Neer Dose Karnataka
Take a fresh look at your lifestyle.

ಪುನೀತ್ ರಾಜ್ ಕುಮಾರ್ ರವರ ನೀಡಿದ್ದ ಕೊನೆಯ ಉಡುಗೊರೆ ನೋಡಿ, ಕಣ್ಣೀರಿಟ್ಟ ಅಶ್ವಿನಿ, ಏನು ಗೊತ್ತೇ?? ಎಷ್ಟು ಕೋಟಿ ಗೊತ್ತೇ??

ಎಲ್ಲಾ ಅಭಿಮಾನಿಗಳ ಮೆಚ್ಚಿನ ನಟ, ಅಭಿಮಾನಿಗಳ ಪಾಲಿನ ದೇವರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಲ್ಲವಾಗಿ 10 ತಿಂಗಳು ಕಳೆದು ಹೋಗಿದೆ. ಆದರೆ ಇಂದಿಗೂ ಸಹ ಅಪ್ಪು ಅವರನ್ನು ಯಾರು ಮರೆತಿಲ್ಲ. ಅಪ್ಪು ಅವರು ಸಿನಿಮಾಗಳಲ್ಲಿ ಪವರ್ ಸ್ಟಾರ್ ಎಂದು ಹೆಸರು ಮಾಡಿರುವುದರ ಜೊತೆಗೆ, ಮಾನವೀಯತೆ ಮೆರೆದ ವ್ಯಕ್ತಿಯಾಗಿ ಎಲ್ಲಾ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಇಂದಿಗೂ ಸಹ ಅಪ್ಪು ಅವರ ಸಮಾಧಿ ಬಳಿ ಪ್ರತಿದಿನ ಸಾವಿರಾರು ಜನರು ಬಂದು ಅವರ ದರ್ಶನ ಪಡೆಯುತ್ತಿದ್ದಾರೆ.

ಅಪ್ಪು ಅವರು ಇನ್ನಿಲ್ಲವಾದ ಮೇಲೆ ಹೆಚ್ಚಾಗಿ ನೋವಿಗೆ ಒಳಗಾಗಿರುವುದು ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಹಾಗೂ ಅವರ ಮಕ್ಕಳು. ಅಪ್ಪು ಅವರು ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದರು, ಎಷ್ಟೇ ಬ್ಯುಸಿ ಇದ್ದರು ಸಹ ಅಪ್ಪು ಅವರು ಕುಟುಂಬದ ಜೊತೆಗೆ ಸಮಯ ಕಳೆಯುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಚಿತ್ರೀಕರಣದ ನಡುವೆ ಸ್ವಲ್ಪ ಬಿಡುವಿನ ಸಮಯ ಸಿಕ್ಕರು ಸಹ, ಅಪ್ಪು ಅವರು ಕುಟುಂಬದ ಜೊತೆಗೆ ಹೊರಗೆ ಹೋಗಿ ಬರುತ್ತಿದ್ದರು. ಪತ್ನಿ ಅಶ್ವಿನಿ ಅವರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.

ಅಪ್ಪು ಅವರು ಹೋದ ಬಳಿಕ, ಅಶ್ವಿನಿ ಅವರೇ ಅಪ್ಪು ಅವರ ಕನಸುಗಳನ್ನು ನೆರವೇರಿಸುತ್ತಿದ್ದಾರೆ. ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಾಜ್ ಹೊಸಬರಿಗೆ ಅವಕಾಶಗಳನ್ನು ಕೊಡುತ್ತಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್. ಅಪ್ಪು ಅವರ ದೊಡ್ಡ ಕನಸು ಗಂಧದಗುಡಿ ಡಾಕ್ಯುಮೆಂಟರಿಯನ್ನು ಬಿಡುಗಡೆ ಮಾಡಲಿದ್ದಾರೆ. ಇನ್ನು ಅಶ್ವಿನಿ ಅವರು ಇತ್ತೀಚೆಗೆ ಅಪ್ಪು ಅವರು ತಮಗೆ ಕೊಟ್ಟ ಗಿಫ್ಟ್ ನೋಡಿ ಕಣ್ಣೀರು ಹಾಕಿದ್ದಾರೆ. 2019ರಲ್ಲಿ ಮಹಿಳಾ ದಿನಾಚರಣೆಯ ದಿನ 4 ಕೋಟಿ ರೂಪಾಯಿ ಬೆಲೆ ಬಾಳುವ ಲ್ಯಾಂಭೋರ್ಗಿನಿ ಕಾರ್ ಅನ್ನು ಗಿಫ್ಟ್ ನೀಡಿದ್ದರು. ಅದನ್ನು ನೋಡಿದ ಅಶ್ವಿನಿ ಅವರು ಭಾವುಕರಾಗಿದ್ದಾರೆ.

Comments are closed.