ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಮಾತಿಗೂ ಕೂಡ ಕ್ಯಾರೇ ಎನ್ನದ ಸಾನ್ಯ ಅಯ್ಯರ್: ಸುದೀಪ್ ಹೇಳಿದರು ಕೇಳದೆ ಮಾಡಿದ್ದೇನು ಗೊತ್ತೇ?? ನಮಗೂ ಬೇಸರವೇ.
ಬಿಗ್ ಬಾಸ್ ಓಟಿಟಿ ಶೋನ ಅರ್ಧ ಜರ್ನಿ ಈಗ ಮುಗಿದಿದೆ. ಇನ್ನು ಉಳಿದಿರುವುದು ಕೇವಲ 3 ವಾರಗಳು ಮಾತ್ರ. ಈ ಮೂರು ವಾರಗಳಲ್ಲಿ ಮನೆಯ ಸ್ಪರ್ಧಿಗಳು ಏಳು ಬೀಳುಗಳನ್ನು ನೋಡಿದ್ದಾರೆ. ಪ್ರತಿ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಅವರು ಬಂದು, ವಾರ ಪೂರ್ತಿ ನಡೆದ ವಿಚಾರಗಳ ಬಗ್ಗೆ ಮಾತನಾಡುತ್ತಾರೆ, ಸುದೀಪ್ ಅವರ ಖಡಕ್ ನಿರೂಪಣೆಯನ್ನು ಸಾಕಷ್ಟು ಜನರು ಇಷ್ಟಪಡುತ್ತಾರೆ. ಈ ವಾರ ಸಹ ಸುದೀಪ್ ಅವರು ಮನೆಯಲ್ಲಿ ನಡೆದ ಕೆಲವು ಗಂಭೀರ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಬಿಗ್ ಬಾಸ್ ಓಟಿಟಿ ಮನೆಯಲ್ಲಿ ಎಲ್ಲರ ಮೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರು ಸಾನ್ಯಾ ಅಯ್ಯರ್. ಪುಟ್ಟಗೌರಿ ಮದುವೆ ಧಾರವಾಹಿ ಹಾಗೂ ಕೆಲವು ರಿಯಾಲಿಟಿ ಶೋಗಳ ಮೂಲಕ ಹೆಸರು ಮಾಡಿದ್ದ ಸಾನ್ಯಾ ಅಯ್ಯರ್ ಇದೀಗ ಬಿಗ್ ಬಾಸ್ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಕಳೆದ ವಾರದ ವೀಕೆಂಡ್ ಎಪಿಸೋಡ್ ನಲ್ಲಿ ಸಾನ್ಯಾ ಅಯ್ಯರ್ ಅವರಿಗೆ ಸುದೀಪ್ ಅವರು ಒಂದು ಟಾಸ್ಕ್ ನೀಡಿದ್ದರು. ಕಳೆದ ವಾರ ಸಾನ್ಯಾ ಮತ್ತು ರೂಪೇಶ್ ಬಗ್ಗೆ ಕೆಲವರು ಬೇರೆ ರೀತಿ ಮಾತನಾಡಿದ್ದ ಕಾರಣ ಸಾನ್ಯಾ ಅಯ್ಯರ್ ಬಹಳ ಅತ್ತಿದ್ದರು.

ಆಗ ಸುದೀಪ್ ಅವರು ಸಾನ್ಯಾ ನೀವು ಇನ್ನುಮುಂದೆ ಈ ಮನೆಯಲ್ಲಿ ಕಣ್ಣೀರು ಹಾಕಬೇಡಿ, ಅದು ನಿಮಗೆ ಸೂಟ್ ಆಗುವುದಿಲ್ಲ..ಎಂದು ಸುದೀಪ್ ಅವರು ಹೇಳಿದ್ದರು. ಆದರೆ ಸಾನ್ಯಾ ಅಯ್ಯರ್ ಅವರು ನೀಡಿದ್ದ ಆ ಟಾಸ್ಕ್ ಅನ್ನು ಮಾಡಿಲ್ಲ, ಈ ವಾರ ಸಹ ಸಾನ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ಅತ್ತಿದ್ದಾರೆ, ಈ ವಾರ ಉದಯ್ ಅವರು ಸಾನ್ಯಾ, ರೂಪೇಶ್ ಮತ್ತು ಜಶ್ವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕಾರಣ ಸಾನ್ಯಾ ಅಯ್ಯರ್ ಕಣ್ಣೀರು ಹಾಕಿದ್ದಾರೆ. ಲಕ್ಷುರಿ ಬಜೆಟ್ ನಲ್ಲಿ ಪನೀರ್ ಸಿಗದ ಕಾರಣ ಸಹ ಕಣ್ಣೀರು ಹಾಕಿದ್ದರು. ಈ ವಿಚಾರಗಳು ವೀಕೆಂಡ್ ಎಪಿಸೋಡ್ ನಲ್ಲಿ ಸಹ ಚರ್ಚೆಯಾಯಿತು.