Neer Dose Karnataka
Take a fresh look at your lifestyle.

ರವೀಂದ್ರ ಜಡೇಜಾ ರವರಿಗೆ ಇಂಜುರಿ ಆಗಿರಬಹುದು: ಆದರೆ ತೆರೆ ಹಿಂದೆ ನಡೆಸಿರುವ ಕಥೆ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ. ಹೀಗಾ ಮಾಡೋದು??

ಭಾರತ ಕ್ರಿಕೆಟ್ ತಂಡದ ಮುಖ್ಯವಾದ ಪ್ಲೇಯರ್ ರವೀಂದ್ರ ಜಡೇಜಾ ಅವರು ಗಾಯಗೊಂಡಿರುವ ಕಾರಣ ಏಷ್ಯಾಕಪ್ ಟಿ20 ಟೂರ್ನಿಯಿಂದ ಹೊರಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಳ್ಳೆಯ ಫಾರ್ಮ್‌ ನಲ್ಲಿರುವ ರವೀಂದ್ರ ಜಡೇಜಾ ಅವರಿಗೆ ಏನಾಯಿತು ಎನ್ನುವ ವಿಚಾರದ ಬಗ್ಗೆ ಹಲವು ಬಗೆಯ ವಾದಗಳಿವೆ. ಮೊದಲಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಂಡದ ಆಡಳಿತ ಮಂಡಳಿ ತಿಳಿಸಿತ್ತು. ಆದರೆ, ರವೀಂದ್ರ ಜಡೇಜಾ ಗಾಯದ ಹಿಂದೆ ದೊಡ್ಡ ಕಥೆಯೇ ಇದೆ ಎಂದು ನಂತರ ತಿಳಿದುಬಂದಿದೆ.

ಭಾರತ ತಂಡದ ಪ್ಲೇಯರ್ ಗಳು ದುಬೈ ಹೋಟೆಲ್‌ ನಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿನ ವಾಟರ್ ಸ್ಪೋರ್ಟ್ಸ್ ಆಕ್ಟಿವಿಟಿಯಲ್ಲಿ ಭಾಗವಹಿಸುವಂತೆ ಆಡಳಿತ ಮಂಡಳಿ ರವೀಂದ್ರ ಜಡೇಜಾ ಅವರಿಗೆ ಸಲಹೆ ನೀಡಿದ್ದು, ಸ್ಕೈ ಬೋರ್ಡ್ ಬ್ಯಾಲೆನ್ಸ್ ಮಾಡುವಾಗ ಜಡೇಜಾ ಅವರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ವಿಷಯ ಹೀಗಿದ್ದಾಗ
ಸಣ್ಣಪುಟ್ಟ ಗಾಯಗಳಾಗಿದೆ ಎಂದು ಏಕೆ ಹೇಳಿದರು? ಎನ್ನುವ ಪ್ರಶ್ನೆ ಶುರುವಾಗಿದೆ. ಆರು ತಿಂಗಳ ಕಾಲ ವಿಶ್ರಾಂತಿ ಅಗತ್ಯ ಇರುವ ದೊಡ್ಡ ಗಾಯವನ್ನು ಕಡಿಮೆ ಎಂದು ಹೇಳಲು ಕಾರಣವಾದರೂ ಏನಿರಬಹುದು?

ಪ್ರಮುಖ ಆಟಗಾರರ ಸುರಕ್ಷತೆಯ ಬಗ್ಗೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ಪರಿಸ್ಥಿತಿ ಬರಲು ಕಾರಣ ಎನ್ನುವುದು ಹಲವರು ಮಾಡುತ್ತಿರುವ ವಾದ ಆಗಿದೆ. ಜಡೇಜಾ ಅವರ ಅಲಭ್ಯತೆ ತಂಡದ ಮೇಲೆ ತೀವ್ರ ಪರಿಣಾಮ ಬೀರಿರುವುದು ಈಗಾಗಲೇ ಗೊತ್ತಿದೆ. ಇಷ್ಟು ದೊಡ್ಡ ಘಟನೆ ತೆರೆಮರೆಯಲ್ಲಿ ನಡೆಯುತ್ತಿರುವಾಗ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಈ ವಿಚಾರದ ಬಗ್ಗೆ ಏಕೆ ಗಂಭೀರವಾಗಿ ಪ್ರತಿಕ್ರಿಯೆ ನೀಡಲಿಲ್ಲ ಎನ್ನುವುದು ಸಹ ಚರ್ಚೆಯ ವಿಷಯವಾಗಿದೆ. ಒಂದು ಸಣ್ಣ ತಪ್ಪು ನಡೆದರು ದ್ರಾವಿಡ್ ಖಾರವಾಗಿ ಪ್ರತಿಕ್ರಿಯಿಸುವುದನ್ನು ನೋಡಿದ್ದೇವೆ. ಆದರೆ, ಈ ವಿಚಾರದಲ್ಲಿ ದ್ರಾವಿಡ್ ಮೌನವಾಗಿದ್ದಾರೆ. ಇಲ್ಲಿ ಅನಗತ್ಯ ಪ್ರಯೋಗ ಮಾಡಿ ತಂಡದ ನಿರ್ವಹಣೆ ತಲೆಕೆಳಗಾಗಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.

Comments are closed.