Neer Dose Karnataka
Take a fresh look at your lifestyle.

ಶತಕ ಗಳಿಸಿ ಮಿಂಚಿರುವ ಶುಭ್ಮಂ ಗಿಲ್ ರವರಿಗೆ ಶಾಕ್ ನೀಡಿದರೆ ಸಚಿನ್ ಪುತ್ರಿ ಸಾರಾ?? ಪ್ರೀತಿಯ ಜೋಡಿಗಳ ನಡುವೆ ಏನಾಯ್ತು ಗೊತ್ತೇ??

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಮತ್ತು ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಶುಭಮನ್ ಗಿಲ್ ನಡುವೆ ಪ್ರೀತಿ ಇದ್ದ ವಿಚಾರ ಎಲ್ಲರಿಗೂ ಗೊತ್ತಿದೆ. ಇವರಿಬ್ಬರು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಲ್ಲಿರುತ್ತಿದ್ದರು. ಆದರೆ ಇದೀಗ ಈ ಜೋಡಿಯ ಪ್ರೀತಿ ವಿಚಾರದ ಬಗ್ಗೆ ಬೇರೆಯದೇ ಸುದ್ದಿ ಕೇಳಿ ಬರುತ್ತಿದೆ, ಇವರಿಬ್ಬರ ಪ್ರೀತಿಯಲ್ಲಿ ಬಿರುಕು ಮೂಡಿರಬಹುದು ಎನ್ನುವ ಅನುಮಾನ ಶುರುವಾಗಿದೆ..

2019ರ ಐಪಿಎಲ್ ಸಮಯದಲ್ಲಿ ಸಾರಾ ತೆಂಡೂಲ್ಕರ್ ಮತ್ತು ಶುಭಮನ್ ಗಿಲ್ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ಜೊತೆಯಾಗಿರುವ ಫೋಟೋ ವೈರಲ್ ಆಗಿತ್ತು. ಇಬ್ಬರು ಜೊತೆಯಾಗಿದ್ದಾರೆ, ರಿಲೇಶನ್ಷಿಪ್ ನಲ್ಲಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿ ಭಾರಿ ವೈರಲ್ ಆಗಿತ್ತು. ಆಗಿನಿಂದ ಒಬ್ಬರ ಪೋಸ್ಟ್ ಗೆ ಮತ್ತೊಬ್ಬರು ಕಮೆಂಟ್ ಮಾಡುವುದು, ರಿಪ್ಲೈ ಕೊಡುವುದು ಇದೆಲ್ಲವೂ ನಡೆಯುತ್ತಿತ್ತು. ಇನ್ನು ಶುಭಮನ್ ಗಿಲ್ ಅವರ ಬಗ್ಗೆ ಹೇಳುವುದಾದರೆ, ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ, ಸ್ವತಃ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೇ ಮುರಿದಿದ್ದಾರೆ ಶುಭಮನ್ ಗಿಲ್.

ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದುಕೊಂಡರು. ಸಾರಾ ತೆಂಡೂಲ್ಕರ್ ಮತ್ತು ಶುಭಮನ್ ಗಿಲ್ ಇಬ್ಬರು ಸಹ ಒಳ್ಳೆಯ ರಿಲೇಶನ್ಷಿಪ್ ನಲ್ಲಿದ್ದರು ಎನ್ನಲಾಗಿತ್ತು, ಆದರೆ ಇದೀಗ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿದ್ದು, ಇವರಿಬ್ಬರ ಸಂಬಂಧಕ್ಕೆ ಬಿರುಕು ಮೂಡಿದೆ, ಇಬ್ಬರು ಬ್ರೇಕಪ್ ಮಾಡಿಕೊಂಡಿರಬಹುದು ಎನ್ನುವ ವದಂತಿ ಕೇಳಿ ಬರುತ್ತಿದೆ. ಆದರೆ ಇದರ ಬಗ್ಗೆ ಇಬ್ಬರು ಸಹ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Comments are closed.