Neer Dose Karnataka
Take a fresh look at your lifestyle.

ಇದಪ್ಪ ಅದೃಷ್ಟ ಅಂದ್ರೆ: ಕಾಫಿ ನಾಡು ಚಂದ್ರು ರವರಿಗೆ ದುಬಾರಿ ಉಡುಗೊರೆಯನ್ನು ಗಿಫ್ಟ್ ಕೊಟ್ಟ ಅನುಶ್ರೀ. ಏನು ಗೊತ್ತೆ??

ಕಾಫಿನಾಡು ಚಂದು, ಈ ಹೆಸರನ್ನು ಕೇಳದೆ ಇರುವವರು ಈಗಿನ ದಿನಗಳಲ್ಲಿ ಇರಲು ಸಾಧ್ಯವಿಲ್ಲ ಎಂದರೆ ತಪ್ಪಾಗುವದಿಲ್ಲ. ಯಾಕಂದ್ರೆ ಕಾಫಿನಾಡು ಚಂದು ಹೆಸರು ಈಗ ಅಷ್ಟೇ ಪಾಪ್ಯುಲರ್ ಆಗಿದೆ. ಈತನ ವಿಡಿಯೋಗಳು, ಬರ್ತ್ ಡೇ ವಿಶ್ ಗಳು ಬಹಳ ಮನರಂಜನೆ ನೀಡುತ್ತಿವೆ. ಈತನೆ ಹೇಳಿಕೊಂಡಿರುವ ಹಾಗೆ, ಇವನ ಹೆಸರು ಕಾಫಿನಾಡು ಚಂದು, ಆಟೋ ಓಡಿಸುವುದು ಇವನ ವೃತ್ತಿ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಆದ ಸ್ಟೈಲ್ ನಲ್ಲಿ ವಿಡಿಯೋಗಳಲ್ಲಿ ಮಾತನಾಡುತ್ತಾ ಫೇಮಸ್ ಆಗಿದ್ದಾನೆ.

ಕಾಫಿನಾಡು ಚಂದು ಮಾಡುವ ಬರ್ತ್ ಡೇ ವಿಶ್ ಗಳು ಭಾರಿ ವೈರಲ್ ಆಗುತ್ತವೆ. ಹಲವಾರು ಜನರು ಕಾಫಿನಾಡು ಚಂದು ಇಂದ ವಿಶ್ ಮಾಡಿಸಿಕೊಳ್ಳಬೇಕು ಎಂದು ಬಯಸುವ ಮಟ್ಟಿಗೆ, ಈ ವ್ಯಕ್ತಿಯ ವಿಡಿಯೋ ಗಳು ವೈರಲ್ ಆಗಿದೆ. ನಾನು ಕಾಫಿನಾಡು ಚಂದು ಎಂದೇ ವಿಡಿಯೋ ಶುರು ಮಾಡುತ್ತಾರೆ. ತಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ ವಿಶ್ ಮಾಡಿ ಎಂದು ಹಲವರು ಈತನ ಬಳಿ ಮನವಿ ಮಾಡಿಕೊಳ್ಳುತ್ತಾರೆ. ಕಾಫಿನಾಡು ಚಂದು ಆಟೋ ಓಡಿಸಿ ಮತ್ತು ಈ ವಿಶ್ ಗಳಿಂದ ಬಂದ ಹಣವನ್ನು ತನ್ನ ಖರ್ಚಿಗೆ ಬೇಕಾದಷ್ಟು, ಆಟೋ ಇಂಧನ ಖರ್ಚಿಗೆ ಇಟ್ಟುಕೊಂಡು, ಇನ್ನುಳಿದ ಹಣವನ್ನು ಈತ ಬಡ ಮಕ್ಕಳಿಗೆ ಪೆನ್ ಪೆನ್ಸಿಲ್ ಕೊಡಿಸಲು ಉಪಯೋಗಿಸಿಕೊಳ್ಳುತ್ತಾನೆ.

ಜನರಿಗೆ ಸಹಾಯ ಮಾಡುತ್ತಾನೆ. ಅಷ್ಟೇ ಅಲ್ಲದೆ, ಹವ್ಯಾಸಗಾಗಿ ಗಿಡಗಳನ್ನು ನೆಡುವುದು ಸಹ ಈ ವ್ಯಕ್ತಿಯ ಅಭ್ಯಾಸ. ಕಾಫಿ ನಾಡು ಚಂದು ಹವಾ ಈಗ ಎಲ್ಲಾ ಕಡೆ ಇದೆ ಎಂದರೆ ತಪ್ಪಾಗುವುದಿಲ್ಲ. ಸೆಲೆಬ್ರಿಟಿಗಳು ಸಹ ಕಾಫಿ ನಾಡು ಚಂದು ಅವರ ವಿಡಿಯೋಗಳನ್ನು ಎಂಜಾಯ್ ಮಾಡಲು ಶುರು ಮಾಡಿದ್ದಾರೆ. ಇದೀಗ ಕಾಫಿ ನಾಡು ಚಂದು ಅನುಶ್ರೀ ಅವರು ನಿರೂಪಣೆ ಮಾಡುವ ಡಿಕೆಡಿ ಶೋನಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಶೋನಲ್ಲಿ ಶಿವಣ್ಣ ಅವರನ್ನು ಭೇಟಿ ಮಾಡಿದ್ದಾರೆ. ಈ ಸಮಯದಲ್ಲಿ ಅನುಶ್ರೀ ಅವರು ಚಂದು ಅವರಿಗೆ ಗಿಫ್ಟ್ ಒಂದನ್ನು ನೀಡಿದ್ದು, ಚಂದು ಅವರಿಗೆ ದುಬಾರಿ ಬೆಲೆಯ ವಾಚ್ ನೀಡಿ, ಹೀಗೆ ಒಳ್ಳೆಯ ಕೆಲಸಗಳನ್ನು ಮಾಡಿ, ಜನರಿಗೆ ಸಹಾಯ ಮಾಡಿ ಚೆನ್ನಾಗಿರಿ ಎಂದು ವಿಶ್ ಮಾಡಿದ್ದಾರೆ.

Comments are closed.