Neer Dose Karnataka
Take a fresh look at your lifestyle.

ಹಲವಾರು ನಟಿಯರಿಗೆ ಕೈ ಕೊಟ್ಟ ಮೇಲೆ ಕೊನೆಗೆ ರಾಜ ಮನೆತನದ ಸುಂದರಿಯನ್ನು ಮದುವೆಯಾಗಲು ಮುಂದಾದ ಸಿದ್ದಾರ್ಥ; ಆಕೆ ಕೂಡ ನಟಿ. ಆ ಅಪ್ಸರೆ ಯಾರು ಗೊತ್ತೇ?

5,282

ನಟ ಸಿದ್ಧಾರ್ಥ್ ಅವರಿಗೆ ಈಗಲೂ ಕೂಡ ತೆಲುಗು ಮಾತ್ರವಲ್ಲದೆ, ತಮಿಳಿನಲ್ಲೂ ಸಹ ಒಳ್ಳೆಯ ಫ್ಯಾನ್ ಬೇಸ್ ಇದೆ ಹಾಗೆಯೇ, ಒಳ್ಳೆಯ ಮಾರ್ಕೆಟ್ ಸಹ ಇದೆ. ಸಾಕಷ್ಟು ಅವಕಾಶಗಳು ಸಹ ಸಿದ್ಧಾರ್ಥ್ ಅವರನ್ನು ಹುಡುಕಿಕೊಂಡು ಬರುತ್ತಿದ್ದವು, ಆದರೆ ಈಗ ಕೆಲವು ವರ್ಷಗಳಿಂದ ಸಿದ್ಧಾರ್ಥ್ ಅವರ ಮಾರ್ಕೆಟ್ ಕಡಿಮೆ ಆಗಿದೆ, ಇವರ ಪರ್ಸನಲ್ ಲೈಫ್ ಬಗ್ಗೆ ಸಹ ಬಹಳಷ್ಟು ಚರ್ಚೆಯಾಗುತ್ತಿದೆ. ಸಿದ್ಧಾರ್ಥ್ ಅವರಿಗೆ ನಟಿಯರ ಜೊತೆಗೆ ಅಫೇರ್ ಇದ್ದ ವಿಚಾರ ಸಹ ಚರ್ಚೆಯಾಗಿತ್ತು.

ಸಮಂತಾ, ಹನ್ಸಿಕಾ, ಶ್ರುತಿ ಹಾಸನ್, ತ್ರಿಷಾ ಇವರ ಜೊತೆಗೆ ಅಫೇರ್ ಇತ್ತು ಎನ್ನುವ ವಿಚಾರ ಭಾರಿ ಸುದ್ದಿಯಾಗಿದ್ದವು. ಆದರೆ ಇವರೆಲ್ಲರನ್ನು ಬಿಟ್ಟು, ಬೇರೊಬ್ಬ ಹುಡುಗಿಯ ಜೊತೆಗೆ ಮದುವೆಯಾದರು, ಆದರೆ ಆ ಹುಡುಗಿಗೂ ಸಹ ವಿಚ್ಛೇದನ ನೀಡಿದರು. ಬಹಳ ಕಾಲದಿಂದ ಒಂಟಿಯಾಗಿದ್ದ ನಟ ಸಿದ್ಧಾರ್ಥ್, ಕೆಲವು ದಿನಗಳಿಂದ ನಟಿ ಅದಿತಿ ರಾವ್ ಹೈದಾರಿ ಅವರೊಡನೆ ಅಫೇರ್ ಇಟ್ಟುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮುಂಬೈ ಬೀದಿಗಳಲ್ಲಿ ಇವರಿಬ್ಬರು ಜೊತೆಯಾಗಿ ತಿರುಗಾಡುತ್ತಿರುವ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಷ್ಟೇ ಅಲ್ಲದೆ, ಮತ್ತೊಂದು ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೇನೆಂದರೆ, ಇಷ್ಟು ದಿನಗಳ ಕಾಲ ಡೇಟಿಂಗ್ ಮಾಡುತ್ತಿದ್ದ ಈ ಜೋಡಿ, ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಪೊನ್ನಿಯಿನ್ ಸೆಲ್ವನ್ ಸಿನಿಮಾ ಟ್ರೈಲರ್ ಲಾಂಚ್ ಇವೆಂಟ್ ನಲ್ಲಿ ಇವರಿಬ್ಬರು ನಡೆದುಕೊಂಡ ರೀತಿ ಅದೇ ರೀತಿ ಇತ್ತು. ಗಂಡ ಹೆಂಡತಿಯ ರೀತಿಯಲ್ಲೇ ಇಬ್ಬರು ಕಾಣಿಸಿಕೊಂಡರು. ಇವರಿಬ್ಬರನ್ನು ನೋಡುತ್ತಿದ್ದರೆ, ಶೀಘ್ರದಲ್ಲೇ ಹಸೆಮಣೆ ಏರುವುದು ಖಂಡಿತ ಎನ್ನಲಾಗುತ್ತಿದೆ. ಈ ಸುದ್ದಿಯಲ್ಲಿ ಎಷ್ಟರ ಮಟ್ಟಿಗೆ ನಿಜ ಇದೆ ಎಂದು ನೋಡಬೇಕಿದೆ.

Leave A Reply

Your email address will not be published.