Neer Dose Karnataka
Take a fresh look at your lifestyle.

ಸಿಲ್ಕ್ ಸ್ಮಿತಾ ರವರ ಸಂಪೂರ್ಣ ಆಸ್ತಿಯನ್ನು ಕಸಿದುಕೊಂಡು ಆಕೆಯ ಜೀವನಕ್ಕೆ ಅಂತ್ಯ ಹಾಡಿದ ನಟ ಯಾರು ಗೊತ್ತೇ??

ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಿಲ್ಕ್ ಸ್ಮಿತಾ ಎನ್ನುವ ಹೆಸರು ಕೇಳದೆ ಇರುವವರು ಇರಲು ಸಾಧ್ಯವಿಲ್ಲ. ಈಗಿನ ಜೆನೆರೇಷನ್ ನವರಿಗೂ ಸಹ ಸಿಲ್ಕ್ ಸ್ಮಿತಾ ಅವರು ಪರಿಚಿತರಾಗಿರುತ್ತಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಹ ನಟಿಸಿ, ತಮ್ಮದೇ ಆದ ಛಾಪು ಮೂಡಿಸಿದವರು ಸಿಲ್ಕ್ ಸ್ಮಿತಾ. ಈ ಎಲ್ಲಾ ಭಾಷೆಗಳಲ್ಲಿ 200 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿದ್ದರು. ಆಕೆ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡ ಸಿನಿಮಾ ಹಿಟ್ ಆಗುತ್ತದೆ ಎಂದು ಸಿನಿಮಾ ನಿರ್ಮಾಪಕರು ಅವರ ಮನೆಯ ಮುಂದೆ ಕ್ಯೂ ನಿಲ್ಲುತ್ತಿದ್ದರಂತೆ.

ಅವರ ಕಾಲ್ ಶೀಟ್ ಗಾಗಿ ಕಾಯುತ್ತಿದ್ದರು, ಸಿಲ್ಕ್ ಸ್ಮಿತಾ ಅವರು ಎಷ್ಟೇ ಹಣ ಕೇಳಿದರು ಕೊಡುತ್ತಿದ್ದರಂತೆ, ಅವರು ಕೊಟ್ಟ ಡೇಟ್ಸ್ ನಲ್ಲಿ ಸಿನಿಮಾ ಚಿತ್ರೀಕರಣ ಇಟ್ಟುಕೊಳ್ಳುತ್ತಿದ್ದರಂತೆ. ಆಗಿನ ಕಾಲದ ಟಾಪ್ ಹೀರೋಗಳು, ಹೀರೋಯಿನ್ ಗಳಿಗೂ ಸಿಗದಷ್ಟು ಸಂಭಾವನೆ ಸಿಲ್ಕ್ ಸ್ಮಿತಾ ಅವರಿಗೆ ಸಿಗುತ್ತಿತ್ತು, ಅವರ ಕ್ರೇಜ್ ಅಷ್ಟರ ಮಟ್ಟಿಗೆ ಇತ್ತು. ಸಿಲ್ಕ್ ಸ್ಮಿತಾ ಅವರ ಮೇಲೆ ಜನರಿಗೆ ಇದ್ದ ಕ್ರೇಜ್ ಹೇಗಿತ್ತು ಅಂದ್ರೆ, ಅವರು ಕೇಳಿದಷ್ಟು ಹಣವನ್ನು ನಿರ್ಮಾಪಕರು ಕೊಡುತ್ತಿದ್ದ ಕಾರಣ, ಸಿಲ್ಕ್ ಸ್ಮಿತಾ ಅವರು ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿದ್ದರಂತೆ. ಸಿಲ್ಕ್ ಸ್ಮಿತಾ ಅವರ ಬಳಿ ಹಣ ಇದ್ದಾಗ, ಅನೇಕ ಸಿನಿಮಾ ನಟ ನಟಿಯರು ಅವರ ಜೊತೆ ಬಹಳ ಆತ್ಮೀಯವಾಗಿದ್ದರು.

ನಂತರ ಅವರು ನಟನೆಯ ಜೊತೆಗೆ ನಿರ್ಮಾಪಕಿಯು ಆಗಿದ್ದು, ಅವರ ಕೆರಿಯರ್ ಗೆ ಶಾಪವಾಯಿತು. ಸಿಲ್ಕ್ ಸ್ಮಿತಾ ಅವರು ನಿರ್ಮಾಣ ಮಾಡಿದ ಸಿನಿಮಾಗಳು ಸಾಲು ಸಾಲಾಗಿ ಫ್ಲಾಪ್ ಆದ ಕಾರಣ ಬಹಳ ನಷ್ಟ ಅನುಭವಿಸಿದರು. ಆಕೆಯ ಜೊತೆಗೆ ಆತ್ಮೀಯವಾಗಿದ್ದವರು ಸಹ ಮೋಸ ಮಾಡಿದರು, ಮದ್ಯಪಾನ ಮಾಡಿದ್ದಾಗ ಆಕೆಯ ಕೈಯಿಂದ ಹಲವು ಡಾಕ್ಯುಮೆಂಟ್ ಗಳಿಗೆ ಸಹಿ ಹಾಕಿಸಿಕೊಂಡರು. ಸಿಲ್ಕ್ ಸ್ಮಿತಾ ಅವರೊಡನೆ ಬಹಳ ಆತ್ಮೀಯವಾಗಿದ್ದ ಒಬ್ಬ ನಟನಿಂದ ಆಕೆ ಮೋಸ ಹೋದ ಕಾರಣ ಅವರು ತಮ್ಮ ಇಡೀ ಆಸ್ತಿಯನ್ನು ಕುಟುಂಬದವರ ಹೆಸರಿಗೆ ಬರೆದು ಆತ್ಮ ಹತ್ಯೆ ಮಾಡಿಕೊಂಡರು ಎನ್ನಲಾಗಿದೆ.

Comments are closed.