Neer Dose Karnataka
Take a fresh look at your lifestyle.

ಕಷ್ಟ ಎಂದು ಬಂದ ಹಿರಿಯ ನಟನಿಗೆ ದರ್ಶನ್ ಎಂಥಹ ಮಾತು ಹೇಳಿದ್ದಾರೆ ಗೊತ್ತಾ ? ಕಣ್ಣೀರಿಟ್ಟ ಫ಼್ಯಾನ್ಸ್

ನಟ ಡಿಬಾಸ್ ದರ್ಶನ್ ಅವರು ತಮ್ಮ ನಟನೆಯಿಂದ ಮಾತ್ರವಲ್ಲದೆ ಒಳ್ಳೆಯ ಸ್ವಭಾವಜ್ ಸಹಾಯ ಮನೋಭಾವದಿಂದ ಕೋಟ್ಯಾಂತರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ದರ್ಶನ್ ಅವರು ಚಿತ್ರರಂಗದಲ್ಲಿ ಸಹ ಕಷ್ಟದಲ್ಲಿ ಇರುವ ಎಲ್ಲರಿಗೂ ಸಹಾಯ ಮಾಡುತ್ತಾರೆ. ಹೊಸ ಚಿತ್ರತಂಡಗಳಿಗೆ ಸಾಥ್ ನೀಡುತ್ತಾರೆ. ದರ್ಶನ್ ಅವರ ಈ ಗುಣವನ್ನು ಅಭಿಮಾನಿಗಳು ಆರಾಧಿಸುತ್ತಾರೆ. ಇದೀಗ ನಟ ದರ್ಶನ್ ಅವರು ಕನ್ನಡ ಚಿತ್ರರಂಗದ ಖ್ಯಾತ ಹಿರಿಯನಟನ ಸಹಾಯಕ್ಕೆ ನಿಂತಿದ್ದಾರೆ.

ದರ್ಶನ್ ಅವರು ಸಾಥ್ ನೀಡುತ್ತಿರುವ ಕನ್ನಡ ಚಿತ್ರರಂಗದ ಈ ಹಿರಿಯನಟ ಈವರೆಗೂ 500ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿವಿಧ ಪಾತ್ರಗಳಲ್ಲಿ ಕಾಣಿಕೊಂಡಿದ್ದಾರೆ. 80ರ ದಶಕದಿಂದ ಇಲ್ಲಿಯವರೆಗೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆ ನಟ ಮತ್ಯಾರು ಅಲ್ಲ, ಹಾಸ್ಯ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿ ಆಗಿರುವ ಬಿರಾದಾರ್ ಅವರು. ಇವರನ್ನು ನೂರಾರು ಸಿನಿಮಾಗಳಲ್ಲಿ ನಾವು ನೋಡಿರುತ್ತೇವೆ. ಇದೀಗ ಬಿರಾದಾರ್ ಅವರು ನಾಯಕನಾಗಿ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಹೆಸರು 90 ಬಿಡಿ ಮನೆಗ್ ನಡಿ.

ಈ ಸಿನಿಮಾಗೆ ದರ್ಶನ್ ಅವರು ಸಾಥ್ ನೀಡಿದ್ದಾರೆ, “90 ಬಿಡಿ ಮನೆಗ್ ನಡಿ ಸಿನಿಮಾದಲ್ಲಿ 71 ವರ್ಷದ ಬಿರಾದಾರ್ ಅವರು ನಟಿಸಿದ್ದಾರೆ, ಅವರನ್ನು ನೋಡಿದರೆ 71 ವರ್ಷ ಅಂತ ಗೊತ್ತಾಗಲ್ಲ, ಅವರ ಡ್ಯಾನ್ಸ್ ಮಾಡಿರೋದನ್ನೆಲ್ಲ ನೋಡಿದರೆ ಅಷ್ಟು ದೊಡ್ಡವರು ಅಂತ ಅನ್ನಿಸೋದೆ ಇಲ್ಲ. ಬಿರಾದಾರ್ ಅವರು 500ಕ್ಕಿಂತ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ, 500 ಸಿನಿಮಾ ಅನ್ನೋದು ಸುಲಭದ ವಿಚಾರ ಅಲ್ಲ. ಬಿರಾದಾರ್ ಅವರ 90ಬಿಡಿ ಮನೆಗ್ ನಡಿ ಸಿನಿಮಾವನ್ನು ಎಲ್ಲರೂ ತಪ್ಪದೇ ಥಿಯೇಟರ್ ನಲ್ಲಿ ನೋಡಿ ಎಲ್ಲರೂ ಹಾರೈಸಿ..” ಎಂದು ದರ್ಶನ್ ಅವರು ಹಿರಿಯ ನಟ ಬಿರಾದಾರ್ ಅವರಿಗೆ ಸಾಥ್ ನೀಡಿದ್ದು, ಅಭಿಮಾನಿಗಳು ದರ್ಶನ್ ಅವರ ಒಳ್ಳೆಯತನಕ್ಕೆ ಭಾವುಕರಾಗಿದ್ದಾರೆ.

Comments are closed.