Neer Dose Karnataka
Take a fresh look at your lifestyle.

ಪುರುಷರಿಗೆ ಚಾಟ್ ಮಾಡುವುದು ಇಷ್ಟ ಆದರೆ ಕಷ್ಟ: ಮಹಿಳೆಯರ ಜೊತೆ ಚಾಟ್ ಮಾಡುವಾಗ ಈ ವಿಷಯ ನೆನಪಿಡಿ ಸಾಕು. ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ.

ಹುಡುಗರು ಹುಡುಗಿಯರನ್ನು ಪಟಾಯಿಸುವುದು ಸಹ ಒಂದು ಕಲೆ ಎಂದರೆ ತಪ್ಪಾಗುವುದಿಲ್ಲ. ಈಗ ಹುಡುಗಿಯರನ್ನು ಪರಿಚಯ ಮಾಡಿಕೊಳ್ಳಲು ಬಹಳಷ್ಟು ಮಾಧ್ಯಮಗಳಿವೆ. ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಮೂಲಕ ಹುಡುಗಿಯರ ಪರಿಚಯ ಮಾಡಿಕೊಳ್ಳಬಹುದು, ಆದರೆ ಹುಡುಗಿಯರನ್ನು ಇಂಪ್ರೆಸ್ ಮಾಡಲು ನೀವು ಕೆಲವು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಆ ರೀತಿ ಮಾತುಗಳನ್ನಾಡಿದರೆ, ಯಾವ ಹುಡುಗಿಯೇ ಆದರೂ ನಿಮ್ಮ ಮೇಲೆ ಇಂಪ್ರೆಸ್ ಆಗುವುದು ಪಕ್ಕಾ. ಹೀಗೆ ಹುಡುಗಿಯರನ್ನು ಇಂಪ್ರೆಸ್ ಮಾಡಲು ಗಮನದಲ್ಲಿ ಇಟ್ಟುಕೊಳ್ಳಬೇಕಾದ ಅಂಶಗಳನ್ನು ತಿಳಿಸಿಕೊಡುತ್ತೇವೆ ನೋಡಿ..

*ಹುಡುಗಿಯ ನಂಬರ್ ನಿಮಗೆ ಸಿಕ್ಕಾಗ, ಅಥವಾ ಹುಡುಗಿಯ ಪರಿಚಯ ಆದಾಗ, ಮೊದಲಿಗೆ ಆಕೆಗೆ ಮಾತನಾಡಲು ಅವಕಾಶ ಕೊಡಿ. ನೀವೇ ಹೆಚ್ಚಾಗಿ ಮಾತನಾಡುತ್ತಾ ಇದ್ದರೆ, ಆಕೆ ವಿಮುಖವಾಗಿ ಬೇಸರ ಪಟ್ಟುಕೊಳ್ಳಬಹುದು. ಅದರಿಂದ ಹುಡುಗಿಗೆ ಮಾತಮಾಡುವ ಅವಕಾಶ ಕೊಡಿ, ಇದರಿಂದ ಹುಡುಗಿಗೆ ನಿಮ್ಮ ಮೇಲೆ ಆಸಕ್ತಿ ಬೆಳೆಯಬಹುದು.
*ಚಾಟ್ ಮಾಡುವಾಗ ತಮಾಷೆಯ ವಿಚಾರಗಳ ಬಗ್ಗೆ ಚಾಟ್ ಮಾಡಿ, ಸಿನಿಮಾ, ಹಾಡುಗಳು ಇವುಗಳ ಬಗ್ಗೆ ಮಾತನಾಡಿ. ಹುಡುಗಿಗೆ ಪ್ರಯಾಣ ಮಾಡಲು ಇಷ್ಟವಿದ್ದರೆ, ನೀವು ಹೋಗಿರುವ ಜಾಗಗಳ ಬಗ್ಗೆ ಮಾತನಾಡಿ, ಮುಂದಿನ ದಿನಗಳಲ್ಲಿ ಆಕೆಯ ಜೊತೆಗೆ ಎಲ್ಲೆಲ್ಲಿ ಹೋಗಬೇಕು ಎಂದುಕೊಂಡಿದ್ದೀರೋ, ಆ ಸ್ಥಳಗಳ ಬಗ್ಗೆ ಮಾತನಾಡಿ.

*ಹುಡುಗಿಯ ವಿಚಾರದಲ್ಲಿ ತಾಳ್ಮೆ ಬಹಳ ಮುಖ್ಯ, ನಿಮ್ಮ ಮನಸ್ಸಿನಲ್ಲಿ ಇರುವುದನ್ನು ಹೇಳಿದ ಬಳಿಕ, ಉತ್ತರ ಕೊಡಲು ಆಕೆಗೆ ಸಮಯ ಕೊಡಿ. ನಾಚಿಕೆ ತುಂಬಿದ ಹೂವಿನಂತೆ ತೆರೆದುಕೊಳ್ಳಲು ಆಕೆಗೆ ಸಮಯ ಕೊಡುವುದು ಬಹಳ ಮುಖ್ಯ ಆಗುತ್ತದೆ. ಅವಳು ಕೂಡ ನಿಮ್ಮ ಹಾಗೆಯೇ ಅದೇ ದೋಣಿಯಲ್ಲೇ ಇದ್ದಾಳೆ.
*ಹುಡುಗರು ಹುಡುಗಿಯರನ್ನು ಇಂಪ್ರೆಸ್ ಮಾಡಲು ಆರಂಭದಲ್ಲಿಯೇ ತಮ್ಮ ಬಗ್ಗೆ ತಾವೇ ಅತಿಯಾಗಿ ಹೇಳಿಕೊಳ್ಳುವುದನ್ನು ಮಾಡುತ್ತಾರೆ, ಆದರೆ ಆ ರೀತಿ ಮಾಡಬೇಡಿ. ಹಾಗೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ತೊಂದರೆ ಉಂಟಾಗಬಹುದು.
*ಹುಡುಗಿಯ ಜೊತೆಗೆ ವಿಶಿಷ್ಟವಾಗಿರಿ, ಮಾತನಾಡುವಾಗ ಆಸ್ತಿ ಬಗ್ಗೆ ಮಾತನಾಡುವುದಕ್ಕಿಂತ, ನಿಮ್ಮಿಬ್ಬರಿಗೂ ಇರುವ ಸೃಜನಶೀಲತೆ ಬಗ್ಗೆ ಮಾತನಾಡಿ. ಚಾಟ್ ನಲ್ಲಿ ಇವುಗಳನ್ನು ಚರ್ಚಿಸಿ.

Comments are closed.