Neer Dose Karnataka
Take a fresh look at your lifestyle.

ಎಲ್ಲರ ಲೆಕ್ಕಾಚಾರವೂ ಕೂಡ ಉಲ್ಟಾ: ಅನಿರುದ್ ರವರನ್ನು ಕೈ ಬಿಡಲು ಇರುವ ಕಾರಣವೇ ಬೇರೆ. ಏನಂತೆ ಗೊತ್ತೇ??

79

ಜೀಕನ್ನಡ ವಾಹಿನಿಯಲ್ಲಿ ಬಹಳ ಫೇಮಸ್ ಆಗಿರುವ ಧಾರವಾಹಿಗಳಲ್ಲಿ ಒಂದು ಜೊತೆ ಜೊತೆಯಲಿ. ಈ ಧಾರವಾಹಿ ಶುರುವಾಗಿ 3 ವರ್ಷ ಕಳೆದಿದೆ, ಜೊತೆ ಜೊತೆಯಲಿ ಧಾರವಾಹಿಯಲ್ಲಿ ಆರ್ಯವರ್ಧನ್ ಮತ್ತು ಅನು ಸಿರಿಮನೆ ಪಾತ್ರ ಜನರಿಗೆ ಅಚ್ಚುಮೆಚ್ಚಿನ ಪಾತ್ರ. ಅನಿರುದ್ಧ್ ಮತ್ತು ಮೇಘಾ ಶೆಟ್ಟಿ ಅವರ ಅಭಿನಯವನ್ನು ಜನರು ಅಪ್ಪಿ ಮೆಚ್ಚಿ ಪ್ರಶಂಸೆ ನೀಡಿದ್ದಾರೆ. ಆದರೆ ಈಗ ಜೊತೆ ಜೊತೆಯಲಿ ಧಾರವಾಹಿ ಈಗ ಕಷ್ಟದಲ್ಲಿದೆ.

ನಮಗೆಲ್ಲ ಗೊತ್ತಿರುವ ಹಾಗೆ ಜೊತೆ ಜೊತೆಯಲಿ ಧಾರವಾಹಿಯ ತಂಡದಲ್ಲಿ ಗಲಾಟೆ ಆಗಿ, ನಟ ಅನಿರುದ್ಧ್ ಅವರನ್ನು ಧಾರವಾಹಿಯಿಂದ ಹೊರಹಾಕಲಾಗಿದೆ. ಅನಿರುದ್ಧ್ ಅವರನ್ನು ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಹಾಕಿ, ಕಿರುತೆರೆಯಿಂದಲೇ ಎರಡು ವರ್ಷ ಬ್ಯಾನ್ ಮಾಡಲಾಗಿದೆ. ಆದರೆ ಇದಕ್ಕೆ ಅನಿರುದ್ಧ್ ಅವರ ಅಭಿಮಾನಿ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.

ಅನಿರುದ್ಧ್ ಅವರಿಗೆ ಅಹಂಕಾರ, ಹಿರಿಯರಿಗೆ ಗೌರವ ಕೊಡುತ್ತಿರಲಿಲ್ಲ, ಶೂಟಿಂಗ್ ಸೆಟ್ ನಲ್ಲಿ ಅಹಂಕಾರದಿಂದ ವರ್ತಿಸುತ್ತಿದ್ದರು. ನೆಗಟಿವ್ ಶೇಡ್ ನಲ್ಲಿ ನಟಿಸುವುದಿಲ್ಲ ಎಂದು ಗಲಾಟೆ ಮಾಡಿದರು, ಈ ರೀತಿಯ ತೊಂದರೆಗಳು ಆಗುತ್ತಲೇ ಇತ್ತು, ಈಗ ಪರಿಸ್ಥಿತಿ ಮಿತಿ ಮೀರಿರುವ ಕಾರಣ, ಅನಿರುದ್ಧ್ ಅವರನ್ನು ಧಾರವಾಹಿಯಿಂದ ಹೊರಹಾಕಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಆದರೆ ಅಸಲಿ ವಿಚಾರ ಬೇರೆಯೇ ಇದೆ ಎನ್ನುತ್ತಿದ್ದಾರೆ ಅಭಿಮಾನಿಗಳು.

ನಟ ಅನಿರುದ್ಧ್ ಅವರಿಗೆ ಮಹಿಳಾ ಅಭಿಮಾನಿಗಳು ಹೆಚ್ಚು, ಅವರೆಲ್ಲರೂ ಅನಿರುದ್ಧ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅನಿರುದ್ಧ್ ಅವರ ಪರವಾಗಿ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪ್ರೆಸ್ ಮೀಟ್ ನಡೆಸಿ, ಅನಿರುದ್ಧ್ ಅವರ ಪರವಾಗಿ ಮಾತನಾಡಿದ್ದಾರೆ. ಅನಿರುದ್ಧ್ ಅವರು ಆರ್ಯವರ್ಧನ್ ಪಾತ್ರದಿಂದ ಎಷ್ಟು ಜನಪ್ರಿಯತೆ ಗಳಿಸಿದ್ದರು ಎಂದು ಗೊತ್ತೇ ಇದೆ. ತಮಗೆ ಸಿಕ್ಕ ಜನಪ್ರಿಯತೆಯನ್ನು ಅನಿರುದ್ಧ್ ಅವರು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡರು.

ಸಮಾಜಕ್ಕೆ ಒಳ್ಳೆಯದನ್ನು ಸಹ ಮಾಡಿರು. ಆದರೆ ಇದೀಗ ಧಾರವಾಹಿ ತಂಡದ ಜೊತೆಗೆ ನಡೆದ ಕಿರಿಕ್ ಇಂದಾಗಿ ಅನಿರುದ್ಧ್ ಅವರನ್ನು ಜೊತೆ ಜೊತೆಯಲಿ ಧಾರವಾಹಿ ಇಂದಾಗಿ ಹೊರಹಾಕಲಾಗಿದೆ. ಅನಿರುದ್ಧ್ ಅವರ ಬೆಂಬಲಕ್ಕೆ ಅದರಲ್ಲೂ ಅವರ ಮಹಿಳಾ ಅಭಿಮಾನಿಗಳು ಬಂದಿದ್ದು, ಅನಿರುದ್ಧ್ ಅವರ ಪರವಾಗಿ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ್ದಾರೆ. ಅನಿರುದ್ಧ್ ಅವರಿಗೆ ಅಹಂಕಾರ ಇಲ್ಲ ಎಂದಿದ್ದಾರೆ ಅವರ ಮಹಿಳಾ ಅಭಿಮಾನಿಗಳು.

ಅನಿರುದ್ಧ್ ಅವರನ್ನು ನಾವು ಭೇಟಿ ಮಾಡಿದ್ದೇವೆ, ಅವರಿಗೆ ಸ್ವಲ್ಪವು ಅಹಂಕಾರ ಇಲ್ಲ, ಇದೆಲ್ಲವೂ ಅನಿರುದ್ಧ್ ಅವರನ್ನು ಧಾರವಾಹಿಯಿಂದ ಹೊರಹಾಕಿ, ಅವರಿಗೆ ಗೌರವಕ್ಕೆ ಧಕ್ಕೆ ತರಲು ಮಾಡಿರುವ ಕೆಲಸಗಳು. ಅನಿರುದ್ಧ್ ಅವರ ಮೇಲಿನ ಹೊಟ್ಟೆಕಿಚ್ಚಿನಿಂದ ಈ ರೀತಿ ಮಾಡಿದ್ದಾರೆ. ಧಾರವಾಹಿಯಿಂದ ಅವರನ್ನು ಹೊರಹಾಕುವುದು ಮಾತ್ರವಲ್ಲದೆ, 2 ವರ್ಷಗಳ ಕಾಲ ಕಿರುತೆರೆಯ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದ ಹಾಗೆ ಬ್ಯಾನ್ ಮಾಡಿದ್ದಾರೆ. ಅದು ಹೇಗೆ ಬ್ಯಾನ್ ಮಾಡ್ತಾರೆ ನಾವು ನೋಡ್ತೀವಿ, ಜೊತೆ ಜೊತೆಯಲಿ ಧಾರವಾಹಿಗೆ ಗೌರವ, ಹೆಸರು, ಯಶಸ್ಸು ಬಂದಿದ್ದೇ ನಮ್ಮ ಅನಿರುದ್ಧ್ ಸರ್ ಇಂದ ಎಂದು ಹೇಳಿದ್ದಾರೆ ಮಹಿಳಾ ಅಭಿಮಾನಿಗಳು.

Leave A Reply

Your email address will not be published.