Neer Dose Karnataka
Take a fresh look at your lifestyle.

ಶುರುವಾಯಿತು ಇಂದಿನಿಂದ ನಿಮ್ಮ ಅದೃಷ್ಟ: ಈ ತಿಂಗಳಿನಲ್ಲಿ ಕಷ್ಟವೆಲ್ಲ ಕಳೆದು ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೆಪ್ಟೆಂಬರ್ ತಿಂಗಳಿನಲ್ಲಿ ಸಾಕಷ್ಟು ರಾಶಿಗಳ ಸ್ಥಾನ ಬದಲಾವಣೆ ಆಗಲಿದ್ದು, ಅದರಿಂದ ಈ ತಿಂಗಳು ಬಹಳ ವಿಶೇಷವಾಗಿ ಇರಲಿದೆ, ಗಣೇಶ ಹಬ್ಬದಿಂದ ಸೆಪ್ಟೆಂಬರ್ ತಿಂಗಳು ಶುರುವಾಗುತ್ತದೆ. ಸೆಪ್ಟೆಂಬರ್ 10ರಂದು ಬುಧ ಗ್ರಹವು, ಕನ್ಯರಾಶಿಯಲ್ಲಿ ಹಿಮ್ಮೆಟ್ಟಲಿದೆ, ಸೆಪ್ಟೆಂಬರ್ 17ರಂದು ಶುಕ್ರನು ಸಿಂಹರಾಶಿಯಿಂದ ಸಂಚರಿಸಲಿದ್ದಾನೆ, ಇನ್ನೊಂದೆಡೆ ಸೆಪ್ಟೆಂಬರ್ 17ರಂದು ಸೂರ್ಯ ಕನ್ಯಾರಾಶಿಗೆ ಸಾಗಲು ಪ್ರಾರಂಭಿಸುತ್ತಾನೆ. ಸೆಪ್ಟೆಂಬರ್ 24ರಂದು ಶುಕ್ರ ಕನ್ಯಾರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದರಿಂದ ಯಾವ ರಾಶಿಗಳಿಗೆ ಒಳ್ಳೆಯಫಲ ಸಿಗುತ್ತದೆ ಎಂದು ತಿಳಿಯೋಣ..

ಮೇಷ ರಾಶಿ :- ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಶುಭವಾಗಿರುತ್ತದೆ. ಆರ್ಥಿಕ ವಿಚಾರದಲ್ಲಿ ಲಾಭವಾಗಲಿದೆ, ಹಲವು ಮೂಲಗಳಿಂದ ಹಣ ಗಳಿಸುತ್ತೀರಿ, ಕುಟುಂಬದ ಜೀವನ ಚೆನ್ನಾಗಿರುತ್ತದೆ. ವಿದ್ಯಾರ್ಥಿಗಳು ಯಶಸ್ಸು ಕಾಣುತ್ತೀರಿ.

ವೃಷಭ ರಾಶಿ :- ಈ ತಿಂಗಳು ನಿಮ್ಮ ವೃತ್ತಿ ಜೀವನದಲ್ಲಿ ಒಳ್ಳೆಯ ಹೆಸರು ಮತ್ತು ಯಶಸ್ಸು ಪಡೆಯುತ್ತೀರಿ. ನಿಮಗೆ ಮೆಚ್ಚುಗೆ ಸಿಗುತ್ತದೆ. ವೃತ್ತಿಯಲ್ಲಿ ಏಳಿಗೆ ಕಾಣುತ್ತೀರಿ, ಮಾಡುವ ಎಲ್ಲಾ ಕೆಲಸದಲ್ಲೂ ಅದೃಷ್ಟ ನಿಮ್ಮ ಜೊತೆಗೆ ಇರುತ್ತದೆ. ವ್ಯಾಪಾರವನ್ನು ಬೇರೆ ಕಡೆಗೆ ವಿಸ್ತರಣೆ ಮಾಡುತ್ತೀರಿ.

ಮಿಥುನ ರಾಶಿ :- ಈ ರಾಶಿಯವರ ವೃತ್ತಿ ಜೀವನ ಅದ್ಭುತವಾಗಿರುತ್ತದೆ. ವೃತ್ತಿಯಲ್ಲಿ ಬಡ್ತಿ ಸಿಗುವ ಸಾಧ್ಯತೆಗಳು ಹೆಚ್ಚಿವೆ. ನಿಮ್ಮ ಸಂಬಳ ಹೆಚ್ಚಾಗಬಹುದು, ವ್ಯಾಪಾರ ಮಾಡುವವರಿಗೆ ಲಾಭ ಸಿಗುತ್ತದೆ. ಹಣಕಾಸಿನ ವಿಚಾರದಲ್ಲಿ ಒಳ್ಳೆಯದಾಗುತ್ತದೆ, ದಾಂಪತ್ಯ ಜೀವನ ಚೆನ್ನಾಗಿರುತ್ತದೆ.

ಕರ್ಕಾಟಕ ರಾಶಿ :- ನಿಮ್ಮ ಉದ್ಯೋಗದ ವಿಚಾರದಲ್ಲಿ ಬಹಳಷ್ಟು ಅವಕಾಶಗಳನ್ನು ಪಡೆಯುತ್ತೀರಿ. ವ್ಯಾಪಾರಸ್ಥರಿಗೆ ಯಶಸ್ಸು ಸಿಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಅವಕಾಶ ಸಿಗುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಆರ್ಥಿಕವಾಗಿ ಸಬಲರಾಗಿರುತ್ತೀರಿ..

ಕನ್ಯಾ ರಾಶಿ :- ಎಲ್ಲಾ ವಿಷಯಗಳಲ್ಲೂ ಅದೃಷ್ಟ ಮತ್ತು ಬೆಂಬಲ ಪಡೆಯುವ ನೀವು, ಉದ್ಯೋಗದ ವಿಚಾರದಲ್ಲಿ ಯಶಸ್ಸು ಪಡೆಯುತ್ತೀರಿ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಪ್ರೀತಿ ಮತ್ತು ದಾಂಪತ್ಯ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಆರ್ಥಿಕವಾಗಿ ಬಲವಾಗಿ ಇರುತ್ತೀರಿ. ಮಾಡುವ ಕೆಲಸಗಳಲ್ಲಿ ಆತುರ ಪಡಬೇಡಿ.

ಮಕರ ರಾಶಿ :- ಪ್ರೀತಿ ನತ್ತು ಕೌಟುಂಬಿಕ ಜೀವನದ ವಿಷಯದಲ್ಲಿ ಒಳ್ಳೆಯ ಫಲಿತಾಂಶ ಸಿಗುತ್ತದೆ. ಹೆಚ್ಚಿನ ಹಣ ಸಿಗುವ ಅವಕಾಶ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿರುವವರಿಗೆ ಒಳ್ಳೆಯ ರಿಸಲ್ಟ್ ಸಿಗುತ್ತದೆ. ಆರ್ಥಿಕ ಸ್ಥಿತಿ ಅನುಕೂಲಕರವಾಗಿರುತ್ತದೆ.

Comments are closed.