Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಧಾರವಾಹಿ ನಟಿಯ ಕೋಟಾದಲ್ಲಿ ಬಿಗ್ ಬಾಸ್ 9 ತೆರಳುತ್ತಿರುವ ಟಾಪ್ ನಟಿ ಯಾರು ಗೊತ್ತೇ?? ಹುಡುಗರ ಬೆಂಬಲ ಅಂತೂ ಇವರಿಗೆ ಫಿಕ್ಸ್.

ಬಿಗ್ ಬಾಸ್ ಓಟಿಟಿ ಸೀಸನ್ ಈ ವಾರ ಮುಗಿಯಲಿದೆ. ಈ ಶೋನ ಟಾಪ್ ನಾಲ್ಕು ಸ್ಪರ್ಧಿಗಳು ಬಿಗ್ ಬಾಸ್ ಸೀಸನ್ 9 ಕ್ಕೆ ಎಂಟ್ರಿ ಕೊಡಲಿದ್ದಾರೆ. ಇದೀಗ ಬಿಗ್ ಬಾಸ್ ಓಟಿಟಿಯಿಂದ ಟಿವಿ ಬಿಗ್ ಬಾಸ್ ಗೆ ಯಾರೆಲ್ಲಾ ಬರುತ್ತಾರೆ ಎನ್ನುವ ಕುತೂಹಲ ಶುರುವಾಗಿದೆ. ಈಗಾಗಲೇ ಟಿವಿ ಸೀಸನ್ ಪ್ರೋಮೋ ಸಹ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಪ್ರೊಮೋಗೆ ಒಳ್ಳೆಯ ರೆಸ್ಪಾನ್ಸ್ ಸಹ ಸಿಕ್ಕಿದೆ.

ಇನ್ನು ಈ 9ನೇ ಸೀಸನ್ ನಲ್ಲಿ ಬಿಗ್ ಬಾಸ್ ಮನೆಗೆ ಹೋಗುವ ಸ್ಪರ್ಧಿಗಳು ಯಾರ್ಯಾರು ಎನ್ನುವ ಕುತೂಹಲ ಸಹ ಜನರಲ್ಲಿ ಹೆಚ್ಚಾಗಿದೆ. ನಮಗೆಲ್ಲ ಗೊತ್ತಿರುವ ಹಾಗೆ, ಬಿಗ್ ಬಾಸ್ ಟಿವಿ ಸೀಸನ್ ಗೆ ಧಾರವಾಹಿ ಸಿನಿಮಾ ಸೆಲೆಬ್ರಿಟಿಗಳು ಬರುತ್ತಾರೆ ಎನ್ನುವ ವಿಚಾರ ಗೊತ್ತಿದೆ. ಈ ಸಾರಿ ಜೀಕನ್ನಡ ವಾಹಿನಿಯಲ್ಲಿ ಕಮಲಿ ಧಾರವಾಹಿ ಮೂಲಕ ಫೇಮಸ್ ಆಗಿರುವ ಧಾರವಾಹಿ ನಾಯಕಿ, ನಟಿ ಅಮೂಲ್ಯ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ಈಗ ಕೇಳಿಬರುತ್ತಿದೆ.

ಅಮೂಲ್ಯ ಗೌಡ ಅವರಿಗೆ ಕಮಲಿ ಧಾರವಾಹಿಯಿಂದ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಧಾರವಾಹಿಯಲ್ಲಿ ಮುಗ್ಧ ಹಳ್ಳಿ ಹುಡುಗಿಯಾಗಿ, ನಂತರ ಸ್ಟ್ರಾಂಗ್ ಹುಡುಗಿಯಾಗಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಬೆಳ್ಳಿತೆರೆಯ ಮಿಂಚಬೇಕು ಎನ್ನುವ ಕನಸು ಕಟ್ಟಿಕೊಂಡಿರುವ ಅಮೂಲ್ಯ ಗೌಡ ಅವರು ಈಗ ಬಿಗ್ ಬಾಸ್ ಬರುತ್ತಾರೆ ಎನ್ನಲಾಗುತ್ತಿದೆ, ಒಂದು ವೇಳೆ ಇವರು ಬಿಗ್ ಬಾಸ್ ಶೋಗೆ ಬಂದರೆ ಎಲ್ಲಾ ಹುಡುಗರಿಗೂ ಇವರು ಫೇವರೆಟ್ ಆಗುವುದು ಖಚಿತ ಎನ್ನಲಾಗುತ್ತಿದೆ. ಸೆಪ್ಟೆಂಬರ್ 24ರಂದು ಬಿಗ್ ಬಾಸ್ ಸೀಸನ್ 9 ಶುರುವಾಗಲಿದ್ದು, ಅಲ್ಲಿಯವರೆಗೂ ಈ ವಿಚಾರದ ಬಗ್ಗೆ ಖಚಿತ ಮಾಹಿತಿಗಾಗಿ ಕಾಯಬೇಕಿದೆ.

Comments are closed.