Neer Dose Karnataka
Take a fresh look at your lifestyle.

ಇನ್ನೇನು ಶುರುವಾಗುತ್ತಿದೆ ಹೊಸ ಬಿಗ್ ಬಾಸ್: ಟಿವಿ ಯಲ್ಲಿ ಪ್ರಸಾರ ಮಾಡಲು ನಿಲ್ಲಿಸುತ್ತಿರುವ ಟಾಪ್ ಧಾರಾವಾಹಿಗಳು ಯಾವ್ಯಾವು ಗೊತ್ತೇ??

21

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೊರೆಸಾನಿ ಧಾರವಾಹಿ ಇತ್ತೀಚೆಗೆ ಮುಕ್ತಾಯವಾಯಿತು, ಈ ಧಾರವಾಹಿ ಬಹಳ ಬೇಗ ಮುಗಿಯಿತು. ಇದರ ಬೆನ್ನಲ್ಲೇ ಈಗ ಮತ್ತೊಂದು ಧಾರವಾಹಿ ಪ್ರಸಾರ ನಿಲ್ಲಿಸಲಿದೆ, ಇದಕ್ಕೆ ಕಾರಣ ಬಿಗ್ ಬಾಸ್. ಬಿಗ್ ಬಾಸ್ ಓಟಿಟಿ ಶೋ ಇನ್ನೇನು ಮುಕ್ತಾಯ ಹಂತ ತಲುಪಿದ್ದು, ಇದು ಮುಗಿದ ಕೂಡಲೇ ಟಿವಿಯಲ್ಲಿ ಪ್ರಸಾರವಾಗುವ ಬಿಬಿಕೆ9 ಶುರುವಾಗಲಿದೆ, ಈಗಾಗಲೇ ಪ್ರೋಮೋ ಸಹ ಪ್ರಸಾರವಾಗಿದೆ. ಬಿಗ್ ಬಾಸ್ ಶೋ ಶುರು ಆಗಲಿರುವುದರಿಂದ ಮುಕ್ತಾಯವಾಗುತ್ತಿರುವ ಧಾರವಾಹಿ ನನ್ನರಸಿ ರಾಧೆ.

ಎರಡು ವರ್ಷಗಳ ಹಿಂದೆ ಶುರುವಾದ ಈ ಧಾರವಾಹಿ, ಇತ್ತೀಚೆಗೆ 600 ಸಂಚಿಕೆಗಳನ್ನು ಪೂರೈಸಿತು, ಇದೀಗ ಮುಕ್ತಾಯವಾಗುತ್ತದೆ ಎಂದ್ ಹೇಳಲಾಗುತ್ತಿದೆ. ಮೊದಲಿಗೆ 9:30ಕ್ಕೆ ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ ಧಾರವಾಹಿ ಈಗ ರಾತ್ರಿ 10ಗಂಟೆಗೆ ಪ್ರಸಾರವಾಗುತ್ತಿದೆ. ಈ ಧಾರವಾಹಿ ನಿಲ್ಲುವುದರಿಂದ ಬಿಗ್ ಬಾಸ್ ಕನ್ನಡ ಸೀಸನ್9 ರಾತ್ರಿ 10 ಗಂಟೆಗೆ ಶುರುವಾಗುತ್ತಾ ಎನ್ನುವ ಪ್ರಶ್ನೆ ಸಹ ಈಗ ಶುರುವಾಗಿದೆ. ಏಕೆಂದರೆ ಕಳೆದ ವರ್ಷ ಕಲರ್ಸ್ ಕನ್ನಡ ವಾಹಿನಿಯ ಸೀರಿಯಲ್ ತಾರೆಯರನ್ನು ಒಳಗೊಂಡಿದ್ದ ಬಿಗ್ ಬಾಸ್ ಮಿನಿ ಸೀಸನ್ ರಾತ್ರಿ 10ಗಂಟೆಗೆ ಪ್ರಸಾರವಾಗುತ್ತಿದ್ದ ಕಾರಣ, ಯಶಸ್ವಿಯಾಗಲಿಲ್ಲ. ಬಿಗ್ ಬಾಸ್ ಪ್ರಸಾರಕ್ಕೆ 10 ಗಂಟೆ ಸೂಕ್ತ ಸಮಯವಲ್ಲ ಎನ್ನುವುದು ಕಿರುತೆರೆ ವೀಕ್ಷಕರ ಅಭಿಪ್ರಾಯ.

ಇದೀಗ ನನ್ನರಸಿ ರಾಧೆ ಧಾರವಾಹಿ ಮುಗಿಯುತ್ತಿರುವ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 9 ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಾ ಎಂದು ವೀಕ್ಷಕರು ಸಹ ತಲೆಕೆಡಿಸಿಕೊಂಡಿದ್ದಾರೆ. ಇನ್ನೇನು ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗಲಿದ್ದು, ಓಟಿಟಿಯ ಟಾಪ್ 3 ಸ್ಪರ್ಧಿಗಳು ಬಿಬಿಕೆ9 ಗೆ ಬರುತ್ತಾರೆ ಎನ್ನಲಾಗುತ್ತಿದೆ, ಅವರ ಜೊತೆಗೆ ಇನ್ನು ಯಾರೆಲ್ಲಾ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ಬರುತ್ತಾರೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಈ ಬಾರಿ ಬಿಗ್ ಬಾಸ್ ಶೋ ಸ್ಪೆಷಲ್ ಆಗಿರುವುದಂತು ಖಂಡಿತ.

Leave A Reply

Your email address will not be published.