Neer Dose Karnataka
Take a fresh look at your lifestyle.

ಕಿರುತೆರೆಯಲ್ಲಿ ಟಾಪ್ ಆಗಿ ಮಿಂಚುತ್ತಿರುವ ವಂಶಿಕ ರವರ ಮನೆ ಹೇಗಿದೆ ಗೊತ್ತೇ?? ಬೆಲೆ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ.

ಮಾಸ್ಟರ್ ಆನಂದ್, ಚಂದನವನದ ಖ್ಯಾತ ಬಾಲನಟ, ಇಂದಿಗೂ ಸಹ ಆನಂದ್ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಆನಂದ್ ಅವರ ಪತ್ನಿ ಮತ್ತು ಮಕ್ಕಳ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ, ಇವರಿಬ್ಬರು ಈಗ ಬಹಳ ಫೇಮಸ್ ಆಗಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಶೋ ಮೂಲಕ, ವಂಶಿಕಾ ಈಗ ಕರ್ನಾಟಕದ ಫೇವರೆಟ್ ಕ್ಯೂಟ್ ಬೇಬಿ ಆಗಿದ್ದಾಳೆ ಅಂದರೆ ತಪ್ಪಾಗುವುದಿಲ್ಲ. ವಂಶಿಯ ಮುದ್ದು ಮಾತುಗಳನ್ನು ಎಲ್ಲರೂ ಎಂಜಾಯ್ ಮಾಡುತ್ತಿದ್ದಾರೆ. ವಂಶಿಕಾ ಅಂಜನಿ ಕಶ್ಯಪ ಎಂದು ನನ್ನಮ್ಮ ಸೂಪರ್ ಸ್ಟಾರ್ ಮೊದಲ ಎಪಿಸೋಡ್ ನಲ್ಲಿ ಹೇಳಿದ್ದು ಕೇಳಿಗಯೇ ಎಲ್ಲರೂ ಫಿದಾ ಆಗಿದ್ದರು.

ಶಾಲೆಗೆ ಸೇರುವ ಮೊದಲೇ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿರುವ ವಂಶಿಕಾ, ತಂದೆಯ ಹಾಗೆ ಪ್ರತಿಭಾವಂತೆ. ಚಿಕ್ಕ ವಯಸ್ಸಿಗೆ ಎಲ್ಲಾ ಡೈಲಾಗ್ಸ್ ನೆನಪಿಟ್ಟುಕೊಂಡು ಹೇಳುವ ಬುದ್ಧಿವಂತೆ ವಂಶಿಕಾ. ಈ ಮುದ್ದು ಮತ್ತು ಅವರ ತಾಯಿ ಯಶಸ್ವಿನಿ ಇಬ್ಬರು ನನ್ನಮ್ಮ ಸೂಪರ್ ಸ್ಟಾರ್ ಶೋ ವಿನ್ನರ್ ಆಗಿ ಹೊರಹೊಮ್ಮಿದರು. ಪ್ರಸ್ತುತ ವಂಶಿಕಾ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದ, ವಂಶಿ ನಟನೆಗೆ ಜಡ್ಜ್ ಆಗಿರುವ ನಟಿ ಶ್ರುತಿ ಹಾಗೂ ಎಲ್ಲಾ ಸ್ಪರ್ಧಿಗಳು ಶಸ್ ಫಿದಾ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಟ್ಯಾಲೆಂಟೆಡ್ ಆಗಿರುವ ವಂಶಿ ಈಗ ಲವ್ಲಿ ಸಿನಿಮಾ ಮೂಲಕ ಬೆಳ್ಳಿತೆರೆಗೂ ಎಂಟ್ರಿ ಕೊಡುತ್ತಿದ್ದಾಳೆ. ನಟ ಮಾಸ್ಟರ್ ಆನಂದ್ ಅವರು ಮಗಳು ವಂಶಿಕಾ ಹಾಗೂ ಕುಟುಂಬಕ್ಕಾಗಿ ಒಂದು ಸುಂದರವಾದ ಮನೆ ಕಟ್ಟಿಸಿದ್ದಾರೆ.

ತಮ್ಮ ಅಭಿರುಚಿಗೆ ತಕ್ಕ ಹಾಗೆ ಆನಂದ್ ಅವರು ಬೆಂಗಳೂರಿನಲ್ಲಿ ಎರಡು ಅಂತಸ್ತಿನ ಮನೆಯನ್ನು ಕಟ್ಟಿಸಿದ್ದಾರೆ. ವಂಶಿಕಾ ಹೋಮ್ ಟೂರ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆನಂದ್ ಅವರ ದೊಡ್ಡ ಮನೆಯಲ್ಲಿ ದೊಡ್ಡ ದೊಡ್ಡ ರೂಮ್ ಗಳಿವೆ, ಮಗಳು ವಂಶಿಕಾಗಾಗಿ ಎರಡು ರೂಮ್ ಗಳಿವೆ, ಆನಂದ್ ಅವರು ರಾಘವೇಂದ್ರ ಸ್ವಾಮಿ ಭಕ್ತರಾಗಿರುವ ಕಾರಣ, ದೇವರ ಮನೆಯಲ್ಲಿ ರಾಯರ ಫೋಟೋಗಳಿವೆ. ಕೋಟಿ ಕೋಟಿ ಬೆಲೆ ಬಾಳುವ ಆನಂದ್ ಅವರ ಮನೆ ಎಷ್ಟು ಸುಂದರವಾಫಿದೆ ಎಂದು ನೋಡಿ..

Comments are closed.