Neer Dose Karnataka
Take a fresh look at your lifestyle.

ನಾನೇ ಎಲ್ಲ ನಂದೇ ಎಲ್ಲ ಎಂದು ಮೆರೆಯುತ್ತಿದ್ದ ಲೈಗರ್ ವಿಜಯ್ ಗೆ ಸೋಲು: ಹುಚ್ಚ ವೆಂಕಟ್ ಎದುರು ಸೋಲು. ಏನಾಗಿದೆ ಗೊತ್ತೇ??

ತೆಲುಗಿನ ಲೈಗರ್ ಸಿನಿಮಾ ನಿನ್ನೆಯಷ್ಟೇ ಬಿಡುಗಡೆ ಆಗಿದೆ, ಆದರೆ ಅಂದುಕೊಂಡ ಮಟ್ಟಿಗೆ ಸಿನಿಮಾ ಯಶಸ್ಸು ಕಂಡಿಲ್ಲ, ಬದಲಾಗಿ ಲೈಗರ್ ಗೆ ಎಲ್ಲೆಡೆ ನೆಗಟಿವ್ ರಿವ್ಯೂ ಬರ್ತಿದೆ. ಈ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗಿದೆ. ಅಯೋಗ್ಯ ಸಿನಿಮಾ ಖ್ಯಾತಿಯ ಚಂದ್ರಶೇಖರ್ ಹಾಗೂ ಗಂಗಾಧರ್ ಅವರು ಲೈಗರ್ ಸಿನಿಮಾ ಡಿಸ್ಟ್ರಿಬ್ಯುಶನ್ ಹಕ್ಕು ಪಡೆದು, ಕನ್ನಡದಲ್ಲಿ ರಿಲೀಸ್ ಮಾಡಿದ್ದಾರೆ. ಆದರೆ ಲೈಗರ್ ಸಿನಿಮಾ ಚೆನ್ನಾಗಿಲ್ಲ ಎಂದೇ ರಿವ್ಯೂ ಬರುತ್ತಿದೆ. ಮೊದಲ ದಿನವೇ ಲೈಗರ್ ಬಗ್ಗೆ ನೆಗಟಿವ್ ರಿವ್ಯೂ ಜಾಸ್ತಿಯಾಗಿ, ವೀಕೆಂಡ್ ನಲ್ಲೂ ಲೈಗರ್ ಸಿನಿಮಾ ಹೇಳಿಕೊಳ್ಳುವಂಥ ಸದ್ದು ಮಾಡಿಲ್ಲ.

ಹೀಗೆ ಮುಂದುವರೆದರೆ ಲೈಗರ್ ಸಿನಿಮಾ ಫ್ಲಾಪ್ ಲಿಸ್ಟ್ ಗೆ ಸೇರುವುದು ಪಕ್ಕ ಎನ್ನಲಾಗುತ್ತಿದೆ. ಇನ್ನು ಸೋಲು ಕಾಣುತ್ತಿರುವ ಲೈಗರ್ ಸಿನಿಮಾ ಇದೀಗ ಬೇರೆ ರೀತಿಯ ದಾಖಲೆ ಒಂದನ್ನು ಮಾಡಿದೆ. ಲೈಗರ್ ಸಿನಿಮಾಗೆ ಎಲ್ಲೆಡೆ ನೆಗಟಿವ್ ರಿವ್ಯೂಗಳೇ ಹೆಚ್ಚಾಗಿ ಬರುತ್ತಿದೆ, ಈ ನಡುವೆ ಐಎಂಡಿಬಿಯಲ್ಲಿ ಸಹ ಅತ್ಯಂತ ಕಡಿಕೆ ರೇಟಿಂಗ್ ಬಂದಿದೆ, ಲೈಗರ್ ಸಿನಿಮಾದ ಐಎಂಡಿಬಿ ರೇಟಿಂಗ್ 1.6, ಈ ವರ್ಷದಲ್ಲಿ ಅತ್ಯಂತ ಕಡಿಮೆ ರೇಟಿಂಗ್ ಪಡೆದುಕೊಂಡ ಸಿನಿಮಾ ಎನ್ನಲಾಗಿದೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದ ಐಎಂಡಿಬಿ ರೇಟಿಂಗ್ 5, ರಕ್ಷಾಬಂಧನ್ ಸಿನಿಮಾದ ಐಎಂಡಿಬಿ ರೇಟಿಂಗ್ 4.6, ತಾಪ್ಸಿ ಪನ್ನು ನಟಿಸಿರುವ ಸಿನಿಮಾದ ಐಎಂಡಿಬಿ ರೇಟಿಂಗ್ 2.6 ಆಗಿದೆ.

ಇನ್ನು ನಮ್ಮ ಕನ್ನಡದ ಹುಚ್ಚ ವೆಂಕಟ್ ಅವರ ಸಿನಿಮಾಗಳಿಗೆ ಐಎಂಡಿಬಿ ರೇಟಿಂಗ್ 4.5 ಸಿಕ್ಕಿತ್ತು, ಆದರೆ ಲೈಗರ್ ಸಿನಿಮಾಗೆ ಅದಕ್ಕಿಂತ ಕಡಿಮೆ ರೇಟಿಂಗ್ ಸಿಕ್ಕಿದ್ದು, ಪ್ರೇಕ್ಷಕರು ಹುಚ್ಚ ವೆಂಕಟ್ ಅವರ ಸಿನಿಮಾಗಿಂತ ಲೈಗರ್ ಸಿನಿಮಾ ಕೆಟ್ಟದಾಗಿದೆ ಎಂದು ಹೇಳುತ್ತಿದ್ದಾರೆ. ಇನ್ನು ಲೈಗರ್ ಸಿನಿಮಾವನ್ನು ಟ್ರೋಲ್ ಮಾಡುತ್ತಿರುವವರು, ಲೈಗರ್ ಸಾಲಾ ಫ್ಲಾಪ್ ಬ್ರೀಡ್ ಎನ್ನುತ್ತಿದ್ದಾರೆ. ಈ ಸಿನಿಮಾ ಮೇಲೆ ನಟ ವಿಜಯ್ ದೇವರಕೊಂಡ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಭಾರಿ ಪ್ರಚಾರ ಮಾಡಲಾಗಿತ್ತು, ಮೈಕ್ ಟೈಸನ್, ರಮ್ಯಕೃಷ್ಣ ಅಂತಹ ಸ್ಟಾರ್ ಕಲಾವಿದರು ನಟಿಸಿದ್ದರು ಸಹ ಲೈಗರ್ ಸಿನಿಮಾ ಸಿನಿಪ್ರಿಯರಿಗೆ ಮೆಚ್ಚುಗೆಯಾಗಿಲ್ಲ.

Comments are closed.