Neer Dose Karnataka
Take a fresh look at your lifestyle.

ಇಂದಿಗೂ ಕೂಡ ಬಗೆಹರಿಸಲಾದ ನಟಿಯರ ಸಾವಿನ ಪ್ರಕರಣಗಳು ಯಾವ್ಯಾವು ಗೊತ್ತೇ?? ಈ ಹೀರೊಯಿನ್ ಗಳು ಹೇಗೆ ಸತ್ತಿದ್ದಾರೆ ಗೊತ್ತೇ??

83

ಚಿತ್ರರಂಗವನ್ನು ಗ್ಲಾಮರ್ ಜಗತ್ತು ಎನ್ನುತ್ತಾರೆ. ಆದರೆ, ಆ ವರ್ಣರಂಜಿತ ಜಗತ್ತಿನಲ್ಲಿ ಕೆಲವು ದುರಂತ ಕಥೆಗಳಿವೆ. ಹಲವು ರಹಸ್ಯಗಳೂ ಇವೆ. ಅದರಲ್ಲು ನಾಯಕಿಯರ ವಿಷಯದಲ್ಲಿ ಈ ನಿಗೂಢತೆಗಳು ತುಂಬಾ ಹೆಚ್ಚು. ನಟಿಯರ್ಜ್ ಕಾಲಕಾಲಕ್ಕೆ ಸೆನ್ಸಿಟಿವ್ ಆಗುತ್ತಾರೆ ಹಾಗೂ ಕಾಲಾನಂತರದಲ್ಲಿ ಕಣ್ಮರೆಯಾಗುತ್ತಾರೆ. ಅದರಲ್ಲಿಯು ಡೆತ್ ಮಿಸ್ಟರೀಸ್ ಬಹಳ ವಿಶೇಷ. ವರ್ಷಗಳು ಕಳೆದರೂ, ಆ ನಿಗೂಢಗಳು ದೂರವಾಗುವುದಿಲ್ಲ. ಏಕೆ? ಅಷ್ಟೇ.. ಬಣ್ಣದ ಲೋಕದ ಕರಾಳ ಮುಖ ಚಿತ್ರರಸಿಕರಲ್ಲಿ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಹೊಸ ಪ್ರತಿಭೆಗೆ ನಟಿಯಾಗಿ ಉತ್ತಮ ಭವಿಷ್ಯವಿದೆ ಎಂದು ಅಂದುಕೊಳ್ಳುವ ಜನರಿಗೆ, ಕೆಲವು ಸುಂದರಿಯರ ಸಾವಿನ ರಹಸ್ಯಗಳ ಬಗ್ಗೆ ಇಂದು ತಿಳಿಸುತ್ತೇವೆ..

ನಟಿ ಪ್ರತ್ಯೂಷಾಗೆ ಏನಾಯಿತು? ಪ್ರತ್ಯೂಷಾ ಕೊಲೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಸಂಚಲನವಾಗಿತ್ತು. ಆಕೆ ಹೇಗೆ ಸತ್ತರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಉದಯ್ ಕಿರಣ್ ಅಭಿನಯದ ಕಲುಸುಕನಿ ಚಿತ್ರದಲ್ಲಿ ಮಾರದಲಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅದಕ್ಕೂ ಮೊದಲು ಹಿರಿಯ ನಟ ಮೋಹನ್ ಬಾಬು ಅಭಿನಯದ ‘ರಾಯುಡು’ ಸಿನಿಮಾದಲ್ಲು ಪ್ರತ್ಯೂಷಾ ನಟಿಸಿದ್ದರು. ತೇಜಾ ನಿರ್ದೇಶನದ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದೇನೆ ಎಂಬ ಪ್ರಚಾರದ ವೇಳೆ ಪ್ರತ್ಯೂಷಾ ಕೊಲೆಯಾದರು. ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂಬ ವರದಿಗಳು ಬಂದಿದ್ದವು. ಈ ಕೊಲೆಯಲ್ಲಿ ಕೆಲ ರಾಜಕೀಯ ಮುಖಂಡರ ವಾರಸುದಾರರಿಗೆ ಸಂಬಂಧವಿದೆ ಎಂಬ ದೊಡ್ಡ ವದಂತಿ ಹಬ್ಬಿತ್ತು. ತನ್ನ ಮಗಳ ಸಾವಿಗೆ ಕಾರಣರಾದವರನ್ನು ಶಿಕ್ಷಿಸಲು ಪ್ರತ್ಯೂಷಾ ತಾಯಿ ವರ್ಷಗಳ ಕಾನೂನು ಹೋರಾಟ ಮಾಡಿದ ನಂತರ ಸುಮ್ಮನಾದರು. ಪ್ರತ್ಯೂಷಾ ಕೊಲೆಯಾಗದೇ ಇದ್ದಿದ್ದರೆ ತೆಲುಗು ಚಿತ್ರರಂಗಕ್ಕೆ ಒಬ್ಬ ಪ್ರತಿಭಾವಂತ ನಾಯಕಿ ಸಿಗುತ್ತಿದ್ದಳು.

ಭಾರ್ಗವಿ ನಗಿಸುತ್ತಲೇ ಮಾಯವಾಗಿಬಿಟ್ಟರು :- ನ್ಯಾಚುರಲ್ ಸ್ಟಾರ್ ನಾನಿ ನಾಯಕನಾಗಿ ನಟಿಸಿ, ಇಂದ್ರಗಂಟಿ ಮೋಹನಕೃಷ್ಣ ನಿರ್ದೇಶನದ ಚಿತ್ರ ‘ಅಷ್ಟ ಚೆಮ್ಮಾ’. ಇದರಲ್ಲಿ ಶ್ರೀನಿವಾಸ್ ಅವರಿಗೆ ಜೋಡಿಯಾಗಿ ನಟಿಸಿದ ಮುದ್ದು ನಟಿ ನೆನಪಿದೆಯಾ? ಆಕೆಯ ಹೆಸರು ಭಾರ್ಗವಿ. ಏನಾಯಿತೋ ಗೊತ್ತಿಲ್ಲ, ಭಾರ್ಗವಿ ಕೊಲೆಯಾದರು. ಆ ರೀತಿ ಮಾಡಿದ್ದು, ಆಕೆಯನ್ನು ಪ್ರೀತಿಸಿದ ವ್ಯಕ್ತಿ ಎಂದು ಹೇಳುತ್ತಾರೆ.. ಆದರೆ, ಆತ ಯಾಕೆ ಕೊಂದ? ಎಂಬುದು ಇನ್ನೂ ನಿಗೂಢ. ಚಿತ್ರರಂಗದಲ್ಲಿ ಮಿಂಚುವ ಕನಸಿನ ಜೊತೆಗೆ ಚಿತ್ರರಂಗಕ್ಕೆ ಕಾಲಿಟ್ಟ ಭಾರ್ಗವಿ, ಕನಸು ನನಸಾಗದೆ ಇಹಲೋಕ ತ್ಯಜಿಸಿರುವುದು ಹಲವರ ಬೇಸರಕ್ಕೆ ಕಾರಣವಾಗಿದೆ. ಟಿವಿಯಲ್ಲಿ ‘ಅಷ್ಟ ಚೆಮ್ಮಾ’ ಸಿನಿಮಾ ಬಂದಾಗಲೆಲ್ಲಾ ಜನರು ಭಾರ್ಗವಿಯ ಬಗ್ಗೆ ವಿಶೇಷವಾಗಿ ಮಾತನಾಡುತ್ತಾರೆ. ಆ ಸಿನಿಮಾದ ಮೂಲಕ ಪ್ರೇಕ್ಷಕರ ಹೃದಯದಲ್ಲಿ ಆಕೆ ಮೂಡಿಸಿದ ಛಾಪು ಅದು.

ಜಿಯಾ ಖಾನ್, ಹೀಗೆ ಬಂದು ಹಾಗೆ ಮಾಯವಾದರು :- ಬಾಲಿವುಡ್ ನಟಿ ಜಿಯಾ ಖಾನ್ ನೆನಪಿದೆಯಾ? ಅಮಿತಾಬ್ ಬಚ್ಚನ್ ಅಭಿನಯದ ‘ನಿಶ್ಶಬ್ದ’ ಚಿತ್ರದಲ್ಲಿ ನಟಿಸಿದ್ದರು. ಕೆಲವೇ ಚಿತ್ರಗಳನ್ನು ಮಾಡಿದರು, ಅಷ್ಟರಲ್ಲಿ ಆಕೆಯ ಜೀವನ ಮುಗಿಯಿತು. ಪೊಲೀಸ್ ದಾಖಲೆಗಳ ಪ್ರಕಾರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಯಾರೋ ಆಕೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಹಾಗೆ ಮಾಡಿದರು ಎಂಬ ಆರೋಪವಿದೆ. ಜಿಯಾ ಖಾನ್ ಅವರ ದೇಹದ ಮೇಲಿನ ಗಾಯಗಳು ಆತ್ಮಹತ್ಯೆಯಲ್ಲ, ಕೊಲೆ ಎಂಬುದಕ್ಕೆ ಸಾಕ್ಷಿಯಾಗಿ ಅವರ ಕುಟುಂಬ ಸದಸ್ಯರು ಇನ್ನೂ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಆದರೆ ನ್ಯಾಯ ಸಿಗಲಿಲ್ಲ.

ಮೇಲಿನವು ಕೆಲವು ಮಾತ್ರ. ಇನ್ನು ಹೇಳುವುದಾದರೆ, ಅಂತಹ ಅನೇಕ ವಿಷಯಗಳಿವೆ. ಸಿನಿಮಾ ನಟರನ್ನು ಸ್ಟಾರ್ ಎಂದು ಹೋಲಿಸುತ್ತೇವೆ, ಬೆಳ್ಳಿತೆರೆಯಲ್ಲಿ ಮಿಂಚಬೇಕಾದ ಕೆಲವು ತಾರೆಯರು, ಚಿಕ್ಕ ವಯಸ್ಸಿನಲ್ಲಿ ಪ್ರಾಣ ಕಳೆದುಕೊಂಡರು. ಯಾಕೆ ಎನ್ನುವುದು ಇಂದಿಗೂ ನಿಗೂಢ. ಈ ರಹಸ್ಯಗಳನ್ನು ಪರಿಹರಿಸುವ ಸಾಧ್ಯತೆಗಳು ಬಹಳ ಕಡಿಮೆ.

Leave A Reply

Your email address will not be published.