Neer Dose Karnataka
Take a fresh look at your lifestyle.

ವಿರಾಟ್ ಕೊಹ್ಲಿ ಶತಕ ಗಳಿಸಿದ ಬಳಿಕ ಮೊದಲ ಬಾರಿಗೆ ಕೊಹ್ಲಿ ಕುರಿತು ಮಾತನಾಡಿದ ಗಂಗೂಲಿ: ಹೇಳಿದ್ದೇನು ಗೊತ್ತೇ?? ಫ್ಯಾನ್ಸ್ ಭೇಷ್ ಎಂದದ್ದು ಯಾಕೆ ಗೊತ್ತೆ??

10

ಭಾರತ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರು ಏಷ್ಯಾಕಪ್ ಪಂದ್ಯಗಳ ಸೂಪರ್ 4 ಹಂತದಲ್ಲಿ, ಕೊನೆಯ ಪಂದ್ಯ ಆಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ಕಳಪೆ ಫಾರ್ಮ್ ನಲ್ಲಿ ಇದ್ದಿದ್ದಕ್ಕೆ ಬಹಳಷ್ಟು ಟೀಕೆಗೆ ಒಳಗಾಗಿದ್ದರು. ಆದರೆ ಬರೋಬ್ಬರಿ 3 ವರ್ಷಗಳ ಬಳಿಕ, 1021 ದಿನಗಳ ಬಳಿಕ ಸೆಂಚುರಿ ಭಾರಿಸಿದರು. ವಿರಾಟ್ ಕೋಹ್ಲಿ ಅವರು ವಿಶ್ವಕಪ್ ಪಂದ್ಯಗಳು ಶುರುವಾಗುವ ಮೊದಲು ವಿರಾಟ್ ಅವರು ಫಾರ್ಮ್ ಗೆ ಬಂದಿರುವುದು ಸಂತೋಷದ ವಿಚಾರವೇ ಆಗಿದೆ.

ವಿರಾಟ್ ಕೋಹ್ಲಿ ಅವರು 61 ಬಾಲ್ ಗಳಲ್ಲಿ 122 ರನ್ ಸಿಡಿಸಿದರು. ಇದರಲ್ಲಿ 12 ಬೌಂಡರಿ ಹಾಗೂ 6 ಭರ್ಜರಿಯಾದ ಸಿಕ್ಸರ್ ಭಾರಿಸಿದರು ಕೋಹ್ಲಿ. ಕೋಹ್ಲಿ ಅವರ ಬ್ಯಾಟ್ ಇಂದ 71ನೇ ಶತಕ ಬಂದಿದ್ದು, ಕೋಹ್ಲಿ ಅವರ ಅಭಿಮಾನಿಗಳಿಗೆ ಮತ್ತು ಕ್ರಿಕೆಟ್ ಪ್ರಿಯರಿಗೆ ಬಹಳ ಸಂತೋಷವನ್ನುಂಟು ಮಾಡಿತು. ಕೋಹ್ಲಿ ಅವರು ಸಹ ಬಹಳ ಸಂತೋಷದಿಂದ ಈ ಸೆಂಚುರಿಯನ್ನು ಪತ್ನಿ ಅನುಷ್ಕಾ ಹಾಗೂ ಮಗಳು ವಮಿಕಾ ವವರಿಗೆ ಅರ್ಪಿಸಿದರು. ಕ್ರಿಕೆಟ್ ದಿಗ್ಗಜರು ಸಹ ವಿರಾಟ್ ಕೋಹ್ಲಿ ಅವರ ಸೆಂಚುರಿ ನೋಡಿ ಸಂತೋಷಪಟ್ಟರು. ಭಾರತ ತಂಡದ ಮಾಜಿ ಆಟಗಾರ ಸೌರವ್ ಗಂಗೂಲಿ ಅವರು ಸಹ ವಿರಾಟ್ ಕೋಹ್ಲಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ..

ಸೌರವ್ ಗಂಗೂಲಿ ಅವರು ಯೂಟ್ಯೂಬ್ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಕೋಹ್ಲಿ ಅವರನ್ನು ಹೊಗಳಿದ್ದಾರೆ, “ಒಬ್ಬ ಆಟಗಾರನನ್ನು ಅವರ ಕೌಶಲ್ಯದ ಮೇಲೆ ಹೋಲಿಕೆ ಮಾಡಬಾರದು. ವಿರಾಟ್ ಕೋಹ್ಲಿ ನನಗಿಂತ ಹೆಚ್ಚಿನ ಕೌಶಲ್ಯತೆ ಹೊಂದಿರುವ ಆಟಗಾರ. ನಾವಿಬ್ಬರು ಬೇರೆ ಬೇರೆ ಪೀಳಿಗೆಯವರು ಹಾಗೂ ಸಾಕಷ್ಟು ಪಂದ್ಯಗಳನ್ನಾಡಿದ್ದೇವೆ. ನಾನು ನನ್ನ ಸಮಯದಲ್ಲಿ ಆಡಿದ್ದು, ಈಗಲು ಅವರು ಆಡುತ್ತಿದ್ದಾರೆ. ಈಗ ನಾನು ಅವರಿಗಿಂತ ಹೆಚ್ಚಿನ ಪಂದ್ಯ ಆಡಿದ್ದೇನೆ, ಅವರು ನನಗಿಂತ ಹೆಚ್ಚಿನ ಪಂದ್ಯ ಆಡಲಿದ್ದಾರೆ. ಕೋಹ್ಲಿ ನಿಜಕ್ಕೂ ಅದ್ಭುತ ಆಟಗಾರ..” ಎಂದು ಹೇಳಿದ್ದಾರೆ ಸೌರವ್ ಗಂಗೂಲಿ.

Leave A Reply

Your email address will not be published.