Neer Dose Karnataka
Take a fresh look at your lifestyle.

ಏಷ್ಯಾ ಕಪ್ ನಲ್ಲಿ ಸೋಲಿನ ಬಳಿಕ ಭಾರತ ನಾಯಕ ರೋಹಿತ್ ನಾಯಕತ್ವದ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಅಕ್ತರ್. ಹೇಳಿದ್ದೇನು ಗೊತ್ತೇ??

22

ಯುಎಇ ನಲ್ಲಿ ನಡೆಯುತ್ತಿರುವ ಏಷ್ಯಾಕಪ್ ನ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದ ಭಾರತ ತಂಡ, ಸೂಪರ್ 4 ಹಂತದ ಪಂದ್ಯ ಹಾಗೂ ನಿರ್ಣಾಯಕ ಹಂತದ ಪಂದ್ಯದಲ್ಲಿ ಹೀನಾಯವಾಡ್ಸ್ ಸೋಲು ಕಂಡಿದೆ. ಈ ಮೂಲಕ ಭಾರತ ತಂಡ ಫೈನಲ್ಸ್ ಪ್ರವೇಶ ಮಾಡುವುದು, ಬಹುತೇಕ ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದು, ಇದೀಗ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಕ್ತರ್ ಅವರು ಭಾರತ ತಂಡದ ಬಗ್ಗೆ ಹಾಗೂ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಬಗ್ಗೆ ಕೆಲವು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ಶೋಯೆಬ್ ಅಕ್ತರ್ ಅವರು, “ಭಾರತ ತಂಡ, ಕೆಟ್ಟ ಪ್ರದರ್ಶನ ನೀಡಿಲ್ಲ, ಆದರೆ ಅವರು ಕಾರ್ಯನಿರ್ವಹಿಸಿದ ರೀತಿ ಸರಿ ಇರಲಿಲ್ಲ. ಇದರಿಂದ ಭಾರತದ ಕ್ರಿಕೆಟ್ ಅಭಿಮಾನಿಗಳು ಹತಾಶೆಗೊಂಡಿದ್ದಾರೆ. ಸೋಲಿನ ಬಳಿಕ ಗೆಲುವು ಎನ್ನುವುದು ನನ್ನ ಅಭಿಪ್ರಾಯ, ಈ ಪಾಠ ಭಾರತಕ್ಕೆ ಟಿ20 ವಿಶ್ವಕಪ್ ಪಂದ್ಯಗಳಿಗೆ ಸಹಾಯ ಮಾಡಬಹುದು. ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗಿಂಯ ಮೊದಲು, ರೋಹಿತ್ ಶರ್ಮಾ ಅವರು ತಮ್ಮ ರಕ್ಷ ಕವಚದಲ್ಲಿ ಇರುವ ಚಿಂಕ್ ಗಳನ್ನು ತೆಗೆದುಹಾಕುವ ಅವಶ್ಯಕತೆ ಇದೆ. ನಾಯಕನಾಗಿ ಚುರುಕಾಗಿ ಪ್ರದರ್ಶನ ನೀಡಬೇಕು..

ರೋಹಿತ್ ಶರ್ಮಾ ಅವರು ಧೈರ್ಯದ ಪ್ರದರ್ಶನ ತೋರಿಸಬೇಕು. ಭಾರತ ತಂಡ ನಿರಾಶೆಗೊಳ್ಳದೆ, ಪಾಠ ಕಲಿಯಬೇಕು. ತಂಡವನ್ನು ಸರಿಯಾಗಿ ಸಂಯೋಜಿಸಿ, ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಯಲ್ಲಿ ತೀಕ್ಷ್ಣತೆ ಇರಬೇಕು ತಾಳ್ಮೆಯಿಂದ ಇರಬೇಕು..” ಎಂದು ಹೇಳಿದ್ದಾರೆ. ಜೊತೆಗೆ ಏಷ್ಯಾಕಪ್ ಫೈನಲ್ಸ್ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಶ್ರೀಲಂಕಾ ತಜ್ದ ಕಾಣಿಸಿಕೊಳ್ಳಬಹುದು ಎಂದು ಶೋಯೆಬ್ ಅಕ್ತರ್ ಭವಿಷ್ಯ ನುಡಿದಿದ್ದಾರೆ.. ಒಟ್ಟಿನಲ್ಲಿ ಮುಂಬರುವ ಪಂದ್ಯಗಳಲ್ಲಿ ಭಾರತ ತಂಡದ ಪ್ರದರ್ಶನ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.