Neer Dose Karnataka
Take a fresh look at your lifestyle.

ಕಾಡುತ್ತಿರುವ ಕೊನೆಯ ಓವರ್ ಗಳ ಸಮಸ್ಯೆಯನ್ನು ನಿವಾರಣೆ ಮಾಡಲು ಆ ಇಬ್ಬರು ಬೌಲರ್ ಗಳು ತಂಡಕ್ಕೆ ಬೇಕೇ ಬೇಕು. ಯಾರು ಗೊತ್ತೇ??

ಏಷ್ಯಾಕಪ್ ನಲ್ಲಿ ಭಾರತ ತಂಡ ಸೋತು ಮರಳಿ ಬಂದಿದೆ. ಮೊದಲ ಎರಡು ಪಂದ್ಯಗಳಲ್ಲಿ ಚೆನ್ನಾಗಿಯೇ ಪ್ರದರ್ಶನ ನೀಡಿದರು ಸಹ, ಸೂಪರ್ 4 ಹಂತದ ಎರಡು ಪಂದ್ಯಗಳಲ್ಲಿ ಭಾರತ ತಂಡ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರು ವಿಭಾಗದಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಎರಡು ಪಂದ್ಯಗಳನ್ನು ಸೋತು ಟೂರ್ನಿಯಿಂದ ಹೊರಬಿದ್ದಿತು. ಏಷ್ಯಾಕಪ್ ಪಂದ್ಯಗಳು ಸೋತ ಬಳಿಕ ತಂಡದಲ್ಲಿನ ನೂನ್ಯತೆಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ.

ಟೀಮ್ ಇಂಡಿಯಾದಲ್ಲಿ ಕೊನೆಯ ಓವರ್ ನಲ್ಲಿ ಸರಿಯಾಗಿ ಬೌಲಿಂಗ್ ಮಾಡಿ, ರನ್ಸ್ ಗಳನ್ನು ಹಿಡಿದಿಡುವ ಬೌಲರ್ ನ ಸಮಸ್ಯೆ ಈಗ ಕಾಡುತ್ತಿದೆ. ಏಷ್ಯಾಕಪ್ ನಲ್ಲಿ ಸೂಪರ್ 4 ಹಂತದ ಎರಡು ಪಂದ್ಯಗಳಲ್ಲಿ 19ನೇ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ಭುವನೇಶ್ವರ್ ಕುಮಾರ್ ಅವರಿಗೆ ಕೊಡಲಾಗಿತ್ತು, ಉತ್ತಮವಾದ ಪ್ರದರ್ಶನವನ್ನೇ ನೀಡುತ್ತಿದ್ದ ಭುವನೇಶ್ವರ್ ಕುಮಾರ್ ಅವರು, ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ 19ನೇ ಓವರ್ ನಲ್ಲಿ 26 ರನ್ ಗಳು ಬಾಕಿ ಇದ್ದಾಗ, ಒಂದೇ ಓವರ್ ನಲ್ಲಿ 19 ರನ್ ಗಳನ್ನು ನೀಡಿದರು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 2 ಓವರ್ ಗೆ 21 ರನ್ ಗಳ ಗುರಿ ಇದ್ದಾಗ, 19ನೇ ಓವರ್ ಬೌಲಿಂಗ್ ಮಾಡಲು ಬಂದ ಭುವನೇಶ್ವರ್ ಕುಮಾರ್ ಅವರು ಒಂದೇ ಓವರ್ ನಲ್ಲಿ 14 ರನ್ಸ್ ನೀಡಿದರು.

ಇದರಿಂದ ಭಾರತ ತಂಡ ಸೋಲನ್ನು ಅನುಭವಿಸುವ ಹಾಗೆ ಆಯಿತು. ಇದೆಲ್ಲವನ್ನು ನೋಡಿದರೆ, ಕೊನೆಯ ಓವರ್ ನಲ್ಲಿ ಆಕ್ರಮಣಕಾರಿ ಬೌಲರ್ ಗಳ ಅವಶ್ಯಕತೆ ಇದೆ. ಇದಕ್ಕಾಗಿ ಸಧ್ಯಕ್ಕೆ ತಂಡದಿಂದ ಹೊರಗುಳಿದಿರುವ ಆ ಇಬ್ಬರು ಬೌಲರ್ ಗಳು ಮರಳಿ ಬರಬೇಕು, ಒಬ್ಬರು ಜಸ್ಪ್ರೀತ್ ಬುಮ್ರ ಮತ್ತೊಬ್ಬರು ಹರ್ಷಲ್ ಪಟೇಲ್. ಹರ್ಷಲ್ ಪಟೇಲ್ ಅವರು ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದರು, ಅವರು ಈಗ ಚೇತರಿಸಿಕೊಂಡಿದ್ದು, ಟಿ20 ವಿಶ್ವಕಪ್ ಪಂದ್ಯಗಳ ಸಮಯಕ್ಕೆ ಭಾರತ ತಂಡಕ್ಕೆ ಹಿಂದಿರುಗುತ್ತಾರೆ ಎನ್ನಲಾಗುತ್ತಿದೆ. ಆದರೆ ಜಸ್ಪ್ರೀತ್ ಬುಮ್ರ ಅವರ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಸಿಕ್ಕಿಲ್ಲ. ಇವರಿಗೆ ಬೆನ್ನುನೋವಿನ ಸಮಸ್ಯೆ ಆಗಿದ್ದು, ಚೇತರಿಸಿಕೊಂಡಿದ್ದಾರಾ, ವಿಶ್ವಕಪ್ ಶುರು ಆಗುವುದಕ್ಕಿಂತ ಮೊದಲು ತಂಡಕ್ಕೆ ಬರುತ್ತಾರ ಎನ್ನುವ ಕಳವಳ ಈಗ ಇದೇ. ಒಟ್ಟಿನಲ್ಲಿ ಇವರಿಬ್ಬರು ಬಂದರೆ ಭಾರತಕ್ಕೆ ಗೆಲುವು ಖಚಿತ ಎನ್ನುವ ಮಾತುಗಳು ಜೋರಾಗಿಯೇ ಕೇಳಿಬರುತ್ತಿದೆ.

Comments are closed.