Neer Dose Karnataka
Take a fresh look at your lifestyle.

ಶುರುವಾಯಿತು ಕೊಹ್ಲಿ vs ಗಂಭೀರ್: ಶತಕ ಸಿಡಿಸಿ ಸಂಭ್ರಮದಲ್ಲಿದ್ದ ಕೊಹ್ಲಿ ರವರನ್ನು ಕುಟುಕಿದ ಗಂಭೀರ್. ಹೇಳಿದ್ದೇನು ಗೊತ್ತೇ??

9

ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರು ಮೂರು ವರ್ಷಗಳ ನಂತರ ಶತಕ ಸಿಡಿಸಿದ್ದಾರೆ. ಕೋಹ್ಲಿ ಅವರ ಬ್ಯಾಟ್ ಇಂದ 71ನೇ ಸೆಂಚುರಿ ನಿನ್ನೆಯ ಪಂದ್ಯದಲ್ಲಿ ಬಂದಿದೆ. ಕೋಹ್ಲಿ ಅವರು ನಿನ್ನೆ ನಡೆದ ಅಫ್ಗಾನಿಸ್ತಾನ್ ವರ್ಸಸ್ ಭಾರತ ತಂಡದ ಪಂದ್ಯದಲ್ಲಿ ಸೆಂಚುರಿ ಭಾರಿಸಿದ್ದಾರೆ. 61 ಬಾಲ್ ಗಳಲ್ಲಿ ಬರೋಬ್ಬರಿ 122 ರನ್ ಗಳಿಸಿದ್ದಾರೆ ಕಿಂಗ್ ಕೋಹ್ಲಿ. ಈ ಒಂದು ಸೆಂಚುರಿಗಾಗಿ 3 ವರ್ಷಗಳಿಂದ ಅವರ ಅಭಿಮಾನಿಗಳೆಲ್ಲರು ಕಾಯುತ್ತಿದ್ದರು. ಕೊನೆಗು ಕೋಹ್ಲಿ ಅವರ ಈ ಅಬ್ಬರದ ಬ್ಯಾಟಿಂಗ್ ನೋಡಿ ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷವಾಗಿದೆ. ಮೂರು ಫಾರ್ಮ್ ನ ಕ್ರಿಕೆಟ್ ನಲ್ಲೂ ಶತಳ ಸಿಡಿಸಿರುವ ಭಾರತದ ನಾಲ್ಕನೇ ಬ್ಯಾಟ್ಸ್ಮನ್ ಆಗಿದ್ದಾರೆ ಕೋಹ್ಲಿ.

ನಿನ್ನೆ ಸಿಡಿಸಿದೆ ಶತಕದಲ್ಲಿ 12 ಬೌಂಡರಿ ಹಾಗೂ 6 ಸಿಕ್ಸರ್ ಗಳಿದ್ದವು. ಕೋಹ್ಲಿ ಅವರು ಗಳಿಸಿದ ಒಟ್ಟು ರನ್ ಗಳನ್ನು ಇಡೀ ಅಫ್ಘಾನಿಸ್ತಾನ್ ತಂಡ ಕಲೆಹಾಕಲು ಸಾಧ್ಯವಾಗಲಿಲ್ಲ, ಅಫ್ಘಾನ್ ತಂಡ 111 ರನ್ ಗಳಿಸಿತು. ಇದು ಒಂದು ರೀತಿಯ ದಾಖಲೆ ಎಂದರೆ ತಪ್ಪಾಗುವುದಿಲ್ಲ. ಇದೀಗ ವಿರಾಟ್ ಕೋಹ್ಲಿ ಅವರು ಫಾರ್ಮ್ ಗೆ ಮರಳಿದ್ದಾರೆ ಎನ್ನುವ ಸಂತೋಷ ಎಲ್ಲರಲ್ಲೂ ಇದೆ. ಆದರೆ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ವಿರಾಟ್ ಅವರನ್ನು ಟೀಕೆ ಮಾಡಿ ಮಾತನಾಡಿದ್ದಾರೆ. ಬೇರೊಬ್ಬ ಆಟಗಾರ ಶತಕ ಸಿಡಿಸಿ ಮೂರು ವರ್ಷ ಆಗಿದ್ದರೆ, ಆತ ತಂಡದಲ್ಲಿ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ ಗಂಭೀರ್.

“ವಿರಾಟ್ ಅವರು ತೆಗೆದುಕೊಂಡಿರುವುದು ಮೂರು ತಿಂಗಳ ಸಮಯವಲ್ಲ, ಮೂರು ವರ್ಷಗಳು, ಇದು ಬಹಳ ದೀರ್ಘವಾದ ಸಮಯ. ಈ ಮೊದಲು ಅವರು ಸಾಕಷ್ಟು ರನ್ ಗಳಿಸಿದ್ದಾರೆ ಎನ್ನುವ ಕಾರಣಕ್ಕೆ ಅವರಿಗೆ ಬೆಂಬಲ ಸಿಗುತ್ತಿದೆ. ಇದೇ ರೀತಿ ಮೂರು ವರ್ಷಗಳ ಕಾಲ ಸೆಂಚುರಿ ಗಳಿಸದೆ ಇದ್ದಿದ್ದರೆ, ಬೇರೆ ಯಾವ ಆಟಗಾರನು ಸಹ ಭಾರತ ತಂಡದಲ್ಲಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ ಎನ್ನುವುದು ನನ್ನ ಭಾವನೆ. ಕೊನೆಗೆ ಇದು ನಡೆಯಲೇಬೇಕಿತ್ತು, ಸರಿಯಾದ ಸಮಯದಲ್ಲೇ ನಡೆದಿದೆ. ನ್ಯಾಯವಾಗಿ ನೋಡುವುದಾದರೆ, ಬೇರೆ ಆಟಗಾರ ತಂಡದಲ್ಲಿ ಇಷ್ಟು ದಿನ ಉಳಿಯಲು ಸಾಧ್ಯವಾಗುತ್ತಿರಲಿಲ್ಲ..” ಎಂದು ಗಂಭೀರ್ ಅವರು ಹೇಳಿದ್ದಾರೆ.

Leave A Reply

Your email address will not be published.