Neer Dose Karnataka
Take a fresh look at your lifestyle.

ಟಾಪ್ ನಿರೂಪಕಿಯಾಗಿ ಮಿಂಚುತ್ತಿರುವ ತೆಲುಗಿನ ಸುಮಾ ರವರಿಗೆ ಇಂದಿಗೂ ಕೂಡ ಅದೊಂದು ಚಿಂತೆ ಕಾಡುತ್ತಿದೆ. ಪ್ರತಿದಿನ ನೋವಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಏನು ಗೊತ್ತೇ??

311

ತೆಲುಗು ಕಿರುತೆರೆಯ ರಾಣಿಯಾಗಿರುವ ಸುಮಾ ಅವರ ಬಗ್ಗೆ ವಿಶೇಷ ಪರಿಚಯ ಬೇಕಿಲ್ಲ. ಹಲವು ವರ್ಷಗಳಿಂದ ಆ್ಯಂಕರಿಂಗ್ ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶಿನದಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಒಂದೆಡೆ ರಿಯಾಲಿಟಿ ಶೋಗಳು ಮತ್ತೊಂದೆಡೆ ಪ್ರೀ ರಿಲೀಸ್ ಕಾರ್ಯಕ್ರಮಗಳು, ಸಕ್ಸಸ್ ಮೀಟ್ ಗಳು ಇವುಗಳಲ್ಲಿ ಸುಮಾ ಅವರು ಸದಾ ಬ್ಯುಸಿ ಇರುತ್ತಾರ್ರ್. ಇತ್ತೀಚೆಗಷ್ಟೇ ಸುಮಾ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಆರಂಭಿಸಿರುವುದು ಗೊತ್ತೇ ಇದೆ. ಅದರಲ್ಲಿ, ಸುಮಾ ಅವರು ತಮ್ಮ ಕುಟುಂಬದ ಬಗ್ಗೆ ಎಲ್ಲವನ್ನೂ ಹೇಳುವ ವೀಡಿಯೊಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಪ್ರೇಕ್ಷಕರು ಕೇಳುವ ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸುತ್ತಾರೆ. ಆದರೆ ಇತ್ತೀಚೆಗಷ್ಟೇ ಸುಮಾ ಅವರ ಅತ್ತೆ ಮತ್ತು ಮಾವ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಸುಮ ಅವರಿಗೆ ಅತ್ತೆ ಅಂದ್ರೆ ತುಂಬಾ ಇಷ್ಟ. ಅಮ್ಮನ ನಂತರ ಸುಮಾ ಅತ್ತೆಯನ್ನೇ ಅಮ್ಮ ಎಂದು ಭಾವಿಸಿದ್ದರು, ಅಮ್ಮನಿಲ್ಲದ ಕಾರಣಕ್ಕೆ ಅವರ ದುಃಖ ಹೆಚ್ಚಾಗಿದೆ. ಎಷ್ಟೇ ಫಂಕ್ಷನ್, ಶೋಗಳಿಗೆ ಹೋದರೂ ಮಕ್ಕಳನ್ನು ಸುಮಾ ಅವರಿಗಿಂತ ಚೆನ್ನಾಗಿ ನೋಡಿಕೊಳ್ಳುತ್ತಿದ್ದರಂತೆ ಅವರ ಅತ್ತೆ. ಆದರೆ ಸುಮಾ ಅವರು ಈಗ ಪ್ರತಿದಿನ ಎಲ್ಲಾ ಕೆಲಸಗಳನ್ನು ಮುಗಿಸಿ ಮನೆಗೆ ಹೋದಾಗ ಅತ್ತೆ ಅವರ ಫೋಟೋ ನೋಡಿ ಬೇಸರ ಮಾಡಿಕೊಳ್ಳುತ್ತಾರಂತೆ. ಕಣ್ಣೀರು ಹಾಕುತ್ತಾರಂತೆ. ನಮ್ಮ ಜೊತೆಗಿರುವಾಗ ನಮ್ಮ ಯಾವ ಜನರ ಬೆಲೆಯೂ ಗೊತ್ತಾಗುವುದಿಲ್ಲ. ಸೋತಾಗ ಮಾತ್ರ ಗೊತ್ತು ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.

ಸುಮಾ ಅವರ ಪ್ರೊಫೈಲ್ ವಿವರವಾಗಿ ಹೇಳುವುದು ಕಷ್ಟ. ಇವರ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ ಸ್ಟಾರ್ ಆಂಕರ್, ಒಳ್ಳೆಯ ಜೀವನ, ಲಕ್ಷಾಂತರ ಅಭಿಮಾನಿಗಳು ಮತ್ತು ಕೋಟಿಗಳಲ್ಲಿ ಆದಾಯ. ಎರಡು ದಶಕಗಳಿಂದ ಆಕೆ ನಂಬರ್ ಒನ್ ಸ್ಥಾನದಿಂದ ಕೆಳಗಿಳಿದಿಲ್ಲ. ಸುಮಾ ಮದುವೆಯಾಗಿದ್ದು 1999 ರಲ್ಲಿ, ಅಂದರೆ ಸುಮಾರು 23 ವರ್ಷಗಳು ಕಳೆದಿವೆ. ಸುಮಾ ಅವರು ಅವರು ನಟ ರಾಜೀವ್ ಕನಕಾಲ ಅವರೊಡನೆ ಮದುವೆಯಾದರು. ಸುಮಾ ಮಲಯಾಳಿ ಹುಡುಗಿಜ್ ನಾಯಕಿಯಾಗಲು ಪ್ರಯತ್ನಿಸುತ್ತಿದ್ದ ದಿನಗಳಲ್ಲಿ ರಾಜೀವ್ ಪರಿಚಯವಾಯಿತು. ಆ ಪರಿಚಯ ಪ್ರೀತಿಗೆ ತಿರುಗಿತ್ತು. ಮದುವೆಯ ನಂತರ ನಟನೆ ಬಿಡಬೇಕು ಎಂದು ರಾಜೀವ್ ಕನಕಾಲ ಕಂಡೀಷನ್ ಹಾಕಿದಾಗ ಸುಮಾ ಸಿಟ್ಟು ಮಾಡಿಕೊಂಡಿದ್ದರಂತೆ. ನಂತರ ಇಬ್ಬರೂ ರಾಜಿ ಮಾಡಿಕೊಂಡು ಮದುವೆಯಾದರು.

Leave A Reply

Your email address will not be published.