Neer Dose Karnataka
Take a fresh look at your lifestyle.

ತೆಲುಗಿನ ಖ್ಯಾತ ನಟ ಸಿದ್ದಾರ್ಥ್ ರವರು ಪ್ರೀತಿಸಿ ಕೈ ಕೊಟ್ಟ ನಟಿಯರು ಅದೆಷ್ಟು ಜನ ಗೊತ್ತೆ?? ಯಾವ್ಯಾವ ಟಾಪ್ ನಟಿಯರು ಲಿಸ್ಟ್ ನಲ್ಲಿ ಇದ್ದಾರೆ ಗೊತ್ತೇ??

ನಟ ಸಿದ್ಧಾರ್ಥ್ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಚ್ಚಾಗಿ ಚಾಕೊಲೇಟ್ ಬಾಯ್ ಕ್ಯಾರೆಕ್ಟರ್, ಲವರ್ ಬಾಯ್ ಪಾತ್ರಗಳಲ್ಲಿ ನಟಿಸುತ್ತಿದ್ದ ಈ ಹೀರೋ, ಸಿನಿಮಾ ಮಾಡುವಾಗಲೇ ಹಲವು ಹೀರೋಯಿನ್ ಗಳ ಜೊತೆ ಸಂಬಂಧ ಹೊಂದಿದ್ದರು. ಆಗ ಈ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಸಿದ್ಧಾರ್ಥ್ ಕೂಡ ಸ್ಟಾರ್ ಹೀರೋಗಳ ಪುತ್ರಿಯರ ಜೊತೆ ಲವ್ ಟ್ರ್ಯಾಕ್ಸ್ ನಡೆಸಿದ್ದಾರೆ. ಆಗ ಅವರ ಚಾರ್ಮ್ ಗೆ ಬಿದ್ದು ಹಲವು ನಟಿಯರು ಮೋಸ ಹೋಗಿದ್ದರು ಎನ್ನಲಾಗಿತ್ತು. ನಟ ಸಿದ್ಧಾರ್ಥ ತೆಲುಗು, ಬಾಲಿವುಡ್ ಮತ್ತು ತಮಿಳಿನಲ್ಲಿ ಕೆಲವೇ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಒಂದಷ್ಟು ಕಾಲ ಅವರ ಜೊತೆ ರಿಲೇಶನ್ಷಿಪ್ ಇಟ್ಟುಕೊಂಡು ಬೇಜಾರು ಮಾಡಿಕೊಂಡೇ ಹೊರಬಂದರು. ಇವರಿಂದ ಯಾವ್ಯಾವ ಹೀರೋಯಿನ್ ಗಳು ಮೋಸ ಹೋಗಿದ್ದಾರೆ ಎನ್ನುವುದನ್ನು ಈಗ ನೋಡೋಣ.. ಇದಕ್ಕೂ ಮೊದಲು ಸಿದ್ಧಾರ್ಥ್ ದೆಹಲಿಯ ತಮ್ಮ ಬಾಲ್ಯದ ಗೆಳೆತಿನೊಂದಿಗೆ , 2003ರಲ್ಲಿ ಮದುವೆಯಾದರು. ಕೇವಲ ಮೂರು ವರ್ಷಗಳ ಕಾಲ ಒಟ್ಟಿಗೆ ಇದ್ದ ಈ ಜೋಡಿ 2006 ರಲ್ಲಿ ಬೇರ್ಪಟ್ಟರು. ಆ ಸಮಯದಲ್ಲಿ ಈ ದಂಪತಿಗಳಿಗೆ ಒಬ್ಬ ಮಗನೂ ಇದ್ದನು. ನಂತರ ಕಮಲ್ ಹಾಸನ್ ಅವರ ಮಗಳು ಶ್ರುತಿ ಹಾಸನ್ ಅವರೊಡನೆ ರಿಲೇಶನ್ಷಿಪ್ ನಲ್ಲಿದ್ದರು. ಇವರಿಬ್ಬರೂ ಓ ಮೈ ಫ್ರೆಂಡ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆಗ ಇವರಿಬ್ಬರು ಪ್ರೀತಿಸಲು ಶುರು ಮಾಡಿದರು. ವರ್ಷಾನುಗಟ್ಟಲೆ ಚೆನ್ನಾಗಿದ್ದರು, ನಂತರ ಸಿದ್ಧಾರ್ಥ್ ನಡುವಳಿಕೆ ಇಷ್ಟವಾಗದ ಕಾರಣ ಶ್ರುತಿ ಹಾಸನ್ ಸಿದ್ಧಾರ್ಥ್ ಅವರಿಂದ ದೂರವಾದರು.

ನಟ ಸೈಫ್ ಅಲಿ ಖಾನ್ ಸಹೋದರಿ ಸೋಹಾ ಅಲಿ ಖಾನ್ ಅವರೊಂದಿಗೆ ರಂಗ್ ದೇ ಬಸಂತಿ ಸಿನಿಮಾದಲ್ಲಿ ನಟಿಸಿದ್ದ ಸಿದ್ಧಾರ್ಥ್ ಅವರೊಡನೆ ಸಹ ರಿಲೇಶನ್ಷಿಪ್ ನಲ್ಲಿದ್ದರು. ಇಬ್ಬರ ನಡುವೆ ಪ್ರೀತಿ ಚಿಗುರೊಡೆಯುತ್ತಿದ್ದಂತೆ ಒಂದೇ ಅಪಾರ್ಟ್ಮೆಂಟ್ ನಲ್ಲಿ ಒಟ್ಟಿಗೆ ವಾಸವಿದ್ದರು ಎಂಬ ಮಾತು ಕೇಳಿಬಂದಿತ್ತು, ನಂತರದ ಬೇರೆಯಾದರು. ಬಳಿಕ ಸಿದ್ದಾರ್ಥ ಅಕ್ಕಿನೇನಿ ಕುಟುಂಬದ ಮಾಜಿ ಸೊಸೆ ಸಮಂತಾ ಜೊತೆ ರಿಲೇಶನ್ಷಿಪ್ ನಲ್ಲಿದ್ದರು ಎಂಬ ವರದಿಗಳು ಬಂದಿದ್ದವು. ಸಿದ್ದಾರ್ಥ ಈಗಾಗಲೇ ಬೇರೊಬ್ಬ ಹುಡುಗಿಯೊಂದಿಗೆ ಕ್ಲೋಸ್ ಆಗಿದ್ದಾನೆ ಎಂದು ತಿಳಿದ ಸ್ಯಾಮ್ ಆತನಿಂದ ದೂರ ಸರಿದು ನಾಗಚೈತನ್ಯ ಅವರನ್ನು ಪ್ರೀತಿಸಲು ಶುರು ಮಾಡಿದರು. ಇತ್ತೀಚೆಗೆ ಸಿದ್ಧಾರ್ಥ್ ಅದಿತಿ ರಾವ್ ಹೈದರಿ ಜೊತೆ ಡೇಟಿಂಗ್ ಮಾಡುತ್ತಿದ್ದಾರಂತೆ. ಇತ್ತೀಚೆಗಷ್ಟೇ ಇವರಿಬ್ಬರೂ ಒಟ್ಟಿಗೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದರು.

Comments are closed.