Neer Dose Karnataka
Take a fresh look at your lifestyle.

ಒಂದಲ್ಲ ಎರಡಲ್ಲ ಬರೋಬ್ಬರಿ 12 ವರ್ಷಗಳ ಬಳಿಕ ಶುರುವಾಗುತ್ತಿದೆ ಬೃಹಸ್ಪತಿಯ ವಕ್ರ ನಡೆ. ಇದರಿಂದ ಲಾಭ ಪಡೆಯುವ ರಾಶಿಗಳು ಯಾವ್ಯಾವು ಗೊತ್ತೇ??

ಪ್ರತೀಯೊಂದು ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಈ ರೀತಿಯ ಗ್ರಹಗಳ ಸ್ಥಾನ ಬದಲಾವಣೆ ಇಂದ, ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. 12 ವರ್ಷಗಳ ನಂತರ ಗುರು ಗ್ರಹವು ತನ್ನ ರಾಶಿಯಾಗಿರುವ ಮೀನ ರಾಶಿಯಲ್ಲಿ ವಕ್ರನಡೆ ಶುರುಮಾಡಿದ್ದು, ನವೆಂಬರ್ 24ರ ವರೆಗೂ ಅದೇ ರೀತಿ ಇರಲಿದೆ. ಗುರುವಿನ ಈ ವಕ್ರನಡೆಯ ಪ್ರಭಾವ ಎಲ್ಲಾ ರಾಶಿಗಳ ಮೇಲು ಬೀರಲಿದ್ದು, ಮೂರು ರಾಶಿಗಳ ಮೇಲೆ ವಿಶೇಷವಾದ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಗುರುವಿನ ಕೃಪೆಯಿಂದ ವಿಶೇಷ ಪ್ರಭಾವ ಬೀರಲಿದ್ದು, ಮೂರು ರಾಶಿಯವರ ಉದ್ಯೋಗ ಹಾಗೂ ವ್ಯಾಪಾರದಲ್ಲಿ ಒಳ್ಳೆಯ ಲಾಭ ಪಡೆಯುತ್ತಾರೆ. ಆ ರಾಶಿಗಳ ಬಗ್ಗೆ ಈಗ ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :-ಈ ರಾಶಿಯಲ್ಲಿ ಗುರುವಿನ ವಕ್ರನಡೆಯಿಂದ ಬಹಳ ಲಾಭವಾಗುತ್ತದೆ. ಈ ರಾಶಿಯವರ ಜಾತಕದ 11ನೇ ಮನೆಯಲ್ಲಿ ಗುರುವಿನ ವಕ್ರನಡೆ ಶುರುವಾಗಲಿದ್ದು, ಇದು ಆದಾಯ ಹಾಗೂ ಲಾಭದ ಮನೆ ಆಗಿರುವ ಕಾರಣ, ಗುರುವಿನ ವಕ್ರನಡೆಯಿಂದ ಇವರ ಆದಾಯದಲ್ಲಿ ಪ್ರಮುಖವಾಗಿ ಏಳಿಗೆಯಾಗುತ್ತದೆ. ಬ್ಯುಸಿನೆಸ್ ನಲ್ಲಿ ಧನಲಾಭ ಆಗುತ್ತದೆ, ಹೆಚ್ಚು ಮೂಲಗಳಿಂದ ಆದಾಯ ಬರುತ್ತದೆ. ಹಲವು ಒಳ್ಳೆಯ ಡೀಲ್ ಗಳು ಫಿಕ್ಸ್ ಆಗುವ ಸಾಧ್ಯತೆ ಇದೆ, ವಾಹನ ಅಥವಾ ಆಸ್ತಿ ಖರೀದಿ ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಈ ರಾಶಿಯ 8ನೇ ಮನೆಯ ಅಧಿಪತಿ ಗುರು ಆಗಿದ್ದು, ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದ್ದು. ಹಲವು ದಿನಗಳಿಂದ ತೊಂದರೆ ಕೊಡುತ್ತಿರುವ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ. ಈ ಸಮಯದಲ್ಲಿ ಸ್ಫಟಿಕ ಧರಿಸುವುದು ಒಳ್ಳೆಯದು.

ಮಿಥುನ ರಾಶಿ :- ಈ ರಾಶಿಯವರಿಗೆ ಗುರುವಿನ ವಕ್ರನಡೆ ವ್ಯಾಪಾರ ಮತ್ತು ವಹಿವಾಟಿನಲ್ಲಿ ಉತ್ತಮ ಲಾಭ ಗಳಿಸುವ ಹಾಗೆ ಮಾಡುತ್ತದೆ. ಈ ರಾಶಿಯವರ 10ನೇ ರಾಶಿಯಲ್ಲಿ ಗುರುವಿನ ವಕ್ರನಡೆ ಶುರುವಾಗಲಿದ್ದು, ಇದು ಉದ್ಯೋಗ, ವ್ಯಾಪಾರ ಹಾಗೂ ಕಾರ್ಯಕ್ಷೇತ್ರದ ಮನೆ ಆಗಿದೆ. ಈ ಸಮಯದಲ್ಲಿ ನಿಮಗೆ ಹೊಸಕೆಲಸ, ಈಗಾಗಲೇ ಕೆಲಸದಲ್ಲಿ ಇರುವವರಿಗೆ ಪ್ರೊಮೋಷನ್, ವೇತನ ಹೆಚ್ಚಳ ಆಗುವ ಸಾಧ್ಯತೆ ಇದೆ. ಬ್ಯುಸಿನೆಸ್ ನಲ್ಲಿ ಹೊಸ ಆರ್ಡರ್ ಗಳು ಸಿಗಬಹುದು, ಹೊಸ ವ್ಯಾಪಾರಗಳು ಶುರುವಾಗಬಹುದು. ಧನಲಾಭ ಆಗುವ ಸಾಧ್ಯತೆ ಇದೆ, ಕೋರ್ಟ್ ಕೇಸ್ ಗಳು ನಡೆಯುತ್ತಿದ್ದಲ್ಲಿ ಜಯ ನಿಮ್ಮದಾಗಲಿದೆ. ಈ ಸಮಯದಲ್ಲಿ ಪಚ್ಚೆ ಧರಿಸುವುದರಿಂದ ಒಳ್ಳೆಯದಾಗುತ್ತದೆ.

ಕರ್ಕಾಟಕ ರಾಶಿ :- ಗುರುವಿನ ವಕ್ರನಡೆಯಿಂದ ಈ ರಾಶಿಯವರಿಗೆ ಧನಲಾಭ ಆಗಬಹುದು. ಈ ರಾಶಿಯವರ ಜಾತಕದ 9ನೇ ಮನೆಯಲ್ಲಿ ಗುರುವಿನ ವಕ್ರನಡೆ ಶುರುವಾಗಿದ್ದು, ಇದು ಭಾಗ್ಯ ಹಾಗೂ ವಿದೇಶ ಯಾತ್ರೆಯ ಮನೆ ಇದಾಗಿದೆ. ಈ ಸಮಯ ನಿಮಗೆ ಸಂಪೂರ್ಣವಾಗಿ ಒಳ್ಳೆಯದಾಗುತ್ತದೆ. ಬಹಳ ಸಮಯದಿಂದ ಉಳಿದಿದ್ದ ಕೆಲಸಗಳಲ್ಲಿ ಯಶಸ್ಸು ಕಾಣುತ್ತೀರಿ. ಕೆಲಸದ ಕಾರಣದಿಂದ ಸಣ್ಣ ಪುಟ್ಟ ಯಾತ್ರೆಗಳು ನಡೆಯಬಹುದು, ಇದರಿಂದ ನಿಮಗೆ ಲಾಭ ಸಿಗುತ್ತದೆ. ವಿದೇಶದಲ್ಲಿ ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಗುರುವಿನ ವಕ್ರನಡೆ ನಿಮಗೆ ಲಾಭದಾಯಕವಾಗಿರಲಿದೆ.

Comments are closed.