Neer Dose Karnataka
Take a fresh look at your lifestyle.

ಅದೊಂದು ಕಾರಣಕ್ಕೆ ತನಗೆ ತಾನೇ ಶಿಕ್ಷೆ ವಿದಿಸಿಕೊಂಡಿದ್ದ ಪ್ರಭಾಸ್ ರವರ ದೊಡ್ಡಪ್ಪ ಕೃಷ್ಣಾಂರಾಜು. ಅಷ್ಟಕ್ಕೂ ಯಾಕೆ ಗೊತ್ತೇ??

ಟಾಲಿವುಡ್ ನ ಹಿರಿಯ ನಟ, ರೆಬೆಲ್ ಸ್ಟಾರ್ ಕೃಷ್ಣಂರಾಜು ಅವರ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಆಗಿನ ಕಾಲದಲ್ಲಿ ಎನ್.ಟಿ.ಆರ್, ಎ.ಎನ್.ಆರ್ ಅವರ ಅಭಿನಯ ಅಂದ್ರೆ ಕೃಷ್ಣಂರಾಜ್ ಅವರಿಗೆ ತುಂಬಾ ಇಷ್ಟ. ಎನ್‌.ಟಿ.ಆರ್ ಅನ್ನು ಶ್ರೀಕೃಷ್ಣನ ಪಾತ್ರದಲ್ಲಿ ನೋಡಲು ಕೃಷ್ಣಂರಾಜು ಅವರಃಇಷ್ಟಪಡುತ್ತಾರೆ. ಎನ್‌.ಟಿ.ಆರ್‌ ಅವರು ಕೃಷ್ಣನ ಅವತಾರದಲ್ಲಿದ್ದಾಗ ಕೃಷ್ಣಂರಾಜು ಅವರು ಎನ್.ಟಿ.ಆರ್ ಅವರನ್ನು ಮೊದಲ ಬಾರಿಗೆ ಭೇಟಿಯಾದರುಜ್ ಅದು ಶ್ರೀಕೃಷ್ಣತುಲಾಭಾರಂ ಸಿನಿಮಾ ಚಿತ್ರೀಕರಣ ಸಮಯದಲ್ಲಿ.

ಆ ಸಮಯದಲ್ಲಿ ಎನ್‌.ಟಿ.ಆರ್ ಅವರು ತಮ್ಮ ಮೇಲೆ ತೋರಿದ ಪ್ರೀತಿಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಕೃಷ್ಣಂರಾಜು ಅವರು ಹೇಳಿದರು. ಎನ್.ಟಿ.ಆರ್ ಅವರು ಕೃಷ್ಣಂರಾಜು ಅವರಿಗೆ ತಮ್ಮ ಸಿನಿಮಾಗಳಲ್ಲಿ ಒಂದು ಪಾತ್ರವನ್ನು ಕೊಡುತ್ತಿದ್ದರು. ತಮ್ಮ ಮನೆಯಲ್ಲಿ ಯಾರಿಗೂ ಹೇಳದೆ ಚೆನ್ನೈ ತಲುಪಿದ ಕೃಷ್ಣಂರಾಜು ಸಿನಿಮಾಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. 1966ರಲ್ಲಿ ಚಿಲಕ ಗೋರಿಂಕ ಚಿತ್ರದ ಮೂಲಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾದರು. ಆ ಸಿನಿಮಾ ನಿರೀಕ್ಷಿತ ಫಲಿತಾಂಶವನ್ನು ಪಡೆಯಲಿಲ್ಲ. ಅದಕ್ಕೆ ಸ್ನೇಹಿತರು, ನಿರ್ದೇಶಕ ನಿರ್ಮಾಪಕರು ಕಾರಣವಲ್ಲ ಎಂದು ಹೇಳಿದರು, ಆದರೆ ಅದರಿಂದ ಕೃಷ್ಣಂರಾಜು ಅವರು ತೃಪ್ತಿ ಹೊಂದಲಿಲ್ಲ. ನಟನಾಗಲು, ಅವರು ಅನೇಕ ಪುಸ್ತಕಗಳನ್ನು ಓದಿದರು ಹಾಗೂ ಖ್ಯಾತ ನಟ ನಾರಾಯಣ ರಾವ್ ಅವರಿಂದ ತರಬೇತಿ ಪಡೆದರು.

ಕೃಷ್ಣಂ ರಾಜು ಅವರಿಗೆ ಆ ಸಮಯದಲ್ಲಿ ಅನೇಕ ಚಿತ್ರಗಳ ಆಫರ್‌ ಗಳು ಬಂದರು ಕೆಲವು ಕಾಲ ಚಿತ್ರಗಳಿಂದ ದೂರ ಉಳಿಯುವ ಮೂಲಕ ಅಭಿನಯ ಕಳಿತುಕೊಂಡರು. ಅದರಲ್ಲು ಎ.ಎನ್.ಆರ್ ಅಭಿನಯದ ದೇವದಾಸ್ ಸಿನಿಮಾ ಕೃಷ್ಣಂರಾಜು ಅವರಿಗೆ ಬಹಳ ಇಷ್ಟವಾಯಿತು. ಆ ಸಿನಿಮಾವನ್ನು ಹಲವು ಬಾರಿ ನೋಡಿದ್ದೇನೆ ಎಂದಿದ್ದರು ಕೃಷ್ಣಂರಾಜು. ಕೃಷ್ಣಂರಾಜು ಅವರಿಗೆ ಎ.ಎನ್.ಆರ್ ಪ್ರೋತ್ಸಾಹ ನೀಡಿದರು. ಎ.ಎನ್.ಆರ್ ಅವರ ಜೊತೆಗೆ ಕೃಷ್ಣಂರಾಜು ಅವರು ಬುದ್ಧಿಮಂತುಡು, ಜೈ ಜವಾನ್, ರೈತ ಕುಟುಂಬ, ಪವಿತ್ರಬಂಧಂ, ಕನ್ನ ಸೋನಿ, ಎಸ್.ಪಿ.ಭಯಂಕರ್ ಚಿತ್ರಗಳಲ್ಲಿ ನಟಿಸಿದ್ದಾರೆ. ಕೃಷ್ಣಂರಾಜು ಅವರು ಮತ್ತು ಚಿರಂಜೀವಿ ಅವರು ಒಂದೇ ಊರಿನವರಾಗಿದ್ದರಿಂದ ಕೃಷ್ಣಂರಾಜು ಅವರು ಚಿರಂಜೀವಿ ಅವರನ್ನು ಮೊದಲಿಗೆ ಪ್ರೋತ್ಸಾಹಿಸಿದರು. ಕೃಷ್ಣಂರಾಜು ಅವರು ನಟಿಸಿದ ಮತ್ತು ನಿರ್ಮಿಸಿದ ಮನವೂರಿ ಪಾಂಡವುಲು ಚಿತ್ರದಲ್ಲಿ ಚಿರಂಜೀವಿ ಅವರಿಗೆ ಪ್ರಮುಖ ಪಾತ್ರವನ್ನು ನೀಡಿದರು.

Comments are closed.