Neer Dose Karnataka
Take a fresh look at your lifestyle.

ಸದಾ ಕೊಹ್ಲಿ ವಿರುದ್ಧ ಕಿಡಿ ಕಾರುತಿದ್ದ ವೀರೇಂದ್ರ ಸೆಹ್ವಾಗ್ ರವರು ಸೆಂಚುರಿ ಗಳಿಸಿದ ತಕ್ಷಣ ಕೊಹ್ಲಿ ಬಗ್ಗೆ ಹೇಳಿದ್ದೇನು ಗೊತ್ತೇ??

15

ಗಾಡ್ ಆಫ್ ಕ್ರಿಕೆಟ್ ಎಂದೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಕರೆಯುತ್ತಾರೆ. ಕ್ರಿಕೆಟ್ ಲೋಕದಲ್ಲಿ ಇವರು ಮಾಡಿರುವ ಸಾಧನೆ ಅಗಾಧ. ಸಚಿನ್ ಅವರ ಹೆಸರಿನಲ್ಲಿ ಹಲವಾರು ದಾಖಲೆಗಳಿವೆ, ಇವರು ಮಾಡಿರುವ ಕೆಲವು ದಾಖಲೆಗಳನ್ನು ಇಂದಿಗೂ ಸಹ ಯಾವ ಆಟಗಾರನು ಮುರಿಯಲು ಸಾಧ್ಯವಾಗಿಲ್ಲ. ಸಚಿನ್ ಅವರು ತಮ್ಮ ಕೆರಿಯರ್ ನಲ್ಲಿ 100 ಸೆಂಚುರಿ ಭಾರಿಸಿದ್ದಾರೆ. ಇದೊಂದು ಅತಿದೊಡ್ಡ ದಾಖಲೆ ಎಂದರೆ ತಪ್ಪಲ್ಲ. ಸಚಿನ್ ತೆಂಡೂಲ್ಕರ್ ಅವರನ್ನು ವಿಶ್ವದ ಎಲ್ಲಾ ಕ್ರಿಕೆಟಿಗರು ಸ್ಪೂರ್ತಿಯಾಗಿ ನೋಡುತ್ತಾರೆ.

ಸಚಿನ್ ಅವರ ಹೆಸರಿನಲ್ಲಿರುವ 100 ಸೆಂಚುರಿ ದಾಖಲೆಯನ್ನು ಮುರಿಯಬಲ್ಲ ಆಟಗಾರ ಯಾರಾಗಬಹುದು ಎಂದು ಕ್ರಿಕೆಟ್ ಪ್ರಿಯರು ಕಾಯುತ್ತಿದ್ದಾರೆ. ಅದಕ್ಕೀಗ ಸಚಿನ್ ಅವರ ಸಹ ಆಟಗಾರ ವೀರೇಂದ್ರ ಸೆಹ್ವಾಗ್ ಉತ್ತರಿಸಿದ್ದಾರೆ. ಸೆಹ್ವಾಗ್ ಅವರು ಹೇಳಿರುವ ಪ್ರಕಾರ ವಿರಾಟ್ ಕೋಹ್ಲಿ ಅವರು ಸಚಿನ್ ಅವರ ದಾಖಲೆ ಮುರಿಯುತ್ತಾರೆ ಎಂದು ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ. ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕೋಹ್ಲಿ ಅವರು 1021ದಿನಗಳ ಬಳಿಕ ಅದ್ಭುತವಾದ ಸೆಂಚುರಿ ಭಾರಿಸಿದರು. ಇದನ್ನು ನೋಡಿದ ಬಳಿಕ ಸೆಹ್ವಾಗ್ ಅವರು ಈ ರೀತಿ ಹೇಳಿದ್ದಾರೆ.

“ವಿರಾಟ್ ಅವರು ಭಾರಿಸಿರುವ ಶತಕಕ್ಕೆ ನಾನು ಮಾತ್ರವಲ್ಲ, ಇಡೀ ಭಾರತ ಸಂತೋಷಪಟ್ಟಿದೆ. ಬಹಳ ಕಾಲದಿಂದ ಈ ಶತಕಕ್ಕಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದರು. ಈ ಸೈಕಲ್ ಈಗ ಮತ್ತೆ ಶುರುವಾಗಿದ್ದು, 71ನೇ ಶತಕದ ನಂತರ ಅವರ ಮುಂದಿನ ನಿಲ್ದಾಣ 100ನೇ ಶತಕಕ್ಕೆ ನಿಲ್ಲಬೇಕು. ಬಳಿಕ 101ನೇ ಶತಕ ಯಾವಾಗ ಬರುತ್ತದೆ ಎಂದು ನಾವೆಲ್ಲರೂ ಕಾಯುತ್ತಿರುತ್ತೇವೆ..” ಎಂದಿದ್ದಾರೆ ಸೆಹ್ವಾಗ್. ಕೋಹ್ಲಿ ಅವರ ವಿಚಾರದಲ್ಲಿ ಸದಾ ಕುಟುಕುವ ಸೆಹ್ವಾಗ್ ಅವರು ಈ ರೀತಿಯ ಹೇಳಿಕೆ ನೀಡಿರುವುದು ನಿಜಕ್ಕೂ ಶಾಕ್ ನೀಡಿದೆ.

Leave A Reply

Your email address will not be published.