಿಯತೆ ಯನ್ನು ತಂದುಕೊಟ್ಟಿತ್ತು.

ಇದು ಇವರು ಕನ್ನಡ ಚಿತ್ರರಂಗದ ಸಿನಿಮಾ ಕರಿಯರ್ ವಿಚಾರವಾದರೆ ಇನ್ನು ಅವರ ವೈಯಕ್ತಿಕ ಜೀವನದ ಕುರಿತಂತೆ ಹೇಳುವುದಾದರೆ ಇರಾನ್ ಮೂಲದ ಮೆಹದಿ ಎನ್ನುವ ಉದ್ಯಮಿಯೊಬ್ಬರನ್ನು ಎಂಟು ವರ್ಷಗಳ ಕಾಲ ಡೇಟ್ ಮಾಡುತ್ತಾರೆ ಈ ಸಂದರ್ಭದಲ್ಲಿ ಇಬ್ಬರೂ ಕೂಡ ಲಿವಿಂಗ್ ಟುಗೆದರ್ ರಿಲೇಷನ್ಶಿಪ್ ನಲ್ಲಿ ಇರುತ್ತಾರೆ. ಅದಾದನಂತರ 2006 ರಲ್ಲಿ ಇಬ್ಬರು ಕೂಡ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಎಂಟು ವರ್ಷಗಳ ಕಾಲ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಮದುವೆ ಎನ್ನುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿರುತ್ತಾರೆ ಇದನ್ನು ನೀವು ಕೂಡ ಒಪ್ಪಿಕೊಳ್ಳುತ್ತೀರಿ.

ಮದುವೆಯಾದ ಹೊಸತರಲ್ಲಿ ಎಲ್ಲವೂ ಕೂಡ ಚೆನ್ನಾಗಿ ಇತ್ತು. ನಟಿ ಲೈಲಾ ತಮ್ಮ ಪತಿಯೊಂದಿಗೆ ದುಬೈನಲ್ಲಿ ನೆಲೆಸಿರುತ್ತಾರೆ. ಇವರಿಬ್ಬರ ಪ್ರೀತಿಯ ಫಲದಿಂದಾಗಿ ಮಗುವನ್ನು ಕೂಡ ಪಡೆದುಕೊಳ್ಳುತ್ತಾರೆ. ಆದರೆ ಕೆಲವು ವರ್ಷಗಳ ನಂತರ ಇವರಿಬ್ಬರ ಜೀವನದಲ್ಲಿ ಇವರು ಊಹಿಸಲು ಕೂಡ ಸಾಧ್ಯವಾಗದಂತಹ ವಿಚಾರಗಳು ನಡೆಯುತ್ತದೆ. ಹೌದು ನಟಿ ಲೈಲಾ ರವರ ಪತಿಯಾಗಿರುವ ಉದ್ಯಮಿ ಮೆಹದಿ ರವರ ಉದ್ಯಮದಲ್ಲಿ ಸಾಕಷ್ಟು ನಷ್ಟಗಳು ಉಂಟಾಗಿ ಅವರು ಬೀದಿಗೆ ಬರುವಂತಹ ಪರಿಸ್ಥಿತಿ ಕೂಡ ಉಂಟಾಗುತ್ತದೆ.

ಆದರೆ ನಂತರ ದುಬೈನಲ್ಲಿ ನೆಲೆಸಿರುವ ಭಾರತೀಯರ ನೆರವಿನಿಂದಾಗಿ ಇವರು ಒಂದು ಉತ್ತಮ ಜೀವನವನ್ನು ಅಥವಾ ಸಮಾಧಾನಕರ ಜೀವನವನ್ನು ಇಂದು ದುಬೈನಲ್ಲಿ ನಡೆಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮ ಮುಗ್ಧ ನಟನೆ ಹಾಗೂ ಸೌಂದರ್ಯದ ಮೂಲಕ ಎಲ್ಲರ ಮನವನ್ನು ಗೆದ್ದು ಜನಪ್ರಿಯ ನಟಿಯಾಗಿದ್ದ ಲೈಲಾ ರವರು ಇಂದು ವಿದೇಶದಲ್ಲಿ ಇಂತಹ ಪರಿಸ್ಥಿತಿಗೆ ಬಂದಿರುವುದು ನಿಜಕ್ಕೂ ಕೂಡ ವಿಷಾದನೀಯ ವಿಚಾರವೆಂದರೆ ತಪ್ಪಾಗಲಾರದು.

ಅದಕ್ಕೆ ಹೇಳುವುದು ಪುಸ್ತಕದ ಹೊರ ಮುಖವನ್ನು ನೋಡಿ ಒಳಗೇನಿದೆ ಎಂದು ನಿರ್ಧರಿಸುವುದು ತಪ್ಪು ಎನ್ನುವುದಾಗಿ. ಸಿನಿಮಾ ನಟ-ನಟಿಯರು ಎಂದಾಕ್ಷಣ ನಮ್ಮ ಜನರಲ್ಲಿ ಉತ್ತಮ ಜೀವನವನ್ನು ನಡೆಸುತ್ತಾರೆ ಅವರಿಗೇನು ಕಷ್ಟ ಎನ್ನುವುದಾಗಿ ಅಂದುಕೊಳ್ಳುತ್ತಾರೆ. ಆದರೆ ಸಿನಿಮಾದಲ್ಲಿ ಯಶಸ್ವಿಯಾದ ನಂತರವೂ ಕೂಡ ಇಂತಹ ಕಷ್ಟಗಳನ್ನು ಅವರು ಎದುರಿಸಬೇಕಾಗುತ್ತದೆ ಎನ್ನುವುದನ್ನು ಈ ಕಥೆಯ ಮೂಲಕ ನೀವು ಅರಿತುಕೊಳ್ಳಬಹುದು ಎಂಬುದಾಗಿ ಅರ್ಥೈಸಿಕೊಳ್ಳುತ್ತೇವೆ. ಈ ವಿಚಾರದ ಮೂಲಕ ನಿಮಗೆ ಅನಿಸಿದ್ದು ಏನು ಎಂಬುದು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.