Neer Dose Karnataka
Take a fresh look at your lifestyle.

ನಿಮ್ಮ ಕೈಯಲ್ಲಿ ಈ ಚಿಹ್ನೆಗಳು ಇದ್ದವೇ ಎಂದರೆ ನಿಮಗೆ ಮುಂದೆ ರಾಜಯೋಗ ಇದೆ ಎಂದರ್ಥ. ಹೇಗೆ ನೋಡಬೇಕು ಗೊತ್ತೇ??

ಜೀವನದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸು ಪಡೆಯಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಇದನ್ನು ಹಸ್ತಸಾಮುದ್ರಿಕ ಶಾಸ್ತ್ರದಿಂದ ಸಹ ತಿಳಿದುಕೊಳ್ಳಬಹುದು. ಕೈಯಲ್ಲಿರುವ ರೇಖೆಗಳು, ಹೇಗಿವೆ ಎನ್ನುವ ಆಧಾರದ ಮೇಲೆ ನೀವು, ಜೀವನದಲ್ಲಿ ಯಶಸ್ಸು ಪಡೆಯುತ್ತೀರೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ. ಒಬ್ಬ ವ್ಯಕ್ತಿಯ ಕೈಯಲ್ಲಿರುವ ರಾಜಯೋಗ, ಆತ ಜೀವನದಲ್ಲಿ ಏನೆಲ್ಲಾ ಸಾಧಿಸುತ್ತಾನೆ, ಯಾವ ರೀತಿಯ ವೈಭೋಗದ ಜೀವನ ನಡೆಸುತ್ತಾನೆ ಎಂದು ತಿಳಿಸುತ್ತದೆ. ಇಂದು ಆ ರಾಜಯೋಗಗಳ ಬಗ್ಗೆ ತಿಳಿಸಿಕೊಡುತ್ತೇವೆ..

*ಒಬ್ಬ ವ್ಯಕ್ತಿಯ ಅಂಗೈಯಲ್ಲಿ ಕುದುರೆ, ಸ್ಥಂಭ, ಹೂಜಿ ಅಥವಾ ಮರದ ಚಿಹ್ನೆ ಇದ್ದರೆ, ಆ ವ್ಯಕ್ತಿ ರಾಜಯೋಗದಿಂದ ಅತ್ಯಂತ ಯಶಸ್ಸು ಪಡೆಯುತ್ತಾನೆ. ಸಂತೋಷ ಪಡೆಯುತ್ತಾನೆ, ಹಾಗೂ ಜೀವನದಲ್ಲಿ ಶ್ರೀಮಂತನಾಗಿ ಎಲ್ಲಾ ಸುಖಗಳನ್ನು ಪಡೆಯುತ್ತಾನೆ.
*ಹಣೆ ಅಗಲವಾಗಿದ್ದು, ದುಂಡು ಮೂಖ, ಸುಂದರವಾದ ಕಣ್ಣುಗಳಿರುವ ವ್ಯಕ್ತಿಗೆ ರಾಜಯೋಗ ಇದೆ ಎಂದು ಅರ್ಥ. ಆ ವ್ಯಕ್ತಿ ರಾಜನ ಹಾಗೆ ಜೀವನ ನಡೆಸುತ್ತಾನೆ.
*ಬಿಲ್ಲು, ಚಕ್ರ, ಕಮಲ, ಧ್ವಜ, ಮಾಲೆ, ರಥ, ಮಾಲೆ ಅಥವಾ ಚತುರ್ಭುಜ ಚಿಹ್ನೆ ಕೈಯಲ್ಲಿರುವ ವ್ಯಕ್ತಿಗಳ ಮೇಲೆ ಲಕ್ಷ್ಮೀದೇವಿಯ ಆಶೀರ್ವಾದ ಇರುತ್ತದೆ. ಸಮಾಜದಲ್ಲಿ ಸಾಕಷ್ಟು ಗೌರವ ಪಡೆಯುತ್ತಾರೆ.

*ಉಂಗುರದ ಬೆರಳಿನ ಮೂಲದಲ್ಲಿ ಪೂರ್ಣ ರೇಖೆ ಹಾಗೂ ಮಧ್ಯದ ಬೆರಳಿನವರೆಗೂ ಶನಿ ರೇಖೆ ಹೊಂದಿರುವ ವ್ಯಕ್ತಿ ಜೀವನದಲ್ಲಿ ರಾಜಸುಖ ಪಡೆಯುತ್ತಾರೆ.
*ಮೀನು, ಕೊಡೆ, ಅಂಕುಶ, ವೀಣೆ, ಆನೆ, ಸರೋವರ ಚಿಹ್ನೆಗಳು ಒಬ್ಬ ವ್ಯಕ್ತಿಯ ಹೆಬ್ಬೆರಳಿನಲ್ಲಿ ಇದ್ದರೆ, ಆ ವ್ಯಕ್ತಿ ಅತ್ಯಂತ ಯಶಸ್ವಿ ಜೀವನ ನಡೆಸುತ್ತಾನೆ ಹಾಗೂ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಾನೆ.
*ವ್ಯಕ್ತಿಯ ಕೈಯಲ್ಲಿ ನೇಗಿಲು, ಕತ್ತಿ, ಪರ್ವತದ ಚಿಹ್ನೆ ಇರುವವರಿಗೆ ಲಕ್ಷ್ಮೀದೇವಿಯ ಕೃಪೆ ಸದಾ ಇರುತ್ತದೆ. ಕೈಯಲ್ಲಿ ಇರುವ ಸೂರ್ಯ ರೇಕೆಗೆ ಹೋಗಿ ಅದು ಮೆದುಳಿಗೆ ಸಂಧಿಸಿ, ನಂತರ ಗುರು ಪರ್ವತದ ಕಡೆಗೆ ಚತುರ್ಭುಜ ರಚನೆ ಆಗುವ ವ್ಯಕ್ತಿ ಅಧಿಕಾರದ ವಿಚಾರದಲ್ಲಿ ಉತ್ತಮವಾದ ಸ್ಥಾನದಲ್ಲಿ ಇರುತ್ತಾರೆ.
*ಕೈಯಲ್ಲಿ ಗುರು, ಶನಿ, ಸೂರ್ಯ ಮತ್ತು ಬುಧ ರೇಖೆಗಳು ಸ್ಪಷ್ಟ ಹಾಗೂ ನೇರವಾಗಿದ್ದರೆ, ಶಕ್ತಿ ಹಾಗೂ ಸಂತೋಷ ನೀಡುತ್ತದೆ.

Comments are closed.