Neer Dose Karnataka
Take a fresh look at your lifestyle.

ನೇರವಾಗಿ ಬಿಗ್ ಬಾಸ್ ಗೆ ಅವಮಾನ ಮಾಡಿದ ಸೋನು ಶ್ರೀನಿವಾಸ್ ಗೌಡ: ನೇರವಾಗಿ ಕ್ಲಾಸ್ ತೆಗೆದುಕೊಂಡ ಸುದೀಪ್ ಹೇಳಿದ್ದೇನು ಗೊತ್ತೇ??

ಬಿಗ್ ಬಾಸ್ ಓಟಿಟಿ ಶೋನಲ್ಲಿ 4 ವಾರಗಳು ಮುಗಿದು ಹೋಗಿದೆ. ಇನ್ನುಳಿದಿರುವುದು ಎರಡೇ ವಾರಗಳು. ಈ ವಾರ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರಬಂದಿದ್ದಾರೆ. ಈ ವಾರ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಅವರು ಸೋನು ಶ್ರೀನಿವಾಸ್ ಗೌಡ ಅವರಿಗೆ ಸಕ್ಕತ್ತಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಎಷ್ಟು ಎಚ್ಚರಿಕೆಯಿಂದ ಇದ್ದರು ಕಡಿಮೆಯೆ, 24 ಗಂಟೆಗಳ ಕಾಲ ಪ್ರತಿ ಕ್ಯಾಮೆರಾ ಅವರ ಚಲನವಲನಗಳನ್ನು ಸೆರೆಹಿಡಿಯುತ್ತಾ ಇರುತ್ತದೆ, ಅವರ ನಡೆನುಡಿ ಚೆನ್ನಾಗಿಲ್ಲದೆ ಹೋದರೆ, ಜನರಿಗೆ ಅವರ ಮೇಲಿನ ಅಭಿಪ್ರಾಯವೆ ಬದಲಾಗಿ ಹೋಗಬಹುದು. ಅದೇ ರೀತಿ ಸೋನು ಶ್ರೀನಿವಾಸ್ ಗೌಡ ವಿಚಾರದಲ್ಲೂ ಆಗಿದೆ..

ಮನೆಯ ಸದಸ್ಯರು ರೂಲ್ಸ್ ಬ್ರೇಕ್ ಮಾಡಿದಾಗ, ತಪ್ಪು ಮಾಡಿದಾಗ ಬಿಗ್ ಬಾಸ್ ಆದೇಶ ಕೊಡುತ್ತಾರೆ, ಅದೇ ರೀತಿ ಸೋನು ಅವರಿಗೆ ಆದೇಶ ಕೊಟ್ಟಾಗ, ಬಿಗ್ ಬಾಸ್ ಗೆ ಆವಾಜ್ ಹಾಕಿ ಮಾತನಾಡಿದ್ದಾರೆ ಸೋನು, ಅಷ್ಟೇ ಅಲ್ಲದೆ, ಸೋನು ಅವರಿಗೆ ಅಡುಗೆ ಮಾಡಲು ಚೆನ್ನಾಗಿಯೇ ಬರುತ್ತದೆ. ಆದರೆ ಅದನ್ನು ಇಷ್ಟುದಿನಗಳ ಕಾಲ ಹೇಳಿಕೊಂಡಿರಲಿಲ್ಲ. ನಾಲ್ಕನೇ ವಾರ ಟಾಸ್ಕ್ ಬಂದಾಗ ಈ ವಿಚಾರ ಬಯಲಾಗಿದೆ. ಅಡುಗೆ ಬರುತ್ತೆ ಅಂತ ಹೇಳಿದರೆ, ಅಲ್ಲಿಗೇ ಹಾಕಿ ಕೆಲಸ ಹೇಳ್ತಾರೆ ಅಂತ ಇಷ್ಟು ದಿನ ಅಡುಗೆ ಬರುತ್ತೆ ಎಂದು ಹೇಳಿರಲಿಲ್ಲವಂತೆ ಸೋನು. ಹಾಗೆಯೇ ಮನೆಯ ಇತರೆ ಸದಸ್ಯರಿಗೂ ಸಹ ಸೋನು ಶ್ರೀನಿವಾಸ್ ಗೌಡ ಏಕವಚನದಲ್ಲಿ ಮರಿಯಾದೆ ಇಲ್ಲದೆ ಮಾತನಾಡಿಸುವುದನ್ನು ಸಹ ಸುದೀಪ್ ಅವರು ಗಮನಿಸಿದ್ದು, ವೀಕೆಂಡ್ ಎಪಿಸೋಡ್ ನಲ್ಲಿ ಸೋನು ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

“ನೀವು ಏಕವಚನದಲ್ಲಿ ಮಾತನಾಡುವ ರೀತಿ ಕೆಲವೊಮ್ಮೆ ಚಪ್ಪಲಿಯಿಂದ ಹೊಡೆದ ಹಾಗೆ ಇರುತ್ತದೆ, ಏಕವಚನದಲ್ಲಿ ಮಾತನಾಡುವುದು ತಪ್ಪಲ್ಲ, ಆದರೆ ನೀವು ಮಾತನಾಡುವ ಏಕವಚನದಲ್ಲಿ ಗೌರವ ಕಾಣಿಸುವುದಿಲ್ಲ. ಬಿಗ್ ಬಾಸ್ ಮಾತಿಗೆ ಮರಿಯಾದೆ ಕೊಡೋದಿಲ್ಲ, ಇನ್ನುಮುಂದೆ ಬಿಗ್ ಬಾಸ್ ನಿಮಗೆ ಯಾವುದೇ ಆದೇಶ ನೀಡೋದಿಲ್ಲ, ಮನೆಯಲ್ಲಿರೋ ಒಂದು ಪ್ರಾಪರ್ಟಿ ಥರಾ ನೀವು ಕೂಡ ಇರಬಹುದು. ಮನೆಯವರು ಯಾರು ಕೂಡ ನಿಮಗೆ ಯಾವುದೇ ಕೆಲಸ ಹೇಳೋದಿಲ್ಲ. ನೀವು ಕೆಲಸ ಮಾಡೋದು ಬೇಡ. ಅಡುಗೆ ಮನೆ ಕೆಲಸಕ್ಕೆ ಹಾಕಿದರೆ ಏನು ತಪ್ಪು, ಅದರಲ್ಲಿ ಏನಿದೆ.. ಅಡುಗೆ ಮನೆ ಕೆಲಸ ಮಾಡುವ ಬೇರೆ ಸದಸ್ಯರಿಗೆ ಏನು ಸಮಸ್ಯೆ ಆಗಿದೆ, ಅವರೆಲ್ಲಾ ಇಲ್ಲವಾ, ಅವರ್ಯಾರೂ ಕೆಲಸ ಮಾಡುತ್ತಿಲ್ಲವಾ.. ನಾನು ನಿಮಗೆ ಬೈತಾ ಇಲ್ಲ, ಹೊರಗಿನ ಜನರ ಕಣ್ಣಿಗೆ ನೀವು ಹೇಗೆ ಕಾಣಿಸ್ತಿರಾ ಅಂತ ಹೇಳ್ತಾ ಇದ್ದೀನಿ..” ಎಂದು ಹೇಳಿದ್ದಾರೆ ಸುದೀಪ್. ಸುದೀಪ್ ಅವರ ಮಾತಿಗೆ ಕಣ್ಣೀರು ಹಾಕಿದ ಸೋನು ಶ್ರೀನಿವಾಸ್ ಗೌಡ, ಇನ್ನುಮುಂದೆ ಆ ರೀತಿ ಇರುವುದಿಲ್ಲ ಎಂದಿದ್ದಾರೆ.

Comments are closed.