Neer Dose Karnataka
Take a fresh look at your lifestyle.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಜೋಡಿಗಳಲ್ಲಿ ಇಬ್ಬರಿಗೂ ಇದು ಮೊದಲನೇ ಮದುವೆಯಲ್ಲ. ನಟಿಗೆ ಎಷ್ಟನೇ ಮದುವೆ ಗೊತ್ತೇ?? ನಿರ್ಮಾಪಕನಿಗೆ??

ಕೆಲವೊಮ್ಮೆ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಡೆಯುವ ಕಲಾವಿದರ ಮದುವೆಗಳು ನಮಗೆ ಆಶ್ಚರ್ಯ ಉಂಟು ಮಾಡುತ್ತದೆ. ಅಭಿಮಾನಿಗಳಿಗೆ ನಂಬಲು ಸಹ ಕಷ್ಟ ಎನ್ನಿಸುತ್ತದೆ. ಅಂತಹ ಒಂದು ಮದುವೆ ನಿನ್ನೆ ತಿರುಪತಿಯಲ್ಲಿ ನಡೆದಿದ್ದು, ನಟಿಯ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದು ತಮಿಳಿನ ಖ್ಯಾತ ನಟಿ ಹಾಗೂ ನಿರೂಪಕಿ ಮಹಾಲಕ್ಷ್ಮಿ. ಇವರು ತಮಿಳು ಸಿನಿಮಾ ನಿರ್ಮಾಪಕ ರವಿಂದರ್ ಚಂದ್ರಶೇಖರ್ ಅವರೊಡನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ಮದುವೆ ಡಿಸೆಂಬರ್ 1 ರಂದು ನಡೆದಿದೆ.

ಮಹಾಲಕ್ಷ್ಮಿ ಅವರು ನಿರೂಪಕಿಯಾಗಿ ತಮ್ಮ ಕೆರಿಯರ್ ಶುರು ಮಾಡಿದರು, ಪ್ರಸ್ತುತ ನಟಿಯಾಗಿ ಸಹ ಮಿಂಚುತ್ತಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಸಕ್ರಿಯರಾಗಿದ್ದಾರೆ. ಮಹಾರಾಸಿ ಎನ್ನುವ ತಮಿಳು ಧಾರವಾಹಿಯಲ್ಲಿ ಪ್ರಸ್ತುತ ನಟಿಸುತ್ತಿದ್ದಾರೆ ಮಹಾಲಕ್ಷ್ಮಿ. ರವೀಂದರ್ ಅವರು ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಇವರು ನಿರ್ಮಾಣ ಮಾಡಿದ ವಿಡಿಯುಮ್ ವರೈ ಕಾತಿರು ಸಿನಿಮಾದಲ್ಲಿ ಮಹಾಲಕ್ಷ್ಮಿ ಸಹ ನಟಿಸಿದ್ದರು, ಆಗಿನಿಂದ ಇಬ್ಬರ ಪರಿಚಯವಾಗಿ ಇದೀಗ ಮದುವೆಯಾಗಿದ್ದಾರೆ, ತಿರುಪತಿಯಲ್ಲಿ ಈ ಜೋಡಿಯ ಮದುವೆ ನಡೆದಿದೆ. ಮಹಾಲಕ್ಷ್ಮಿ ಅವರು ಮದುವೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, “ನಿಮ್ಮನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೆ, ನೀವು ನನ್ನ ಜೀವನವನ್ನು ಪ್ರೀತಿಯಿಂದ ತುಂಬಿಸಿದ್ದೀರಿ..” ಎಂದು ಬರೆದುಕೊಂಡಿದ್ದಾರೆ.

ರವಿಂದರ್ ಅವರು ಸಹ ಮದುವೆ ಫೋಟೋಗಳನ್ನು ಶೇರ್ ಮಾಡಿ, “ಮಹಾಲಕ್ಷ್ಮಿ ಅಂತಹ ಹುಡುಗಿ ಸಿಕ್ಕರ್, ಜೀವನ ಚೆನ್ನಾಗಿರುತ್ತದೆ..” ಎಂದು ಬರೆದುಕೊಂಡಿದ್ದಾರೆ. ಇವರಿಬ್ಬರಿಗೂ ಇದು ಎರಡನೇ ಮದುವೆ ಎನ್ನುವುದು ಹಲವರಿಗೆ ಗೊತ್ತಿರದ ವಿಚಾರ. ಈ ಮದುವೆ ಫೋಟೋ ನೋಡಿ ಮಹಾಲಕ್ಷ್ಮಿ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಶಾಕ್ ಆಗಿದ್ದಾರೆ. ಕೆಲವರು ಈ ಜೋಡಿಯ ಮದುವೆಗೆ ಶುಭ ಕೋರುತ್ತಿದ್ದರೆ, ಇನ್ನು ಕೆಲವರು ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ, ಮತ್ತು ಕೆಲವರು ಇದು ನಿಜವಾದ ಮದುವೆಯೋ ಅಥವಾ ಸಿನಿಮಾ ಧಾರಾವಾಹಿಯ ಮದುವೆಯೋ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಈ ಮದುವೆ ಭಾರಿ ಸಂಚಲನ ಸೃಷ್ಟಿಸುತ್ತಿದೆ ಎಂದರೆ ತಪ್ಪಾಗುವುದಿಲ್ಲ.

Comments are closed.