Neer Dose Karnataka
Take a fresh look at your lifestyle.

ಕನ್ನಡದಲ್ಲಿ ಸಿನಿಮಾ ಮಾಡಿ ಎಂದಿದ್ದಕ್ಕೆ ಪೂಜಾ ಹೆಗ್ಡೆ ಕೊಟ್ಟ ರಿಯಾಕ್ಷನ್ ಹೇಗಿತ್ತು ಗೊತ್ತೇ?? ಯಶ್ ಜೊತೆ ಸಿನಿಮಾ ಮಾಡ್ತಾರಾ??

92

ನಟಿ ಪೂಜಾ ಹೆಗ್ಡೆ ಈಗ ಭಾರಿ ಸಂತೋಷದಲ್ಲಿದ್ದಾರೆ. ಅದಕ್ಕೆ ಕಾರಣ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಎರಡು ಅವಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ ಪೂಜಾ. ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ, ಹಾಗೂ ಯೂತ್ ಐಕಾನ್ ಅವಾರ್ಡ್ ಪೂಜಾ ಹೆಗ್ಡೆ ಅವರ ಪಾಲಾಗಿದೆ. ಸೈಮಾ ಅವಾರ್ಡ್ಸ್ ಗಾಗಿ ಇಡೀ ದಕ್ಷಿಣ ಭಾರತ ಚಿತ್ರತಂಡ ಬೆಂಗಳೂರಿಗೆ ಬಂದಿತು. ಪೂಜಾ ಹೆಗ್ಡೆ ಸಹ ಈ ಕಾರ್ಯಕ್ರಮದಲ್ಲಿ ಪಿಂಕ್ ಬಣ್ಣದ ಡಿಸೈನರ್ ವೇರ್ ನಲ್ಲಿ ಕಂಗೊಳಿಸಿದರು..

ಕಾರ್ಯಕ್ರಮದ ರೆಡ್ ಕಾರ್ಪೆಟ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು ಪೂಜಾ ಹೆಗ್ಡೆ, ಬೆಂಗಳೂರಿಗೆ ಬಂದಾಗ ಹೇಗನ್ನಿಸುತ್ತದೆ ಎಂದು ಕೇಳಿದ್ದಕ್ಕೆ ಉತ್ತರ ಕೊಟ್ಟ ಪೂಜಾ ಹೆಗ್ಡೆ, “ಬೆಂಗಳೂರಿಗೆ ಬರೋದು ಮನೆಗೆ ಬಂದ ಹಾಗೆ ಅನ್ನಿಸುತ್ತದೆ, ನನ್ನ ತುಂಬಾ ಜನ ರಿಲೇಟಿವ್ಸ್ ಇಲ್ಲೇ ಇದ್ದಾರೆ, ಬೆಂಗಳೂರಿಗೆ ಸೈಮಾ ಅವಾರ್ಡ್ಸ್ ಗಾಗಿ ಬಂದಿರೋದು ತುಂಬಾ ಸಂತೋಷ ಆಗ್ತಿದೆ. ನಾನು ಕನ್ನಡತಿ..” ಎಂದಿದ್ದಾರೆ ಪೂಜಾ. ಹಾಗೆಯೇ ಯಶ್ ಅವರ ಮುಂದಿನ ಸಿನಿಮಾದಲ್ಲಿ ನಟಿಸುತ್ತೀರಾ? ಕನ್ನಡಕ್ಕೆ ಯಾವಾಗ ಬರ್ತೀರ ಎಂದು ಕೂಡ ಪ್ರಶ್ನೆ ಕೇಳಲಾಗಿದ್ದು, “ನೋಡೋಣ.. ಶೀಘ್ರದಲ್ಲೇ ಕನ್ನಡದಲ್ಲಿ ಏನಾದರೂ ಮಾಡಬೇಕು ಅಂದುಕೊಂಡಿದ್ದೇನೆ..” ಎಂದಿದ್ದಾರೆ.

ಪೂಜಾ ಹೆಗ್ಡೆ ಹೇಳಿದ ಈ ಮಾತುಗಳನ್ನು ಕೇಳಿ ಅವರ ಕನ್ನಡದ ಅಭಿಮಾನಿಗಳಿಗೆ ಬಹಳ ಸಂತೋಷ ಆಗಿರುವುದಂತೂ ನಿಜ. ಪೂಜಾ ಹೆಗ್ಡೆ ಅವರು ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ತೆಲುಗಿನಲ್ಲಿ ಮಹೇಶ್ ಬಾಬು ಅವರ ಮುಂದಿನ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರಿಗೆ ನಾಯಕಿಯಾಗಿ ಸಿನಿಮಾ ಮಾಡುತ್ತಿದ್ದಾರೆ. ಸೌತ್ ಅಂಡ್ ಬಾಲಿವುಡ್ ಎರಡು ಕಡೆ ಬಹುಬೇಡಿಕೆ ಉಳಿಸಿಕೊಂಡಿದ್ದಾರೆ ಪೂಜಾ ಹೆಗ್ಡೆ.

Leave A Reply

Your email address will not be published.