Neer Dose Karnataka
Take a fresh look at your lifestyle.

ಬಾಲಿವುಡ್ ಸ್ಟಾರ್ ನಟನ ಜೊತೆ ಪ್ರೀತಿಯಲ್ಲಿ ಇದ್ದಾರೆಯೇ ಪೂಜಾ ಹೆಗ್ಡೆ: 25 ವರ್ಷ ದೊಡ್ಡ ನಟನ ಜೊತೆ ಪ್ರೀತಿ?? ಯಾರು ಗೊತ್ತೇ ಆ ಅದೃಷ್ಟವಂತ ನಟ?

ನಟಿ ಪೂಜಾ ಹೆಗಡೆ ಬಗ್ಗೆ ನಮಗೆಲ್ಲಾ ಗೊತ್ತು, ಯಾವ ಹಿನ್ನೆಲೆಯೂ ಇಲ್ಲದೇ ಬಂದು ಇದೀಗ ಸೌತ್ ನಲ್ಲಿ ಸ್ಟಾರ್ ಹೀರೋಯಿನ್ ಎನಿಸಿಕೊಂಡಿದ್ದಾರೆ. ಮೊದಲಿಗೆ ಯಾರೂ ಅವರಿಗೆ ಹೆಚ್ಚು ಅವಕಾಶ ನೀಡಲಿಲ್ಲ. ನಂತರದ ದಿನಗಳಲ್ಲಿ ಪೂಜಾ ಹೆಗ್ಡೆ ಸ್ಕ್ಕ್ಸಸ್ ಕಾಣುವುದಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಅವಕಾಶ ಸಿಗದೆ ಈಕೆ ಕಣ್ಮರೆಯಾಗುತ್ತಾರೆ ಎಂದುಕೊಂಡರೆ, ಈಗ ಸೌತ್ ಸಿನಿ ದುನಿಯಾದಲ್ಲಿ ಸ್ಟಾರ್ ಹೀರೋಯಿನ್ ಆಗಿ ಕುಳಿತಿದ್ದಾರೆ.
ಬೆರಳೆಣಿಕೆಯಷ್ಟು ದೊಡ್ಡ ಸಿನಿಮಾಗಳಿಂದ ಅಬ್ಬರಿಸುತ್ತಿದ್ದಾರೆ ಪೂಜಾ ಹೆಗ್ಡೆ.

ಇತ್ತೀಚೆಗಷ್ಟೇ ಮೂರು ಸಿನಿಮಾ ಫ್ಲಾಪ್ ಆದರೂ ಸಹ ಇವರಿಗೆ ಅವಕಾಶಗಳು ಕಡಿಮೆಯಾಗಿಲ್ಲ. ಆದರೆ ಇತ್ತೀಚಿಗೆ ಆಕೆಯ ಬಗ್ಗೆ ಒಂದು ವಿಷಯ ವೈರಲ್ ಆಗಿದೆ. ಈಗ ಬಾಲಿವುಡ್ ನಲ್ಲಿ ಪೂಜಾ ಹೆಗ್ಡೆ ಸತತವಾಗಿ ದೊಡ್ಡ ಚಿತ್ರಗಳಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಪೂಜಾ ಹೆಗ್ಡೆ.
ಪೂಜಾ ಅವರು ಸಲ್ಮಾನ್ ಖಾನ್ ಅವರೊಂದಿಗೆ ಸ್ವಲ್ಪ ಹತ್ತಿರ ಹೋಗುತ್ತಿದ್ದಾರೆ ಎನ್ನಲಾಗಿದ್ದು, ಅದಕ್ಕಾಗಿಯೇ ಆಕೆಯ ಬಗ್ಗೆ ವದಂತಿಗಳು ಕೇಳಿ ಬರುತ್ತಿವೆ. ಬಾಲಿವುಡ್‌ನಲ್ಲಿ ಹಿಡಿತ ಸಾಧಿಸಲು ಸಲ್ಮಾನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ವಿಚಾರವನ್ನು ಬಾಲಿವುಡ್ ಮಾಧ್ಯಮಗಳು ಈಗಾಗಲೇ ವೈರಲ್ ಮಾಡುತ್ತಿವೆ. ಚಿತ್ರರಂಗದಲ್ಲಿ ಇಂತಹ ವದಂತಿಗಳು ಬಹಳ ಸಾಮಾನ್ಯ. ಆದರೆ ಇವರಿಬ್ಬರ ವಯಸ್ಸಿನಲ್ಲಿ ಬಹಳ ವ್ಯತ್ಯಾಸವಿದೆ. ಸಲ್ಮಾನ್ ಖಾನ್ ವಯಸ್ಸು ಸುಮಾರು 56 ವರ್ಷ. ಹಾಗೂ ಪೂಜಾ ಹೆಗ್ಡೆ ಅವರ ವಯಸ್ಸು 30ರ ಆಸುಪಾಸಿನಲ್ಲಿದೆ. ಪೂಜಾ ಹೆಗ್ಡೆ ಅವರ ವಯಸ್ಸು ಸಲ್ಮಾನ್‌ ಖಾನ್ ಅವರ ವಯಸ್ಸಿನಲ್ಲಿ ಅರ್ಧದಷ್ಟು. ಇವರಿಬ್ಬರ ಬಗ್ಗೆ ಇಂತಹ ವದಂತಿ ಹೇಗೆ ಹುಟ್ಟಿಕೊಂಡಿತೋ ಗೊತ್ತಿಲ್ಲ. ಆದರೆ, ಈಗ ಈ ಸುದ್ದಿ ಬಾಲಿವುಡ್ ಮಾಧ್ಯಮಗಳಲ್ಲಿ ರಾರಾಜಿಸುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Comments are closed.