Neer Dose Karnataka
Take a fresh look at your lifestyle.

ಒಂದು ಕಾಲದ ಖ್ಯಾತ ಹಾಸ್ಯ ನಟ ಸಿಹಿ ಕಹಿ ಚಂದ್ರು ರವರ ಕನಸಿನ ಮನೆ ಹೇಗಿದೆ ಗೊತ್ತೇ?? ಐಷಾರಾಮಿ ಮನೆ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿ ನಟಿಸಿರುವಂತಹ ಹಲವಾರು ಕಲಾವಿದರು ಇದ್ದಾರೆ. ಕೇವಲ ಪ್ರಮುಖ ಪಾತ್ರದಲ್ಲಿ ನಟಿಸಿದವರು ಮಾತ್ರವಲ್ಲದೆ ಹಾಸ್ಯ ಪಾತ್ರದಲ್ಲಿ ನಟಿಸಿದವರು ಕೂಡ ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹಾಗೆ ಉಳಿದುಕೊಂಡಿದ್ದಾರೆ. ಅಂಥವರಲ್ಲಿ ನಟ ಸಿಹಿಕಹಿ ಚಂದ್ರು ಕೂಡ ಒಬ್ಬರು. ಮೂಲತಹ ದಾವಣಗೆರೆಯವರು ಆಗಿರುವ ಸಿಹಿಕಹಿ ಚಂದ್ರು ರವರು ಮೊದಲಿಗೆ ದೂರದರ್ಶನದಲ್ಲಿ ಪ್ರಾರಂಭವಾಗುತ್ತಿದ್ದಂತ‌ಹ ಸಿಹಿ ಕಹಿಯನ್ನು ಧಾರವಾಹಿಯಲ್ಲಿ ನಟಿಸುವ ಮೂಲಕ ಮನೋರಂಜನೆ ಕ್ಷೇತ್ರಕ್ಕೆ ಕಾಲಿಡುತ್ತಾರೆ. ಇದೇ ಧಾರವಾಹಿ ಮೂಲಕ ಅವರ ಪತ್ನಿಯಾಗಿರುವ ಗೀತಾ ರವರ ಪರಿಚಯ ಕೂಡ ಅವರಿಗೆ ಆಗುತ್ತದೆ. ಅವರನ್ನು ಕೂಡ ಸಿಹಿಕಹಿ ಗೀತಾ ಎನ್ನುವುದಾಗಿ ಕರೆಯುತ್ತಾರೆ. ಇಬ್ಬರು ಕೂಡ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಒಟ್ಟಾಗಿ ಹಲವಾರು ಧಾರವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇಬ್ಬರು ಕೂಡ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ 1990 ರಂದು ಮದುವೆಯಾಗುತ್ತಾರೆ. ಮದುವೆ ಆದ ಮೇಲೆ ಕೂಡ ನಟನೆಯನ್ನು ಮುನ್ನಡೆಸಿಕೊಂಡು ಹೋಗುತ್ತಾರೆ. ಸಿಹಿಕಹಿ ಚಂದ್ರು ರವರು ಯಾವುದೇ ಪಾತ್ರವನ್ನು ನೀಡಿದರು ಕೂಡ ನಿರ್ವಹಿಸಬಲ್ಲ ಅಂತಹ ಚಾತುರ್ಯತೆ ಹೊಂದಿರುವಂತಹ ಪ್ರತಿಭಾನ್ವಿತ ನಟನಾಗಿದ್ದರು. ಇನ್ನು ಇವರು ಸಿನಿಮಾರಂಗದಲ್ಲಿ ಪಾದಾರ್ಪಣೆ ಮಾಡಿದ್ದು 1990 ರಲ್ಲಿ ಬಿಡುಗಡೆಯಾದ ಗಣೇಶನ ಮದುವೆ ಎನ್ನುವ ಸಿನಿಮಾದ ಮೂಲಕ. ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ಸಿಹಿಕಹಿ ಚಂದ್ರು ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಸಿಹಿಕಹಿ ಚಂದ್ರು ರವರು ವಿಧಾನ ನಂತರ ಹಲವಾರು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಪ್ರೇಕ್ಷಕರ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ.

ಕೇವಲ ನಟನಾಗಿ ಮಾತ್ರವಲ್ಲದೆ ನಿರ್ದೇಶಕ ಹಾಗೂ ನಿರ್ಮಾಪಕ ನಾಗಿಯೂ ಕೂಡ ಸಿಹಿ ಕಹಿ ಚಂದ್ರು ಅವರು ಕಾಣಿಸಿಕೊಂಡಿದ್ದಾರೆ. ಬೊಂಬಾಟ್ ಭೋಜನ ಎನ್ನುವ ಕಾರ್ಯಕ್ರಮದ ಮೂಲಕ ಅಡುಗೆ ಕಾರ್ಯಕ್ರಮದಲ್ಲಿ ಕೂಡ ಅವರು ಭಾಗವಹಿಸಿ ಅದರಿಂದ ಕೂಡ ಜನಪ್ರಿಯರಾಗಿದ್ದಾರೆ. ಪಾಪ ಪಾಂಡು ಹಾಗೂ ಸಿಲ್ಲಿ ಲಲ್ಲಿ ಎನ್ನುವುದು ಜನಪ್ರಿಯ ಹಾಸ್ಯ ಧಾರವಾಹಿಗಳಲ್ಲಿ ನಟಿಸುವ ಮೂಲಕವೂ ಕೂಡ ಇಂದಿಗೂ ಜನರಿಗೆ ಹಳೆಯ ನೆನಪುಗಳನ್ನು ನೀಡುತ್ತಿರುತ್ತಾರೆ. ಇನ್ನು ಕನ್ನಡ ಕಿರುತೆರೆಯ ಅತ್ಯಂತ ಶ್ರೀಮಂತ ಹಾಗೂ ದೊಡ್ಡಮಟ್ಟದ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸೀಸನ್ 5ರಲ್ಲಿ ಕೂಡ ಸಿಹಿಕಹಿ ಚಂದ್ರು ರವರು ಭಾಗವಹಿಸಿದ್ದರು. ಕುಕ್ಕು ವಿದ್ದು ಕಿರಿಕ್ಕು ಎಂಬ ಅಡುಗೆ ರಿಯಾಲಿಟಿ ಷೋನಲ್ಲಿ ಕೂಡ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಕೇವಲ ಇವರು ಮಾತ್ರವಲ್ಲ ಅವರ ಹೆಂಡತಿ ಸಿಹಿಕಹಿ ಗೀತಾ ಕೂಡ ನಟನೆಯಲ್ಲಿ ನಿಸ್ಸೀಮರು.

ಸಿಹಿಕಹಿ ಚಂದ್ರು ರವರ ಪತ್ನಿಯ ಬಗ್ಗೆ ಹೇಳಿದ್ದಾಯ್ತು ಈಗ ಅವರ ಮಕ್ಕಳ ಬಗ್ಗೆ ತಿಳಿಯೋಣ ಬನ್ನಿ. ಹೌದು ನಟ ಸಿಹಿಕಹಿ ಚಂದ್ರು ರವರಿಗೆ ಇಬ್ಬರು ಹೆಣ್ಣುಮಕ್ಕಳು. ಹಿತಾ ಚಂದ್ರಶೇಖರ್ ಹಾಗೂ ಕೃಷಿ ಚಂದ್ರಶೇಖರ್ ಎನ್ನುವುದಾಗಿ. ನಿಮಗೆಲ್ಲರಿಗೂ ತಿಳಿದಿರುವಂತೆ ಹಿತಾ ಚಂದ್ರಶೇಖರ್ ರವರು ಕೂಡ ಉದಯೋನ್ಮುಖ ನಟಿಯಾಗಿದ್ದು ಈಗಾಗಲೇ ಮದುವೆಯಾಗಿದ್ದಾರೆ. ಇನ್ನು ಸಿಹಿಕಹಿ ಚಂದ್ರು ರವರ ಮನೆಯ ಕುರಿತಂತೆ ಹೇಳುವುದಾದರೆ ತಮ್ಮ ಅಭಿರುಚಿಗೆ ತಕ್ಕಂತೆ ಆಧುನಿಕ ಶೈಲಿಯಲ್ಲಿ ಕಟ್ಟಿಸಿದ್ದಾರೆ. ಸಿಹಿಕಹಿ ಚಂದ್ರು ರವರ ಕನಸಿನ ಮನೆಯನ್ನು ನೀವು ಕೂಡ ಈ ಫೋಟೋಗಳಲ್ಲಿ ನೋಡಬಹುದಾಗಿದೆ. ಮನೆಯನ್ನು ನೋಡಿದ ನಂತರ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಮೂಲಕ ಅನಿಸಿಕೊಳ್ಳುವುದು ಮಾತ್ರ ಮಿಸ್ ಮಾಡಬೇಡಿ.

Comments are closed.