Neer Dose Karnataka
Take a fresh look at your lifestyle.

ರಾಜಮನೆತನದಿಂದ ಬಂದು ಇಂದು ನಟಿಯರಾಗಿ ಮಿಂಚುತ್ತಿರುವ ಭಾರತೀಯ ನಟಿಯರು ಯಾರ್ಯಾರು ಗೊತ್ತೇ??

ಇಂದಿನ ಕಾಲದಲ್ಲಿ ಪ್ರತಿಯೊಬ್ಬ ಮನುಷ್ಯನು ಎರಡು ಜೀವನಗಳನ್ನು ಜೀವಿಸುತ್ತಾನೆ. ಮೊದಲು ಆತ ನೋಡುವ ಜಗತ್ತು, ಎರಡನೆಯದು ನಿಜ ಜೀವನ. ಅದೇ ರೀತಿ, ನಮ್ಮ ಬಾಲಿವುಡ್‌ ನಲ್ಲೂ ಅನೇಕ ತಾರೆಯರಿದ್ದಾರೆ, ಅವರ ನಿಜ ಜೀವನವು ತೆರೆಯ ಮೇಲೆ ನೋಡುವ ಜೀವನಕ್ಕಿಂತ ತುಂಬಾ ಭಿನ್ನವಾಗಿದೆ. ಅಂತಹ ಕೆಲವು ತಾರೆಯರ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಕ್ಯಾಮೆರಾ ಮುಂದೆ ಅವರ ಕೆಲವು ರೂಪಗಳನ್ನು ನೀವು ನೋಡಿದ್ದರೂ ಸಹ, ಅವರ ನಿಜ ಜೀವನದ ಬಗ್ಗೆ ತಿಳಿದಿದ್ದರೆ, ನಿಮಗೂ ಆಶ್ಚರ್ಯವಾಗುತ್ತದೆ. ಸರಳವಾಗಿ ಹೇಳುವುದಾದರೆ, ಈ ನಟಿಯರು ತಮ್ಮ ವೈಯಕ್ತಿಕ ಜೀವನದಲ್ಲಿ ಪರದೆಯ ಮೇಲಿನ ರಾಣಿಗಿಂತ ಕಡಿಮೆಯಿಲ್ಲ. ನಿಜ ಜೀವನದಲ್ಲಿ, ಈ ನಟಿಯರು ನೇರವಾಗಿ ರಾಜಮನೆತನದ ಕುಟುಂಬಗಳಿಗೆ ಸಂಬಂಧಿಸಿದವರಾಗಿದ್ದಾರೆ. ಹಾಗಾದರೆ ಈ ನಟಿಯರ ಬಗ್ಗೆ ತಿಳಿಸುತ್ತೇವೆ ನೋಡಿ..

ಕಿರಣ್ ರಾವ್ :- ಕಿರಣ್ ರಾವ್ ಬಗ್ಗೆ ಮಾತನಾಡುವುದಾದರೆ, ಅವರು ನಟಿ ಅಲ್ಲ. ಆದರೆ ಕಿರಣ್ ಬಾಲಿವುಡ್ ನಟ ಆಮೀರ್ ಖಾನ್ ಅವರ ಪತ್ನಿ, ಜೊತೆಗೆ ಈಕೆ ಬರಹಗಾರ್ತಿ, ನಿರ್ಮಾಪಕಿ ಹಾಗೂ ನಿರ್ದೇಶಕಿ ಆಗಿ ಬಿ ಟೌನ್‌ನಲ್ಲಿ ಇವರದ್ದು ಚಿರಪರಿಚಿತ ಹೆಸರು. ಕಿರಣ್ ರಾವ್ ನಿಜ ಜೀವನದಲ್ಲಿ ರಾಜಮನೆತನಕ್ಕೆ ಸೇರಿದವರು ಎಂದು ನಂಬಲು ಕಷ್ಟ. ಕಿರಣ್ ರಾವ್ ಅವರ ಜನ್ಮಸ್ಥಳವು ತೆಲಂಗಾಣದ ಮಹಬೂಬ್‌ ನಗರದಲ್ಲಿರುವ ವನಪರ್ತಿ ರಾಜಮನೆತನದಲ್ಲಿದೆ ಎನ್ನುವುದು ಅಸಲಿ ವಿಚಾರ.

ಅದಿತಿ ರಾವ್ ಹೈದಾರಿ :- ಅದಿತಿ ರಾವ್ ಹೈದರಿ ತುಂಬಾ ಸಕ್ರಿಯವಾಗಿರುವ ಬಾಲಿವುಡ್ ನಟಿ. ನಿಜ ಜೀವನದಲ್ಲಿ ಅದಿತಿ ಕಿರಣ್ ರಾವ್ ಅವರ ಸೋದರ ಸಂಬಂಧಿ. ಅಷ್ಟೇ ಅಲ್ಲದೆ, ಅದಿತಿ ಮಾಜಿ ಅಸ್ಸಾಂ ಗವರ್ನರ್ ಮೊಹಮ್ಮದ್ ಸಲೇಹ್ ಅಕ್ಬರ್ ಹೈದಾರಿ ಅವರ ಮೊಮ್ಮಗಳು. ಅಲ್ಲದೆ ಅವರ ತಾಯಿಯ ಅಜ್ಜ ಜೆ. ರಾಮೇಶ್ವರಂ ವನಪರ್ತಿಯ ರಾಜನಾಗಿದ್ದರು. ಅದಿತಿ ರಾವ್ ಹೈದಾರಿ ಅವರು 3 ರಾಜಮನೆತನದವರೊಂದಿಗೆ ಸಂಬಂಧವ ಹೊಂದಿದ್ದಾರೆ.

ಭಾಗ್ಯಶ್ರೀ :- ಸಲ್ಮಾನ್ ಖಾನ್ ಜೊತೆ ಮೈನೆ ಪ್ಯಾರ್ ಕಿಯಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಭಾಗ್ಯಶ್ರೀ ಕೂಡ ರಾಜಮನೆತನಕ್ಕೆ ಸೇರಿದವರು. ಇವರು ಮಹಾರಾಷ್ಟ್ರದ ಸಾಂಗ್ಲಿ ರಾಜಮನೆತನದೊಂದಿಗೆ ನಿಜ ಜೀವನದ ಸಂಬಂಧವನ್ನು ಹೊಂದಿದ್ದಾರೆ. ಭಾಗ್ಯಶ್ರೀ ಶ್ರೀಮಂತ್ ರಾಜಾ ವಿಜಯ್ ಸಿಂಗ್ ರಾವ್ ಮಧೋರಾವ್ ಪಟವರ್ಧನ್ ಅವರ ಮಗಳು. ಇಷ್ಟೇ ಅಲ್ಲ, ಆಕೆಯ ಮನೆತನದ ಹೆಸರು ಶ್ರೀಮಂತ್ ರಾಜಕುಮಾರಿ ಭಾಗ್ಯಶ್ರೀ ರಾಜೇ ಪಟವರ್ಧನ್. ಈಕೆ ಅನೇಕ ವರ್ಷಗಳ ಹಿಂದೆ ಹಿಮಾಲಯ ದಾಸಾನಿ ಅವರನ್ನು ವಿವಾಹವಾದ ನಂತರ ತಮ್ಮ ಮನೆಯಲ್ಲಿ ನೆಲೆಸಿದ್ದರು.

ಸೋನಲ್ ಚೌಹಾಣ್ :- ಸೋನಾಲ್ ಚೌಹಾಣ್ ಬಾಲಿವುಡ್ ನಲ್ಲಿ ಜನ್ನತ್ ಗರ್ಲ್ ಎಂದೇ ಜನಪ್ರಿಯ. ಅವರು ಇಮ್ರಾನ್ ಹಶ್ಮಿ ಜೊತೆಗಿನ ಜನ್ನತ್ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದರ ನಂತರ ಆಕೆ ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೋನಲ್ ಅವರ ನಿಜ ಜೀವನವು ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ರಾಜಮನೆತನದ ರಜಪೂತ ಕುಟುಂಬಕ್ಕೆ ನೇರವಾಗಿ ಸಂಬಂಧಿಸಿದೆ.

ಸೋಹಾ ಅಲಿ ಖಾನ್ :- ನಿಜ ಜೀವನದಲ್ಲಿ, ಸೋಹಾ ಅಲಿ ಖಾನ್ ರಾಜಮನೆತನಕ್ಕೆ ಸೇರಿದವರು. ಸೋಹಾ ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಭೋಪಾಲ್ ನವಾಬರಾಗಿದ್ದರು. ಸೋಹಾ ಅವರ ಅಜ್ಜ ಇಫ್ತಿಕರ್ ಅಲಿ ಖಾನ್ ಎಂಟನೇ ಪಟೌಡಿ ಆಗಿದ್ದರು. ಅದರ ನಂತರ ಅವರ ತಂದೆ ಮತ್ತು ಈಗ ಅವರ ಸಹೋದರ ಸೈಫ್ ಅಲಿ ಖಾನ್ ಅವರು ಬಾಲಿವುಡ್ ನಟರೂ ಆಗಿದ್ದಾರೆ.

ರಿಯಾ ಸೇನ್ – ರೈಮಾ ಸೇನ್ :- ರಿಯಾ ಸೇನ್ ಮತ್ತು ರೈಮಾ ಸೇನ್ ಅವರ ಸಂಬಂಧಗಳು ರಾಜಮನೆತನದವರೊಂದಿಗೆ ಇದ್ದವು. ಅವರ ತಾಯಿ ನಟಿ ಮುನ್ಮುನ್ ಸೇನ್ ಕೂಡ ರಾಜಮನೆತನದಿಂದ ಬಂದವರು. ಅವರ ತಂದೆ ಭರತ್ ದೇವ್ ವರ್ಮಾ ತ್ರಿಪುರಾ ರಾಜಮನೆತನದ ಪ್ರಮುಖ ಸದಸ್ಯ ಆಗಿದ್ದವರು. ಅಲ್ಲದೆ ಆಕೆಯ ಅಜ್ಜಿ ಕೂಚ್ ಬೆಹರ್ ನ ರಾಜಕುಮಾರಿ. ಇವರಿಬ್ಬರು ಹಲವು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Comments are closed.