Neer Dose Karnataka
Take a fresh look at your lifestyle.

ಕನ್ನಡ ಜಿಂಕೆ ಮರಿ ಎಂದೇ ಖ್ಯಾತಿಯಾಗಿದ್ದ ಶ್ವೇತಾ ರವರು ಮಿಂಚಿ ಮರೆಯಾದ ಬಳಿಕ ಈಗ ಏನು ಮಾಡುತ್ತಿದ್ದಾರೆ ಗೊತ್ತೇ??ಅವರ ಬದುಕಿನಲ್ಲಿ ಏನಾಯಿತು ಗೊತ್ತೇ??

167

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಒಂದು ಚಿತ್ರ ಯಶಸ್ಸುಕಂಡ ಮೇಲೆ ಆ ಸಿನಿಮಾದಲ್ಲಿ ನಾಯಕನಟ ಹಾಗೂ ನಾಯಕ ನಟಿಯಾಗಿ ನಟಿಸಿದವರಿಗೆ ಚಿತ್ರರಂಗದಲ್ಲಿ ಬೇಡಿಕೆ ಹಾಗೂ ಹೊಸ ಹೊಸ ಚಿತ್ರಗಳ ಆಫರ್ ಹೆಚ್ಚಾಗಿ ಬರಲು ಆರಂಭವಾಗುತ್ತದೆ. ಹೀಗಾಗಿ ಆ ಚಿತ್ರದಲ್ಲಿ ನಟಿಸಿರುವ ಕಲಾವಿದರು ಚಿತ್ರರಂಗದಲ್ಲಿ ಹೆಚ್ಚಿನ ಸಮಯಗಳ ಕಾಲ ನೆಲೆಸಿರುತ್ತಾರೆ. ಆದರೆ ಇಂದು ನಾವು ಹೇಳಲು ಹೊರಟಿರುವ ನಟಿಯ ಕುರಿತಂತ ಕೇಳಿದರೆ ಖಂಡಿತವಾಗಿ ನಿಮಗೆ ಆಶ್ಚರ್ಯ ಆಗುತ್ತದೆ.

ಹೌದು ಈ ನಟಿ ಕನ್ನಡ ಚಿತ್ರರಂಗದಲ್ಲಿ ನಟಿಸಿದ ಮೊದಲ ಚಿತ್ರದಲ್ಲೇ ಸೂಪರ್ ಹಿಟ್ ಸಿನಿಮಾವನ್ನು ನೀಡುತ್ತಾಳೆ. ಆದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ವರ್ಷಗಳ ಕಾಲ ನೆಲೆ ನಿಲ್ಲಲು ಸಾಧ್ಯವಾಗುವುದಿಲ್ಲ. ಇದು ನಿಜಕ್ಕೂ ವಿಚಿತ್ರ ಎಂದು ಅನಿಸಿದರೂ ಕೂಡ ನಿಜವಾದಂತಹ ವಿಚಾರ. ಅಷ್ಟಕ್ಕೂ ಇಂತಹ ನತದೃಷ್ಟ ನಟಿ ಯಾರು ಎನ್ನುವುದಾಗಿ ನೀವು ಕೇಳಬಹುದು. ಈ ಕುರಿತಂತೆ ಕೇಳಿದರೆ ಕೂಡ ನೀವು ಆಶ್ಚರ್ಯಪಟ್ಟು ಮೂಗಿನ ಮೇಲೆ ಬೆರಳಿಡುತ್ತೀರಿ. ಯಶಸ್ವಿ ಚಿತ್ರದಲ್ಲಿ ನಟಿಸಿದ ಮೇಲೂ ಕೂಡ ಅವಕಾಶಗಳನ್ನು ಪಡೆಯುವಂತಹ ನಟಿಯೆಂದರೆ ಅದು ಜಿಂಕೆಮರಿ ಖ್ಯಾತಿಯ ನಂದಿತಾ ಶ್ವೇತಾ.

ಗೆಳೆಯರೇ ನಾವು ಮಾತನಾಡುತ್ತಿರುವುದು ಕನ್ನಡ ಚಿತ್ರರಂಗದ ಖ್ಯಾತ ನಟ ಲೂಸ್ ಮಾದ ಯೋಗಿ ನಟನೆಯ ಸೂಪರ್ ಹಿಟ್ ಸಿನಿಮಾ ನಂದ ಲವ್ಸ್ ನಂದಿತಾ ಚಿತ್ರದ ನಾಯಕನಟಿ ಆಗಿರುವ ನಂದಿತಾ ಪಾತ್ರದಾರಿ ಶ್ವೇತಾ ರವರ ಕುರಿತಂತೆ. ಶ್ವೇತಾ ರವರಿಗೆ ನಂದಿತ ಪಾತ್ರ ಯಾವ ಮಟ್ಟಿಗೆ ಯಶಸ್ಸನ್ನು ತಂದುಕೊಟ್ಟಿತು ಎಂದರೆ ಎಲ್ಲರೂ ಅವರನ್ನು ನಂದಿತಾ ಶ್ವೇತ ಎನ್ನುವುದಾಗಿ ಕರೆಯಲು ಆರಂಭಿಸುತ್ತಾರೆ. ಮೊದಲ ಚಿತ್ರದಲ್ಲಿ ಕನ್ನಡ ಚಿತ್ರರಂಗದಲ್ಲಿ ಶುಭಾರಂಭವನ್ನು ಮಾಡಿದರು ನಟಿ ಶ್ವೇತಾ.

ಒಂದು ಲೆಕ್ಕದಲ್ಲಿ ಹೇಳುವುದಾದರೆ ಶ್ವೇತಾ ರವರಿಗೆ ಇದು ಕನಸಿನ ಸಿನಿಮಾವಾಗಿ ಮಾರ್ಪಟ್ಟಿತ್ತು. ನಾಯಕನಟ ಹೊಸಬನಾಗಿದ್ದ ಕೂಡ ಸಿನಿಮಾ ಎನ್ನುವುದು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿ ಇಬ್ಬರಿಗೂ ಕೂಡ ಹೆಸರನ್ನು ತಂದುಕೊಟ್ಟಿತು. ಅದರಲ್ಲೂ ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯರ ಕೊರತೆಯಿತ್ತು. ಈ ಚಿತ್ರದ ಯಶಸ್ಸಿನ ನಂತರ ಶ್ವೇತಾ ರವರಿಗೆ ಬೇಡಿಕೆಯನ್ನು ವುದು ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗ ಬೇಕಾಗಿತ್ತು. ಆದರೆ ಆಶ್ಚರ್ಯ ಎಂಬಂತೆ ಶ್ವೇತಾ ರವರಿಗೆ ಯಾವುದೇ ಅವಕಾಶಗಳು ಅದಾದನಂತರ ಹುಡುಕಿಕೊಂಡು ಬರಲಿಲ್ಲ.

ನಟಿ ಶ್ವೇತಾ ರವರು ನಂದ ಲವ್ಸ್ ನಂದಿತಾ ಸಿನಿಮಾದಲ್ಲಿ ನಟಿಸಿದ ನಂತರ ಆ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಆದರೆ ಕನ್ನಡ ಚಿತ್ರರಂಗದ ದುರದೃಷ್ಟ ಎಂದು ಹೇಳಬಹುದು ಈ ಪ್ರತಿಭಾನ್ವಿತ ನಟಿ ಅದಾದ ನಂತರ ಯಾವುದೇ ಕನ್ನಡ ಸಿನಿಮಾಗಳಲ್ಲಿ ನಟಿಸಲಿಲ್ಲ. ನಂದ ಲವ್ಸ್ ನಂದಿತಾ ಸಿನಿಮಾದ ಮೂಲಕ ಹಲವಾರು ಅಭಿಮಾನಿಗಳನ್ನು ಕೂಡ ಅಂದಿನ ಕಾಲದಲ್ಲಿ ಶ್ವೇತಾ ರವರು ಸಂಪಾದಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಮೊದಲ ಸಿನಿಮಾದಲ್ಲಿ ಕರಿಯರ್ ಚೇಂಜಿಂಗ್ ಸಿನಿಮಾದಲ್ಲಿ ನಟಿಸಿದರು ಕೂಡ ಅದು ಅವರ ಸಿನಿಮಾ ಕರಿಯರ್ ಅನ್ನು ಕನ್ನಡ ಚಿತ್ರರಂಗದಲ್ಲಿ ಬೆಳೆಸಲು ಸಾಧ್ಯವಾಗಲಿಲ್ಲ ಎನ್ನುವುದು ನಿಜಕ್ಕೂ ಕೂಡ ವಿಷಾದನೀಯ ವಿಚಾರ.

ಒಟ್ಟಾರೆ ಶ್ವೇತಾ ರವರ ಸಿನಿಮಾ ಕರಿಯರ್ ನೋಡುವುದಾದರೆ ಇದುವರೆಗೂ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪರಭಾಷೆಗಳಲ್ಲಿ ಕೂಡ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಯುವ ಉದಯೋನ್ಮುಖ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡು ಭರವಸೆಯನ್ನು ಮೂಡಿಸಿದ್ದ ನಟಿ ಶ್ವೇತಾ ರವರು ಈಗ ಏನು ಮಾಡುತ್ತಿದ್ದಾರೆ ಎನ್ನುವುದಾಗಿ ನೀವು ಗೊಂದಲದಲ್ಲಿ ಇರಬಹುದು. ಬನ್ನಿ ನಟಿ ಶ್ವೇತಾ ರವರು ಏನು ಮಾಡುತ್ತಿದ್ದಾರೆ ಹೇಗಿದ್ದಾರೆ ಎನ್ನುವುದನ್ನ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾಗಿರುವ ಸಲ್ಮಾನ್ ಖಾನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ದಬಾಂಗ್-3 ಸಿನಿಮಾದಲ್ಲಿ ಕಂಠದಾನ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ರವರ ಮೈ ನೇಮ್ ಇಸ್ ಕಿರಾತಕ ಸಿನಿಮಾದಲ್ಲಿ ಶ್ವೇತಾ ರವರು ಕಾಣಿಸಿಕೊಳ್ಳಬೇಕಾಗಿತ್ತು ಆದರೆ ಹಲವಾರು ಕಾರಣಗಳಿಂದಾಗಿ ಸಿನಿಮಾ ಅರ್ಧದಲ್ಲಿ ನಿಂತುಹೋಗಿದೆ. ನಿಂತು ಹೋಗಿದೆ ಎಂದು ಹೇಳುವುದಕ್ಕಿಂತ ಹೆಚ್ಚಾಗಿ ಸಿನಿಮಾವನ್ನು ಕೈಬಿಡಲಾಗಿದೆ ಎಂದು ಹೇಳಬಹುದಾಗಿದೆ.

ಹೀಗಾಗಿ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುವಂತಹ ಯೋಜನೆಯನ್ನು ಮಾಡಿದ್ದ ಶ್ವೇತಾ ರವರಿಗೆ ಸ್ವಲ್ಪ ತಡೆ ಉಂಟಾಗಿದೆ ಎಂದು ಹೇಳಬಹುದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಶ್ವೇತಾ ರವರಿಗೆ ಸಹಸ್ರಾರು ಅಭಿಮಾನಿಗಳು ಅಲ್ಲಿ ಕೂಡ ಜನಪ್ರಿಯತೆಯನ್ನು ಹೊಂದಿದ್ದಾರೆ. ಆದರೆ ಒಬ್ಬ ನಟಿಯಾಗಿ ಅವರಿಗೆ ಸಿನಿಮಾದಲ್ಲಿ ನಟಿಸುವ ಮೂಲಕ ತಮ್ಮ ನಟನೆಯ ಮೂಲಕ ಅಭಿಮಾನಿಗಳನ್ನು ಹೊಂದುವುದು ಇಷ್ಟ ವಾಗಿರುತ್ತದೆ. ಹೀಗಾಗಿ ಒಳ್ಳೆಯ ಅವಕಾಶ ಹಾಗೂ ಒಳ್ಳೆಯ ಸಿನಿಮಾಗಾಗಿ ಕಾಯುತ್ತಿದ್ದಾರೆ. ನಟಿ ಶ್ವೇತಾ ರವರ ಕಂಬ್ಯಾಕ್ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave A Reply

Your email address will not be published.