Neer Dose Karnataka
Take a fresh look at your lifestyle.

ಇದ್ದಕ್ಕಿದ್ದ ಹಾಗೆ ಗಂಡ ಮೂರ್ಛೆರೋಗದಿಂದ ಮೃತ ಪಟ್ಟ ಎಂದು ಅಳುತ್ತ ಊರಿಗೆ ಹೋದಳು, ಕೊನೆಗೆ ನವರಂಗಿ ಆಟ ಹೊರಬಿದ್ದಿದ್ದು ಹೇಗೆ ಗೊತ್ತೇ??

ಮದುವೆಯಾದ ನಂತರ ಅನೈತಿಕ ಸಂಬಂಧದ ಕಾರಣ ಗಂಡನನ್ನೇ ಹೆಂಡತಿ ಕೊಲೆ ಮಾಡಿರುವ ಘಟನೆಗಳು ಈಗಾಗಲೇ ಸಾಕಷ್ಟು ನಡೆದಿದೆ. ಇದೀಗ ಇಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಲವ್ವರ್ ಜೊತೆಗೆ ಸೇರಿದ ಮಹಿಳೆ, ಗಂಡನನ್ನೇ ಕೊಲೆ ಮಾಡಿದ್ದು, ಅದನ್ನು ಬೇರೆ ರೀತಿ ತಿರುಗಿಸಿದ್ದಾಳೆ, ಕೊನೆಗೆ ಪ್ರಕರಣ ಪೊಲೀಸರನ್ನು ತಲುಪಿದ್ದು, ಪೊಲೀಸರು ಕೊಲೆ ಮಾಡಿದ್ದು ಈಕೆಯೇ ಎಂದು ಕಂಡುಹಿಡಿದು, ಈ ಮಹಿಳೆಯನ್ನು ಬಂಧಿಸಿದ್ದಾರೆ.

ಮೃತವಾದ ಗಂಡನ ಹೆಸರು ಮಹೇಶ್, ಈತನ ಹೆಂಡತಿ ಹೆಸರು ಶಿಲ್ಪಾ. ಶಿಲ್ಪಾ ಮೂಲತಃ ಬೆಂಗಳೂರಿನ ಹುಡುಗಿ, ಮಹೇಶ್ ಮಂಡ್ಯದ ಹುಡುಗ. ಎಂಟು ವರ್ಷದ ಹಿಂದೆ ಮಹೇಶ್ ಜೊತೆಗೆ ಶಿಲ್ಪಾ ಮದುವೆ ಆಗಿತ್ತು, ಇಬ್ಬರು ಬೆಂಗಳೂರಿನ ಕೋಣನಕುಂಟೆಯಲ್ಲಿ ವಾಸ ಮಾಡುತ್ತಿದ್ದರು. ತನ್ನ ಲವ್ವರ್ ಜೊತೆಗೆ ಸೇರಿ ಪ್ಲಾನ್ ಮಾಡಿ ಗಂಡನನ್ನೇ ಕೊಲೆ ಮಾಡಿದ್ದಾಳೆ. ಆದರೆ ಗಂಡನಿಗೆ ಫಿಟ್ಸ್ ಬಂದು ಸತ್ತು ಹೋಗಿದ್ದಾನೆ ಎಂದು ಎಲ್ಲರನ್ನು ನಂಬಿಸುವ ಪ್ರಯತ್ನ ಮಾಡಿದ್ದಾಳೆ.

ಮಹೇಶ್ ಶವವನ್ನು ಅವರ ಮನೆಗೆ ತೆಗೆದುಕೊಂಡು ಹೋದ ಬಳಿಕ, ಮಹೇಶ್ ಮನೆಯವರು ಆತನ ದೇಹದ ಮೇಲೆ ಇದ್ದ ಗಾಯದ ಮಾರ್ಕ್ ಗಳನ್ನು ನೋಡಿ ಅವರಿಗೆ ಅನುಮಾನ ಬಂದು, ಮಂಡ್ಯ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪರಿಶೀಲಿಸಿ, ಆಕೆಯನ್ನು ವಿಚಾರಿಸಿದ ಬಳಿಕ ನಿಜ ಒಪ್ಪಿಕೊಂಡಿದ್ದಾಳೆ. ಲವ್ವರ್ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ದಾಳೆ. ಅಸಲಿ ವಿಚಾರ ಹೊರಬಂದ ಬಳಿಕ, ಮಂಡ್ಯ ಪೊಲೀಸರು ಬೆಂಗಳೂರು ಪೊಲೀಸರಿಗೆ ವಿಷಯ ತಿಳಿಸಿದ್ದು, ಅವರು ಆಕೆಯನ್ನು ಮತ್ತು ಆಕೆಯ ಸಹೋದರನನ್ನು ಬಂಧಿಸಿದ್ದಾರೆ.

Comments are closed.