Neer Dose Karnataka
Take a fresh look at your lifestyle.

ಇದಪ್ಪ ಅದೃಷ್ಟ ಅಂದ್ರೆ: ಶುರುವಾಯಿತು ಬುಧ ಗ್ರಹದ ಹಿಮ್ಮುಖ ಚಾಲನೆ: ಅದು ಕನ್ಯಾ ರಾಶಿಯಲ್ಲಿ; ಐದು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ??

3,462

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಹಿಮ್ಮುಖ ಚಲನೆಯನ್ನು ಶುಭ ಎಂದು ಹೇಳುವುದಿಲ್ಲ, ಅದರಿಂದ ನಕಾರಾತ್ಮಕ ಪರಿಣಾಮಗಳೇ ಹೆಚ್ಚು. ಆದರೆ ರಾಶಿಗಳು ಉಚ್ಚಸ್ಥಾನದಲ್ಲಿ ಇದ್ದಾಗ ಒಳ್ಳೆಯ ಫಲಿತಾಂಶ ಸಿಗುತ್ತದೆ. ಪ್ರಸ್ತುತ ಬುಧ ಗ್ರಹವು ಸೆಪ್ಟೆಂಬರ್ 10ರಂದು ಕನ್ಯಾ ರಾಶಿಯಲ್ಲಿ ಹಿಮ್ಮುಖ ಚಲನೆ ಶುರು ಮಾಡಿದೆ. ಅಕ್ಟೋಬರ್ 2 ರಿಂದ ಬುಧ ಗ್ರಹವು ನೇರವಾಗಿ ಚಲಿಸಲಿ ಶುರು ಮಾಡಲಿದೆ. ಇದರಿಂದಾಗಿ ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರಲಿದ್ದು, ಯಾವ ರಾಶಿಗಳ ಮೇಲೆ ಅದೃಷ್ಟ ಬೀರುತ್ತದೆ ಎಂದು ತಿಳಿದುಕೊಳ್ಳೋಣ..

ಮಿಥುನ ರಾಶಿ :- ಈ ರಾಶಿಯ 4ನೇ ಮನೆಯಲ್ಲಿ ಬುಧನ ಹಿಮ್ಮುಖ ಚಲನೆ ಇದೆ, ಇದರಿಂದ ಶುಭ ಫಲ ಸಿಗುತ್ತದೆ. ಬುಧ ಗ್ರಹದ ಅನುಗ್ರಹದಿಂದ ನಿಮ್ಮ ವೃತ್ತಿ ಜೀವನದಲ್ಲಿ ಒಳ್ಳೆಯದಾಗುತ್ತದೆ, ಕುಟುಂಬದಲ್ಲಿ ಸಂತೋಷ ಇರುತ್ತದೆ, ನೆಮ್ಮದಿಯಾಗಿರುತ್ತೀರಿ. ಸಮಾಜದಲ್ಲಿ ಒಳ್ಳೆಯ ಹೆಸರು ಬರುತ್ತದೆ. ಕುಟುಂಬದ ಮೇಲೆ ಹೆಚ್ಚಿನ ಕಾಳಜಿ ವಹಿಸಿ, ಕುಟುಂಬದ ವಿಚಾರದಲ್ಲಿ ನಿರ್ಧಾರ ಮಾಡುವಾಗ ಮನೆಯವರ ಅಭಿಪ್ರಾಯ ಕೇಳಿ. ಮನೆ ನವೀಕರಣ ಮಾಡಿಸುವ ಪ್ಲಾನ್ ಇದ್ದರೆ, ಇದು ಒಳ್ಳೆಯ ಸಮಯ. ನಿಮ್ಮ ಸೌಕರ್ಯ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ತೊಂದರೆ ಇದ್ದರೆ, ಬುಧನ ಕೃಪೆ ಇಂದ ಎಲ್ಲವೂ ಸರಿಹೋಗುತ್ತದೆ.

ಕನ್ಯಾ ರಾಶಿ :- ಕನ್ಯಾ ರಾಶಿಯ ಮೊದಲನೇ ಮನೆಯಲ್ಲಿ ಬುಧನ ಹಿಮ್ಮುಖ ಸಂಚಾರ ಶುರುವಾಗಲಿದ್ದು, ಇದರಿಂದ ಒಳ್ಳೆಯದಾಗುತ್ತದೆ. ವೃತ್ತಿಜೀವನದಲ್ಲಿ ಬೆಳೆಯಲು ಅವಕಾಶ ಸಿಗುತ್ತದೆ. ವೈಯಕ್ತಿಕವಾಗಿ ಸುಧಾರಿಸಿಕೊಳ್ಳುತ್ತೀರಿ, ಬದಲಾಗುತ್ತಿರುವ ಸಂದರ್ಭಗಳ ಮೇಲೆ ಗಮನವಿಡಿ. ಸಮಸ್ಯೆ ಇದ್ದರೆ, ನೀವು ಒಬ್ಬರೇ ಕೂತು ಸರಿಮಾಡಿಕೊಳ್ಳಿ. ದಾಂಪತ್ಯ ಜೀವನದ ವಿಚಾರದಲ್ಲಿ ಮೂರನೇ ವ್ಯಕ್ತಿಯ ಮಾತು ಕೇಳುವುದನ್ನು ಬಿಡಿ. ಶತ್ರುಗಳಿಂದ ನಿಮಗೆ ಹಾನಿ ಉಂಟಾಗಬಹುದು, ಜಾಗರೂಕವಾಗಿರಿ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ವೃತ್ತಿಯ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳದೆ ಇರುವುದೇ ಒಳ್ಳೆಯದು.

ವೃಶ್ಚಿಕ ರಾಶಿ :- ಈ ರಾಶಿಯಲ್ಲಿ ಬುಧ 11ನೇ ಮನೆಯಲ್ಲಿ ಹಿಮ್ಮುಖ ಚಲನೆ ಶುರು ಮಾಡುವುದರಿಂದ ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಕುಟುಂಬದಲ್ಲಿ ಸಂತೋಷ ನೆಮ್ಮದಿ ಇರುತ್ತದೆ. ವೃತ್ತಿ ಜೀವನದಲ್ಲಿ ಉಳಿದಿರುವ ಕೆಲಸಗಳನ್ನು ಪೂರ್ತಿ ಮಾಡುತ್ತೀರಿ. ವ್ಯಾಪಾರ ಮಾಡುತ್ತಿರುವವರು ಲಾಭ ಪಡೆಯುತ್ತೀರಿ. ಬುಧನಿಂದ ಹೊಸ ಜನರನ್ನು ಭೇಟಿಯಾಗಿ, ಹೊಸ ಸ್ನೇಹಿತರು ನಿಮ್ಮ ಜೀವನಕ್ಕೆ ಬರುತ್ತಾರೆ. ಅದೇ ರೀತಿ, ಹೊಸ ಸ್ನೇಹ ಶುರು ಮಾಡುವಾಗ, ತಪ್ಪಾದ ವ್ಯಕ್ತಿಯ ಜೊತೆಗೆ ಸ್ನೇಹ ಮಾಡುವ ಬಗ್ಗೆ ಜಾಗರೂಕವಾಗಿರಿ.

ಧನು ರಾಶಿ :- ಬುಧನ ಹಿಮ್ಮುಖ ಸಂಚಾರ ಈ ರಾಶಿಯ 10ನೇ ಮನೆಯಲ್ಲಿ ನಡೆಯಲಿದು, ಇದು ವೃತ್ತಿಜೀವನದಲ್ಲಿ ನಿಮಗೆ ಪ್ರಯೋಜನ ತಂದು ಕೊಡುತ್ತದೆ. ಈ ಸಮಯದಲ್ಲಿ ಹೊಸ ಕೆಲಸಗಳು ಲಾಭ ತಂದರೆ, ಅದರಿಂದ ಅಹಂಕಾರ ಪಡಬೇಡಿ. ಪಾರ್ಟ್ನರ್ಶಿಪ್ ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಕುಟುಂಬಕ್ಕೆ ಸಂಬಂಧಿಸಿದ ಪ್ರಮುಖ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ತೊಂದರೆ ಆಗುತ್ತಿದ್ದರೆ, ಈ ಸಮಯದಲ್ಲಿ ಅದೆಲ್ಲವೂ ಸರಿ ಹೋಗುತ್ತದೆ.

ಮಕರ ರಾಶಿ :- ಈ ರಾಶಿಯ 11ನೇ ಮನೆಯಲ್ಲಿ ಬುಧ ಗ್ರಹದ ಹಿಮ್ಮುಖ ಚಲನೆ ಶುರುವಾಗಲಿದೆ. ಇದು ನಿಮಗೆ ಅನುಕೂಲಕರವಾಗಿರುತ್ತದೆ. ಕಾನೂನಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಜಯ ನಿಮ್ಮದಾಗುತ್ತದೆ. ಈ ಸಮಯದಲ್ಲಿ ನೀವು ಪ್ರಯಾಣ ಮಾಡದೆ ಇರುವುದು ಒಳ್ಳೆಯದು ಇಲ್ಲದಿದ್ದರೆ ನಷ್ಟವಾಗಬಹುದು. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ ಆಗಿದೆ. ಕೆಲಸದ ವಿಚಾರದ ಬಗ್ಗೆ ಹೇಳುವುದಾದರೆ, ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಫಲ ಸಿಗುತ್ತದೆ. ಈ ವೇಳೆ ನಿಮಗೆ ಇಷ್ಟ ಇರುವ ಹಾಗೆ ಬಡ್ತಿ ಅಥವಾ ಟ್ರಾನ್ಸ್ಫರ್ ಸಿಗಬಹುದು. ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ.

Leave A Reply

Your email address will not be published.