Neer Dose Karnataka
Take a fresh look at your lifestyle.

ಇತ್ತೀಚೆಗಷ್ಟೇ ಪ್ರೀತಿಯಲ್ಲಿ ಬಿದ್ದಿದ್ದ ಸುಶ್ಮಿತಾ ಹಾಗೂ ಲಲಿತ್ ಮೋದಿ ನಡುವೆ ಬ್ರೇಕ್ ಅಪ್. ಸಾವಿರಾರು ಕೋಟಿಯ ಒಡೆಯರಿಗೆ ಇದೆಂತ ಕಾರಣ ಗೊತ್ತೇ??

ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಅವರು ತಮ್ಮ ರಿಲೇಶನ್ಷಿಪ್ ವಿಚಾರಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. 1994ರಲ್ಲಿ ವಿಶ್ವಸುಂದರಿ ಪಟ್ಟ ಗಳಿಸಿದ ಬಳಿಕ, ಸುಶ್ಮಿತಾ ಸೇನ್ ಅವರು ಹಲವು ಹಿಂದಿ, ತಮಿಳು ಹಾಗೂ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. 46 ವರ್ಷವಾಗಿದ್ದರು ಸುಶ್ಮಿತಾ ಅವರು ಇನ್ನು ಮದುವೆಯಾಗಿಲ್ಲ. ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದು ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಹಾಟ್ ಸ್ಟಾರ್ ಗಾಗಿ ವೆಬ್ ಸೀರೀಸ್ ಒಂದರಲ್ಲಿ ನಟಿಸುತ್ತಿದ್ದಾರೆ ಸುಶ್ಮಿತಾ.

ಕಳೆದ ಕೆಲವು ದಿನಗಳ ಹಿಂದೆ ಸುಶ್ಮಿತಾ ಸೇನ್ ಅವರು ಐಪಿಎಲ್ ಮೊದಲ ಸೀಸನ್ ಅಧ್ಯಕ್ಷ, ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಅವರೊಡನೆ ಡೇಟಿಂಗ್ ಮಾಡುತ್ತಿರುವ ವಿಚಾರದಿಂದ ಸುದ್ದಿಯಾಗಿದ್ದರು, ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರೊಡನೆ ಇರುವ ಫೋಟೋಗಳನ್ನು ಶೇರ್ ಮಾಡಿ, ಸುಶ್ಮಿತಾ ಅವರೊಡನೆ ಹೊಸ ಜೀವನ ಪ್ರಾರಂಭಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು, ಬಳಿಕ ತಾವಿಬ್ಬರು ಇನ್ನು ಮದುವೆಯಾಗಿಲ್ಲ, ಡೇಟ್ ಮಾಡುತ್ತಿರುವುದಾಗಿ ಸ್ಪಷ್ಟನೆ ನೀಡಿದ್ದರು. ಇದೀಗ ಇವರಿಬ್ಬರಿಗೂ ಬ್ರೇಕಪ್ ಆಗಿರಬಹುದು ಎನ್ನುವ ಚರ್ಚೆ ಶುರುವಾಗಿದೆ, ಲಲಿತ್ ಮೋದಿ ಅವರೇ ಈ ಬಗ್ಗೆ ಸುಳಿವು ನೀಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಸುಶ್ಮಿತಾ ಅವರ ಹೆಸರನ್ನು ತೆಗೆದುಹಾಕಿದ್ದಾರೆ ಲಲಿತ್ ಮೋದಿ. ಡಿಪಿಯಲ್ಲಿ ಸುಶ್ಮಿತಾ ಜೊತೆಗಿದ್ದ ಫೋಟೋವನ್ನೇ ಹಾಕಿಕೊಂಡಿದ್ದ ಲಲಿತ್ ಮೋದಿ ಅವರು ಈಗ ಅದನ್ನು ಬದಲಾಯಿಸಿದ್ದಾರೆ. ಇದನ್ನು ನೋಡಿದರೆ, ಇಬ್ಬರ ನಡುವೆ ಜಗಳ ಆಗಿ ಬ್ರೇಕಪ್ ಆಗಿರಬಹುದು ಎನ್ನುವ ಅನುಮಾನ ಶುರುವಾಗಿದೆ. ಇನ್ನು ಲಲಿತ್ ಮೋದಿ ಅವರ ವಿಚಾರದಲ್ಲಿ ಮೌನವಾಗಿಯೇ ಇದ್ದ ಸುಶ್ಮಿತಾ ಅವರು, ಇದೀಗ ತಮ್ಮ ಹಳೆಯ ಬಾಯ್ ಫ್ರೆಂಡ್ ರೋಷ್ಮನ್ ಶಾಲ್ ಅವರೊಡನೆ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ, ಶಾಪಿಂಗ್ ಎಂದು ರೋಷ್ಮನ್ ಜೊತೆ ಸುತ್ತಾಡುತ್ತಿದ್ದಾರೆ, ಸುಶ್ಮಿತಾ ಅವರ ಮಗಳ ಹುಟ್ಟುಹಬ್ಬದಲ್ಲಿ ಸಹ ರೋಷ್ಮನ್ ಅವರು ಕಾಣಿಸಿಕೊಂಡಿದ್ದರು. ಹಾಗಾಗಿ ಲಲಿತ್ ಮೋದಿ ಅವರೊಡನೆ ಬ್ರೇಕಪ್ ಆಗಲು, ಹಳೆಯ ಬಾಯ್ ಫ್ರೆಂಡ್ ಕಾರಣ ಇರಬಹುದು ಎನ್ನುತ್ತಿದ್ದಾರೆ ನೆಟ್ಟಿಗರು.

Comments are closed.