Neer Dose Karnataka
Take a fresh look at your lifestyle.

ಬಹು ನಿರೀಕ್ಷಿತ ಹೈ ವೋಲ್ಟೇಜ್ ಪಾಕಿಸ್ತಾನ ದೇಶದ ವಿರುದ್ಧ ಪಂದ್ಯದಲ್ಲಿ ಭಾರತ ತಂಡದಿಂದ ನಾಲ್ಕು ಆಟಗಾರರಿಗೆ ಕೊಕ್: ಯಾರ್ಯಾರಿಗೆ ಗೊತ್ತೆ??

ಏಷ್ಯಾಕಪ್ ಪಂದ್ಯಗಳು ಬಹಳ ರೋಚಕವಾಗಿ ಇರಲಿದೆ. ಆಗಸ್ಟ್ 28ಅಂದರೆ ಈ ಭಾನುವಾರದಂದು ಭಾರತ ವರ್ಸಸ್ ಪಾಕಿಸ್ತಾನ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಎರಡು ತಂಡಗಳು ತಯಾರಿ ನಡೆಸುತ್ತಿದೆ. ಭಾರತ ತಂಡವು 15 ಪ್ಲೇಯರ್ ಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಆ ಪ್ಲೇಯರ್ ಗಳು ಯುಎಇ ನಲ್ಲಿ ಈಗಾಗಲೇ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಭಾನುವಾರ ನಡೆಯಲಿರುವ ರೋಚಕ ಪಂದ್ಯದಲ್ಲಿ ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಅವಕಾಶ ಸಿಗಲಿದೆ, ಕ್ಯಾಪ್ಟನ್ ರೋಹಿತ್ ಶರ್ಮಾ ಯಾರನ್ನೆಲ್ಲ ತಂಡಕ್ಕೆ ಆಯ್ಕೆ ಮಾಡುತ್ತಾರೆ ಎನ್ನುವ ಕುತೂಹಲ ಶುರುವಾಗಿದ್ದು, ತಂಡದಲ್ಲಿ ಯಾರೆಲ್ಲಾ ಇರುತ್ತಾರೆ ಎಂದು ತಿಳಿಸುತ್ತೇವೆ ನೋಡಿ..

ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಪಾಕಿಸ್ತಾನದ ವಿರುದ್ಧ ನಡೆಯುವ ಪಂದ್ಯದಲ್ಲಿ ಆರಂಭಿಕ ಆಟಗಾರರಾಗಿ ಭಾರತ ತಂಡದಿಂದ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಕಣಕ್ಕೆ ಇಳಿಯಲಿದ್ದಾರೆ, ಭಾರತದ ಸಕ್ಸಸ್ ಫುಲ್ ಜೋಡಿ ಇವರಾಗಿದ್ದು, ಈ ಬಾರಿ ಕೂಡ ಇವರೇ ಓಪನರ್ಸ್ ಆಗಿರಲಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ ಮತ್ತು ಕಿಂಗ್ ಕೋಹ್ಲಿ ಅವರು ಸಹ ಪ್ಲೇಯಿಂಗ್ 11 ನಲ್ಲಿರುವುದು ಪಕ್ಕಾ ಆಗಿದೆ. ಫಿನಿಷರ್ ಸ್ಥಾನದಲ್ಲಿ ಇಬ್ಬರು ಆಟಗಾರರಿದ್ದಾರೆ ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್, ರಿಷಬ್ ಅವರು ಬಲಗೈ ಬ್ಯಾಟ್ಸ್ಮನ್ ಹಾಗೂ ಇವರು ತಂಡದ ತಂತ್ರಗಳಿಗೆ ಹೊಂದಿಕೊಳ್ಳುತ್ತಾರೆ, ಹಾಗಾಗಿ ಇವರಿಗೆ ಅವಕಾಶ ನೀಡಬಹುದು.

ಇಬ್ಬರು ಆಲ್ ರೌಂಡರ್ ಗಳ ಜೊತೆ ಭಾರತ ತಂಡ ಕಣಕ್ಕೆ ಇಳಿಯಲಿದೆ, ಒಬ್ಬರು ಹಾರ್ದಿಕ್ ಪಾಂಡ್ಯ, ಇವರು ಅದ್ಭುತವಾದ ಬೌಲರ್ ಮತ್ತು ಬ್ಯಾಟ್ಸ್ಮನ್ ಸಹ ಹೌದು, ಇವರು ಪ್ಲೇಯಿಂಗ್ 11ನಲ್ಲಿ ಕಂಫರ್ಮ್. ಮತ್ತೊಬ್ಬ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಸಹ ಪ್ಲೇಯಿಂಗ್ 11 ತಂಡದಲ್ಲಿ ಇರುವುದು ಖಚಿತ ಎಂದು ಮಾಹಿತಿ ಸಿಕ್ಕಿದೆ. ಬೌಲಿಂಗ್ ಟೀಮ್ ನಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಅರ್ಷದೀಪ್ ಸಿಂಗ್ ಇಬ್ಬರಿಗೆ ತಂಡದಲ್ಲಿ ಆಡುವ ಅವಕಾಶ ಪಕ್ಕಾ ಎನ್ನಲಾಗುತ್ತಿದೆ. ಜೊತೆಗೆ ಸ್ಪಿನ್ನರ್ ಯುಜವೆಂದ್ರ ಚಾಹಲ್ ಅವರು ಪ್ಲೇಯಿಂಗ್ 11 ನಲ್ಲಿ ಇರಲಿದ್ದಾರೆ. ಅಶ್ವಿನ್ ಅವರಿಗೂ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗಬಹುದು. ಇನ್ನು ದಿನೇಶ್ ಕಾರ್ತಿಕ್, ದೀಪಕ್ ಹೂಡಾ, ರವಿ ಬಿಶ್ನೋಯ್ ಹಾಗೂ ಆವೇಶ ಖಾನ್ ಇವರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗದೆ ಬೆಂಚ್ ಕಾಯುವ ಹಾಗೆ ಆಗಬಹುದು ಎನ್ನಲಾಗುತ್ತಿದೆ.

Comments are closed.