Neer Dose Karnataka
Take a fresh look at your lifestyle.

ವಿವಿಧ ಶೋ ಗಳಲ್ಲಿ ಮಿಂಚಿರುವ ನಂದಿನಿ ಕನ್ನಡ ಬಿಗ್ ಬಾಸ್ ಗೆ ಬರಲು ಪಡೆದ ಸಂಭಾವನೆ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ. ಎಷ್ಟು ಅಂತೇ ಗೊತ್ತೇ?

33

ಬಿಗ್ ಬಾಸ್ ಕನ್ನಡ ಓಟಿಟಿ ಶೋನ ಕೊನೆಯ ವಾರ ನಡೆಯುತ್ತದೆ. ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಒಬ್ಬರು ವಿನ್ನರ್, ಹಾಗೂ ನಾಲ್ವರು ಬಿಗ್ ಬಾಸ್ ಟಿವಿ ಸೀಸನ್ ಗೆ ಆಯ್ಕೆಯಾಗಲಿದ್ದಾರೆ. ಪ್ರಸ್ತುತ ಬಿಗ್ ಬಾಸ್ ಓಟಿಟಿ ಶೋ ವಿನ್ನರ್ ಯಾರಾಗಬಹುದು, ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಯಾರೆಲ್ಲಾ ಆಯ್ಕೆಯಾಗಬಹುದು ಎನ್ನುವ ಚರ್ಚೆ ಸಹ ನಡೆಯುತ್ತಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಬಂದ ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಒಬ್ಬರು ನಂದಿನಿ. ಹಿಂದಿ ರಿಯಾಲಿಟಿ ಶೋ ರೋಡೀಸ್ ನ ವಿನ್ನರ್ ಆಗಿ ಬಂದವರು ನಂದಿನಿ.

ಹಿಂದಿ ಶೋನಲ್ಲಿ ಭಾರಿ ಸದ್ದು ಮಾಡಿದ್ದ ನಂದಿನಿ ಅದೇ ಜೋಶ್ ಇಂದ ಬಿಗ್ ಬಾಸ್ ಮನೆಗೂ ಬಂದರು. ಸ್ಟ್ರಾಂಗ್ ಸ್ಪರ್ಧಿಯಾಗಿ ಯಾವುದೇ ಟಾಸ್ಕ್ ನಲ್ಲಿ ಉತ್ತಮವಾಗಿ ಪ್ರದರ್ಶನ ಕೊಡುತ್ತಿದ್ದ ನಂದಿನಿ ಅವರು 5ನೇ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದರು, ಇದು ವೀಕ್ಷಕರಿಗೂ ಶಾಕ್ ಆಗಿತ್ತು. ನಂದಿನಿ ಅವರು ಫಿನಾಲೆ ತಲುಪುತ್ತಾರೆ ಎಂದು ಹಲವರು ಭಾವಿಸಿದರು, ಆದರೆ ಹಲವು ಕಾರಣಗಳಿಂದ ಬೇಗ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇನ್ನು ನಂದಿನಿ ಅವರು ಹೊರಬಂದ ನಂತರ ಅವರ ಬಗ್ಗೆ ಹಲವು ವಿಚಾರಗಳು ಚರ್ಚೆಯಾಗುತ್ತಿದೆ.

ನಂದು ಅವರ ಪರ್ಸನಲ್ ಲೈಫ್ ಬಗ್ಗೆ ಹಾಗೂ ನಂದು ಜಶ್ವಂತ್ ರಿಲೇಶನ್ಷಿಪ್ ಬಗ್ಗೆ ತಿಳಿದುಕೊಳ್ಳಲು ಜನರು ಬಹಳ ಕುತೂಹಲ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಬಿಗ್ ಬಾಸ್ ಗೆ ಬರಲು ನಂದಿನಿ ಅವರು ಪಡೆದುಕೊಂಡಿರುವ ಸಂಭಾವನೆ ಬಗ್ಗೆ ಸಹ ಭಾರಿ ಚರ್ಚೆಯಾಗುತ್ತಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ನಂದಿನಿ ಅವರು ಬಿಗ್ ಬಾಸ್ ಶೋಗೆ ಬರಲು, ಒಂದು ವಾರಕ್ಕೆ 5 ಲಕ್ಷ ರೂಪಾಯಿಯ ಹಾಗೆ, ಐದು ವಾರಕ್ಕೆ 25ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರಂತೆ. ನಂದಿನಿ ಅವರ ಈ ಸಂಭಾವನೆ ಮೊತ್ತ ಕೇಳಿ, ನೆಟ್ಟಿಗರು ಶಾಕ್ ಆಗಿದ್ದಾರೆ.

Leave A Reply

Your email address will not be published.