Neer Dose Karnataka
Take a fresh look at your lifestyle.

ನೆನಪಿದ್ದರ ಈ ಖ್ಯಾತ ನಟಿ ಭಾನು ಪ್ರಿಯ: ಅಂದು ಮದುವೆಯಾಗಿದ್ದ ಡೈರೆಕ್ಟರ್ ಜೊತೆ ಪ್ರೀತಿ ಮಾಡಿ, ಕೊನೆಗೆ ಜೀವನ ಏನಾಯಿತು ಗೊತ್ತೇ??

ನಟಿ ಭಾನುಪ್ರಿಯಾ ಅವರ ಬಗ್ಗೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಬಹಳ ಪರಿಚಯ ಇದೆ. ಆಗಿನ ಕಾಲದಲ್ಲಿ ನಟಿ ಭಾನುಪ್ರಿಯ ಅವರು ತಮ್ಮ ನಟನೆ ಮತ್ತು ಸೌಂದರ್ಯದಿಂದ ಮನಸೆಳೆಯುತ್ತಿದ್ದರು. ಆಗ ಆಕೆಗೆ ಒಳ್ಳೆಯ ಫ್ಯಾನ್ ಬೇಸ್ ಸಹ ಇತ್ತು. ಮೊದಲಿಗೆ ಹೀರೋಯಿನ್ ಆಗಿ, ನಂತರ ಹೀರೋ ಅಕ್ಕ, ತಾಯಿ ಪಾತ್ರಗಳಲ್ಲು ಮಿಂಚಿದ್ದಾರೆ. ಸೂರ್ಯವಂಶ ಸಿನಿಮಾದಲ್ಲಿ ಭಾನುಪ್ರಿಯಾ ಅವರ ನಟನೆ ನಿಜಕ್ಕೂ ಅದ್ಭುತವೆಂದೇ ಹೇಳಬೇಕು. ನಟ ಮೋಹನ್ ಬಾಬು, ನಟ ಚಿರಂಜೀವಿ, ನಟ ಬಾಲಯ್ಯ ಮತ್ತು ನಟ ಕೃಷ್ಣ ಅವರಂತಹ ಹೀರೋಗಳ ಜೊತೆಗೆ ನಟಿಸಿದ್ದಾರೆ.

ಭಾನುಪ್ರಿಯಾ ಅವರು ನಟಿಸಿದ ಸಿತಾರ ಸಿನಿಮಾವನ್ನು ಅಂದಿನ ಸೂಪರ್ ಹಿಟ್ ನಿರ್ದೇಶಕ ವಂಶಿ ನಿರ್ದೇಶಿಸಿದ್ದರು. ಅದು ವಂಶಿ ಅವರ ಎರಡನೇ ಸಿನಿಮಾ, ಭಾನುಪ್ರಿಯಾ ಅವರಿಗೆ ಮೊದಲ ಸಿನಿಮಾ. ಈ ಸಿನಿಮಾ ಭಾರೀ ಹಿಟ್ ಆಯಿತು. ಹಾಗಾಗಿ ವಂಶಿ ಅವರು ತಮ್ಮ ಮುಂದಿನ ಸಿನಿಮಾಗಳಲ್ಲಿ ಭಾನುಪ್ರಿಯಾ ಅವರನ್ನು ಹಾಕಿಕೊಂಡರು. ಹೀಗೆ ಅವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಾಯಿತು. ಆಗಲೇ ಮದುವೆಯಾಗಿ ಮಕ್ಕಳಿದ್ದ ವಂಶಿ ಅವರನ್ನು ಭಾನುಪ್ರಿಯಾ ಪ್ರೀತಿಸುತ್ತಿದ್ದರು. ಭಾನುಪ್ರಿಯಾ ಅವರ ತಾಯಿಗೆ ಈ ವಿಚಾರ ಸ್ವಲ್ಪವೂ ಇಷ್ಟವಿರಲಿಲ್ಲ.

ಆದರೆ ನಿರ್ದೇಶಕ ವಂಶಿ ಅವರು ನಿಜವಾಗಿಯು ಭಾನುಪ್ರಿಯಾ ಅವರನ್ನು ಇಷ್ಟಪಟ್ಟಿದ್ದರು, ಭಾನುಪ್ರಿಯಾ ಅವರನ್ನೇ ಮದುವೆಯಾಗಲು ಬಯಸಿದ್ದರು. ಆದರೆ ಮಗಳ ಭವಿಷ್ಯ ಹಾಳಾಗಬಾರದು ಎಂದು ಭಾನುಪ್ರಿಯಾ ಅವರ ತಾಯಿ ಹಲವು ಷರತ್ತುಗಳನ್ನು ಹಾಕಿದ್ದರು. ತಾಯಿಯ ಸಲಹೆಯಿಂದಾಗಿ ನಿರ್ದೇಶಕ ವಂಶಿ ಅವರಿಂದ ಭಾನುಪ್ರಿಯಾ ದೂರವಾಗಿದ್ದರು. ಹಿರಿಯ ನಿರ್ದೇಶಕ ಸಾಗರ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು, ನಾಯಕಿಯಾಗಿ ಜನಪ್ರಿಯರಾದ ನಂತರ ನಟಿ ಭಾನುಪ್ರಿಯಾ ಎನ್‌.ಆರ್‌.ಐ ಒಬ್ಬರನ್ನು ಮದುವೆಯಾಗಿ ಅಮೆರಿಕಾದಲ್ಲಿ ನೆಲೆಸಿದ್ದರು ಕೆಲ ವರ್ಷಗಳ ಹಿಂದೆ ಪತಿಗೆ ವಿಚ್ಛೇದನ ನೀಡಿದರು ಎಂದು ಹೇಳಿದ್ದಾರೆ.

Comments are closed.