Neer Dose Karnataka
Take a fresh look at your lifestyle.

ಒಂದು ಪಂದ್ಯ ಮುಗಿಯಿತು: ಮತ್ತೊಮ್ಮೆ ಮುಖಾಮುಖಿಯಾಗಲಿದೆ ಭಾರತ ಹಾಗೂ ಪಾಕ್: ಉಚಿತವಾಗಿ ಪಂದ್ಯ ವೀಕ್ಷಿಸಲು ಏನು ಮಾಡಬೇಕು ಗೊತ್ತೇ??

2,198

ಆಗಸ್ಟ್ 28ರಂದು ಭಾನುವಾದ ನಡೆದ ಭಾರತ ವರ್ಸಸ್ ಪಾಕಿಸ್ತಾನ್ ಮ್ಯಾಚ್ ರೋಚಕವಾಗಿತ್ತು, ಭಾರತ ತಂಡ ಪಾಕಿಸ್ತಾನ್ ತಂಡವನ್ನು ಸೋಲಿಸಿ, ವಿಜಯ ಸಾಧಿಸಿತು, ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಅವರ ಅದ್ಭುತವಾದ ಪ್ರದರ್ಶನ ಭಾರತ ತಂಡ ಗೆಲ್ಲಲು ಸಹಾಯ ಮಾಡಿತು. ಮೊನ್ನೆ ನಡೆದ ಪಂದ್ಯವನ್ನು ಕ್ರಿಕೆಟ್ ಪ್ರಿಯರು ಮಿಸ್ ಮಾಡಿಕೊಂಡಿದ್ದರೆ, ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಭಾರತ ಮತ್ತು ಪಾಕಿಸ್ತಾನ್ ತಂಡ ಮತ್ತೊಮ್ಮೆ ಮುಖಾಮುಖಿಯಾಗಲಿದ್ದು ಆ ಪಂದ್ಯವನ್ನು ನೀವು ಸುಲಭವಾಗಿ ಮತ್ತು ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿಯೇ ವೀಕ್ಷಿಸಬಹುದು. ಅದು ಹೇಗೆ ಯಾವ ಪಂದ್ಯ ಎಂದು ತಿಳಿಸುತ್ತೇವೆ ನೋಡಿ..

ನಮಗೆಲ್ಲ ಗೊತ್ತಿರುವ ಹಾಗೆ ಏಷ್ಯಾಕಪ್ ಪಂದ್ಯಗಳಲ್ಲಿ ಭಾಗವಹಿಸುತ್ತಿರುವ 6 ತಂಡಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ, ಮೊದಲ ಗುಂಪಿನಲ್ಲಿ ಭಾರತ, ಪಾಕಿಸ್ತಾನ್ ಮತ್ತು ಹಾಂಗ್ ಕಾಂಗ್ ಇದೆ, ಎರಡನೇ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ್ ಹಾಗೂ ಅಫ್ಘಾನಿಸ್ತಾನ್ ಇದೆ. ಮೊದಲ ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನ್ ಸೆಮಿ ಫೈನಲ್ಸ್ ತಲುಪುತ್ತದೆ ಎನ್ನಲಾಗಿದೆ, ಎರಡನೆಯ ಗುಂಪಿನ ಒಂದು ತಂಡದ ಜೊತೆಗೆ ಪಂದ್ಯವಾಡಲಿದೆ. ಎರಡನೇ ಗುಂಪಿನ ತಂಡಗಳು ಭಾರತ ಮತ್ತು ಪಾಕಿಸ್ತಾನವನ್ನು ಸೋಲಿಸುವಷ್ಟು ಪ್ರಬಲವಾಗಿಲ್ಲ ಎನ್ನುವುದು ಕ್ರಿಕೆಟ್ ತಜ್ಞರ ಅಭಿಪ್ರಾಯ.

ಹಾಗಾಗಿ ಸೆಪ್ಟೆಂಬರ್ 11ರಂದು ನಡೆಯುವ ಫೈನಲ್ಸ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ್ ಎದುರಾಳಿಗಳಾಗಬಹುದು ಎನ್ನುತ್ತಿವೆ ಮೂಲಗಳು. ಈ ಪಂದ್ಯವನ್ನು ನೀವು ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ವೀಕ್ಷಿಸಬಹುದು. ಏರ್ಟೆಲ್ ಗ್ರಾಹಕರಿಗೆ 399 ರ ರೀಚಾರ್ಜ್ ನಲ್ಲಿ ಉಳಿದ ಸೌಲಭ್ಯಗಳ ಜೊತೆಗೆ ಡಿಸ್ನಿ ಹಾಟ್ ಸ್ಟಾರ್ ಚಂದಾದಾರಿಕೆ ಸಿಗುತ್ತದೆ, ವೊಡಾಫೋನ್ ಗ್ರಾಹಕರಿಗೆ 499 ರೂಪಾಯಿಯ ರೀಚಾರ್ಜ್ ನಲ್ಲಿ ಡಿಸ್ನಿ ಹಾಟ್ ಸ್ಟಾರ್ ಚಂದಾದಾರಿಕೆ 1 ವರ್ಷಕ್ಕೆ ಸಿಗುತ್ತದೆ. ಜಿಯೋ ಗ್ರಾಹಕರಿಗು ಸಹ 499 ರೂಪಾಯಿಯ ರೀಚಾರ್ಜ್ ನಲ್ಲಿ ಬೇರೆ ಸೌಲಭ್ಯಗಳ ಜೊತೆಗೆ,1 ವರ್ಷಗಳ ಡಿಸ್ನಿ ಹಾಟ್ ಸ್ಟಾರ್ ಸಬ್ಸ್ಕ್ರಿಪ್ಶನ್ ಸಿಗುತ್ತದೆ. ಇವುಗಳಿಂದ ನೀವು ನಿಮ್ಮ ಮೊಬೈಲ್ ನಲ್ಲಿ ಉಚಿತವಾಗಿ ಇಂಡಿಯಾ ಪಾಕಿಸ್ತಾನ್ ಮ್ಯಾಚ್ ವೀಕ್ಷಿಸಬಹುದು.

Leave A Reply

Your email address will not be published.