Neer Dose Karnataka
Take a fresh look at your lifestyle.

ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿಯೇ ಜನರ ಮನಗೆದ್ದು ಬಿಟ್ಟ ಸ್ಪರ್ಧಿ. ಇವರೇ ಗೆಲ್ಲುವುದು ಫಿಕ್ಸ್ ಆಗಿದ್ಯಾ??

ಬಿಗ್ ಬಾಸ್ ಓಟಿಟಿ ಶೋ ಮೊದಲ ಸೀಸನ್ ನಲ್ಲಿ ವಾರಗಳು ಮುಗಿದು, ಐದನೇ ವಾರ ಶುರುವಾಗಿದೆ. ಈಗ ಮನೆಯಲ್ಲಿ 9 ಜನ ಸ್ಪರ್ಧಿಗಳು ಇದ್ದು, ಇನ್ನುಳಿದಿರುವುದು ಎರಡು ವಾರಗಳು ಮಾತ್ರ. ಓಟಿಟಿ ಶೋ 6 ವಾರಗಳ ಕಾಲ ನಡೆಯಲಿದ್ದು, ಈ ಶೋ ಮುಗಿದ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 9 ಟಿವಿ ಶೋ ಶುರುವಾಗಲಿದೆ, ಓಟಿಟಿ ಶೋನ ಟಾಪ್ 5 ಸ್ಪರ್ಧಿಗಳು ಬಿಬಿಕೆ9 ಗೆ ನೇರವಾಗಿ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗಿದೆ. ಬಿಗ್ ಮನೆಯಿಂದ ನಾಲ್ಕನೇ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದಾರೆ, ಚೈತ್ರಾ ಅವರು ಹಾಗೂ ಅಕ್ಷತಾ ಮನೆಯಿಂದ ಹೊರಬಂದಿದ್ದಾರೆ.

ಪ್ರಸ್ತುತ ಮನೆಯಲ್ಲಿ ನಂದಿನಿ, ಜಶ್ವಂತ್, ಸಾನ್ಯಾ, ರೂಪೇಶ್, ರಾಕೇಶ್, ಸೋನು, ಜಯಶ್ರೀ, ಸೋಮಣ್ಣ ಹಾಗೂ ಆರ್ಯವರ್ಧನ್ ಬಿಗ್ ಮನೆಯಲ್ಲಿದ್ದಾರೆ. ಇವರ ನಡುವೆ ಬಿಗ್ ಬಾಸ್ ಕನ್ನಡ ಓಟಿಟಿ ಶೋ ಸೀಸನ್ 1ರ ವಿನ್ನರ್ ಯಾರಾಗಬಹುದು ಎನ್ನುವ ಚರ್ಚೆ ಶುರುವಾಗಿದ್ದು, ಆ ಒಬ್ಬ ಸ್ಪರ್ಧಿ ವಿನ್ನರ್ ಆಗಬಹುದು ಎನ್ನುವ ಮಾತುಗಳು ಹಾಗೂ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಆ ಸ್ಪರ್ಧಿ ಮತ್ಯಾರು ಅಲ್ಲ, ಮಂಗಳೂರಿನ ಹುಡುಗ, ಆರ್.ಜೆ ಆಗಿ ಕೆಲಸ ಮಾಡಿ, ತುಳು ಸಿನಿಮಾ ರಂಗದಲ್ಲಿ ಸ್ಟಾರ್ ಆಗಿರುವ ರೂಪೇಶ್ ಶೆಟ್ಟಿ ಅವರು. ಆರಂಭದಲ್ಲಿ ರೂಪೇಶ್ ಅವರು ಟಾಸ್ಕ್ ಗಳಲ್ಲಿ ಸ್ವಲ್ಪ ವೀಕ್ ಎಂದೆ ತೋರಿದ್ದರು. ಆದರೆ, ರೂಪೇಶ್ ಅವರು ಈಗ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದಾರೆ.

ನಾಲ್ಕನೇ ವಾರ ಮುಗಿದು, ಐದನೇ ವಾರ ಬರುವ ಹೊತ್ತಿಗೆ ಟಾಸ್ಕ್ ಗಳಲ್ಲಿ ಮುಂದಿದ್ದಾರೆ, ಜೊತೆಗೆ ಎಂಟರ್ಟೈನ್ಮೆಂಟ್ ನಲ್ಲೂ ಮುಂದಿದ್ದಾರೆ. ರಾಪ್ ಹಾಡುಗಳನ್ನು ಬರೆದು ಮನೆಯ ಸ್ಪರ್ಧಿಗಳನ್ನು ಹಾಗೂ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ನಾಲ್ಕನೇ ವಾರ ನಡೆದ ಕ್ಯಾಪ್ಟನ್ಸಿ ಟಾಸ್ಕ್ ಗೆದ್ದು, ಐದನೇ ವಾರದ ಕ್ಯಾಪ್ಟನ್ ಆಗಿ ಇಮ್ಯುನಿಟಿ ಪಡೆದು, ಆರನೇ ವಾರಕ್ಕೆ ಎಂಟ್ರಿ ಆಗುವ ಮೂಲಕ, ಫಿನಾಲೆ ವೀಕ್ ಗೆ ಆಯ್ಕೆಯಾಗಿರುವ ಮೊದಲ ಸ್ಪರ್ಧಿ ಆಗಿದ್ದಾರೆ ರೂಪೇಶ್. ದಿನಗಳು ಕಳೆದ ಹಾಗೆ ವೀಕ್ಷಕರಿಗೂ ಬಹಳ ಇಷ್ಟವಾಗುತ್ತಿದ್ದಾರೆ ರೂಪೇಶ್, ಹಲವು ಸಾರಿ ರೂಪೇಶ್ ಅವರಿಗೆ ವೀಕ್ಷಕರು ಸೆಲೆಕ್ಟ್ ಮಾಡಿ ಗಿಫ್ಟ್ ಗಳು ಸಹ ಸಿಕ್ಕಿದೆ. ರೂಪೇಶ್ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಜನರ ಬೆಂಬಲ ಇದ್ದು, ರೂಪೇಶ್ ಅವರೇ ಬಿಗ್ ಬಾಸ್ ಕನ್ನಡ ಓಟಿಟಿ ಶೋ ಸೀಸನ್1 ಗೆಲ್ಲುವುದು ಎನ್ನುವ ಅಭಿಪ್ರಾಯ ಇದೆ.

Comments are closed.