Neer Dose Karnataka
Take a fresh look at your lifestyle.

ಶುರುವಾಯಿತು ನಿಮ್ಮ ಒಳ್ಳೆಯ ಸಮಯ: ಶುಕ್ರ ದೇವನ ಕೃಪೆಯಿಂದ ಶುಕ್ರ ದೆಸೆ ಪಡೆದು ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗ್ರಹಕ್ಕೆ ವಿಶೇಷವಾದ ಸ್ಥಾನವಿದೆ, ಇದನ್ನು ಮಂಗಳಕರ ಗ್ರಹ ಎಂದು ಕರೆಯಲಾಗುತ್ತದೆ. ಶುಕ್ರಗ್ರಹವು ಜೀವನಕ್ಕೆ ಸಂತೋಷ, ಸಮೃದ್ಧಿ, ಸೌಂದರ್ಯ, ಗೌರವ, ಪ್ರೀತಿ, ಪ್ರೇಮ ನೀಡುತ್ತದೆ. ನಿಮ್ಮ ಜೀವನಕ್ಕೆ ಸಂತೋಷ ತರುವುದು ಶುಕ್ರಗ್ರಹ ಆಗಿದೆ. 2022ರ ಸೆಪ್ಟೆಂಬರ್ 15, ರಾತ್ರಿ 2:29ಕ್ಕೆ ಶುಕ್ರಗ್ರಹವು ಸೂರ್ಯನ ರಾಶಿ ಆಗಿರುವ ಸಿಂಹ ರಾಶಿಗೆ ಪ್ರವೇಶ ಮಾಡಲಿದೆ. 2022ರ ಡಿಸೆಂಬರ್ 2ರ ವರೆಗೂ ಇದೇ ರೀತಿ ಇರಲಿದೆ. ಗ್ರಹಗಳು ಅಸ್ತಮವಾಗುವ ಸ್ಥಿತಿ ಅಷ್ಟೇನು ಒಳ್ಳೆಯದಲ್ಲ ಎನ್ನುತ್ತಾರೆ, ಆದರೆ ಕೆಲವು ಗ್ರಹಗಳು ಅಸ್ತಮಿಸುವ ಸಮಯದಲ್ಲಿ ಸಹ ಕೆಲವು ರಾಶಿಗಳಿಗೆ ಒಳ್ಳೆಯದು ಮಾಡುತ್ತಾರೆ. ಶುಕ್ರ ಗ್ರಹವು ಸಹ ಅಸ್ತಮಿಸುವ ಸಮಯದಲ್ಲಿ ಕೆಲವು ರಾಶಿಗಳಿಗೆ ಒಳ್ಳೆಯ ಫಲ ನೀಡಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಶುಕ್ರಗ್ರಹ ಅಸ್ತಮಿಸುವ ಸಮಯ ಮೇಷ ರಾಶಿಯವರಿಗೆ ಮನೆಯ ಮೇಲಿನ ಜವಾಬ್ದಾರಿ ಹೆಚ್ಚು ಮಾಡುತ್ತದೆ. ಹಾಗೆಯೇ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಶಾಂತಿ ಮತ್ತು ಆನಂದ್ ಇರುತ್ತದೆ.

ವೃಷಭ ರಾಶಿ :- ಈ ರಾಶಿಯ ಅಧಿಪತಿ ಶುಕ್ರ ಗ್ರಹ, ಈ ಸಮಯದಲ್ಲಿ ವೃಷಭ ರಾಶಿಯವರಿಗೆ ಪ್ರೀತಿ ನೀಡುತ್ತಾನೆ, ಸಂಗಾತಿಯ ಜೊತೆಗಿನ ಸಂಬಂಧ ಬಹಳ ಚೆನ್ನಾಗಿರುತ್ತದೆ. ಮನೆಯವರ ಸಂತೋಷಕ್ಕಾಗಿ ಕೆಲಸ ಮಾಡುತ್ತೀರಿ. ಕುಟುಂಬದ ಜೊತೆಗೆ ಪ್ರವಾಸ ಹೋಗುವ ಪ್ಲಾನ್ ಮಾಡಬಹುದು.

ಮಿಥುನ ರಾಶಿ :- ಈ ಸಮಯದಲ್ಲಿ ಮಿಥುನ ರಾಶಿಯವರು ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುತ್ತಾರೆ. ನಿಮ್ಮ ಪ್ರೀತಿಯ ಜೀವನ ಬಹಳ ಮಧುರವಾಗಿರುತ್ತದೆ. ಸಂಗಾತಿಯ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ. ಆರ್ಥಿಕವಾಗಿ ಏಳಿಗೆ ಕಾಣುತ್ತೀರಿ.

ಕನ್ಯಾ ರಾಶಿ :- ಶುಕ್ರನ ಅಸ್ತಮವು ಕನ್ಯಾ ರಾಶಿಯವರಿಗೆ ಹೊಸ ಜನರ ಪರಿಚಯ ಆಗಲಿದೆ, ನಿಮ್ಮದು ಆಕರ್ಷಕ ವ್ಯಕ್ತಿತ್ವ ಆಗಿದೆ. ಇನ್ನು ಮದುವೆ ಆಗದೆ ಇರುವವರಿಗೆ ಕಂಕಣ ಭಾಗ್ಯ ಕೂಡಿಬರುತ್ತದೆ. ಐಶಾರಮಿ ಜೀವನಕ್ಕೆ ಸೌಲಭ್ಯಗಳು ಸಿಗುತ್ತದೆ.

ತುಲಾ ರಾಶಿ :- ಈ ರಾಶಿಯ ಅಧಿಪತಿಯೇ ಶುಕ್ರಗ್ರಹವು, ಹಾಗಾಗಿ ಈ ಸಮಯ ತುಲಾ ರಾಶಿಯವರಿಗೆ ವರದಾನದ ಹಾಗೆಯೇ ಇರುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ, ಪ್ರಶಂಸೆ ಪಡೆಯುತ್ತೀರಿ. ಜೀವನದಲ್ಲಿ ಸೌಕರ್ಯ ಹೆಚ್ಚಾಗುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ, ದೊಡ್ಡ ಕಂಪನಿಯಿಂದ ಉದ್ಯೋಗಕ್ಕೆ ಅವಕಾಶ ಸಿಗಬಹುದು.

ವೃಶ್ಚಿಕ ರಾಶಿ :- ಈ ಸಮಯದಲ್ಲಿ ನಿಮ್ಮ ಸೌಕರ್ಯಗಳು ಜಾಸ್ತಿಯಾಗುತ್ತದೆ. ಐಶ್ವರ್ಯ ಏರಿಕೆಯಾಗುತ್ತದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಉದ್ಯೋಗದಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ.

ಮಕರ ರಾಶಿ :- ಇದು ನಿಮ್ಮ ಕುಟುಂಬಕ್ಕೆ ಒಳ್ಳೆಯ ಸಮಯ ಆಗಿದೆ, ಸಂಬಂಧಗಳು ಗಟ್ಟಿಯಾಗಿರುತ್ತದೆ. ನಿಮ್ಮ ಸಂಗಾತಿಯ ಜೊತೆಗೆ ಮಧುರವಾದ ಸಮಯ ಕಳೆಯುತ್ತೀರಿ. ಹಣದ ಪ್ರಯೋಜನ ಆಗಲಿದೆ. ಜೀವನದಲ್ಲಿ ನೆಮ್ಮದಿ ಪಡೆಯುತ್ತೀರಿ.

ಮೀನ ರಾಶಿ :- ಜೀವನದಲ್ಲಿ ಸೌಕರ್ಯಗಳು ಜಾಸ್ತಿಯಾಗುತ್ತದೆ, ಒಳ್ಳೆಯ ರೀತಿಯಲ್ಲಿ ಜೀವನ ಸಾಗುತ್ತದೆ. ಸಂಗಾತಿಯ ಜೊತೆಗೆ ಎಲ್ಲವೂ ಚೆನ್ನಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ.

Comments are closed.