Neer Dose Karnataka
Take a fresh look at your lifestyle.

52 ವರ್ಷ ಆದ ಮೇಲೆ ಚಿತ್ರರಂಗದ ಮತ್ತೊಂದು ಮುಖ ತೆರೆದಿಟ್ಟ ರಮ್ಯಾ ಕೃಷ್ಣ: ನಟಿಯಾಗಬೇಕು ಎಂದರೆ ಏನೆಲ್ಲಾ ಮಾಡಬೇಕಂತೆ ಗೊತ್ತೇ?? ಕಹಿ ಅನುಭವ ಏನು ಗೊತ್ತೇ??

ಕಾಸ್ಟಿಂಗ್ ಕೌಚ್ ಎನ್ನುವುದು ಚಿತ್ರರಂಗದಲ್ಲಿ ಬಹಳ ಕೇಳಿಬರುವ ಒಂದು ವಿಚಾರ ಆಗಿದೆ. ಸಿನಿಮಾರಂಗದಲ್ಲಿ ಮಾತ್ರವಲ್ಲ, ಬೇರೆ ಕ್ಷೇತ್ರದಲ್ಲಿ ಸಹ ಈ ಕ್ಯಾಸ್ಟಿಂಗ್ ಕೌಚ್ ಬಹಳ ಗಂಭೀರವಾಗಿ ಕಾಣಿಸಿಕೊಂಡಿರುವ ಸಮಸ್ಯೆ ಆಗಿದೆ. ಆದರೆ ಬೇರೆ ಕ್ಷೇತ್ರಗಳಿಗಿಂತ ಸಿನಿಮಾ ರಂಗದಲ್ಲಿ ಈ ಸಮಸ್ಯೆ ಹೆಚ್ಚಾಗಿ ಹೈಲೈಟ್ ಆಗುತ್ತದೆ. ಇದಕ್ಕೆ ಬಲಿ ಆಗಿರುವ ಸಾಕಷ್ಟು ಜನರಿದ್ದಾರೆ. ಆದರೆ ಕೆಲವರು ಮಾತ್ರ ಬುದ್ಧಿವಂತಿಕೆಯಿಂದ ಇದರಿಂದ ತಪ್ಪಿಸಿಕೊಂಡು, ಸ್ಟಾರ್ ಪಟ್ಟಕ್ಕೆ ಏರಿರುವ ನಟಿಯರು ಸಹ ಇದ್ದಾರೆ. ಮತ್ತೊಂದು ವಿಚಾರ ಏನೆಂದರೆ, ಕಾಸ್ಟಿಂಗ್ ಕೌಚ್ ಗೆ ತಲೆಬಾಗಿ ಸ್ಟಾರ್ ಆದವರು ಸಹ ಇದ್ದಾರೆ.

ಯಾರಿಗು ಹೇಳದೆ ಇದ್ದರೆ, ಈ ವಿಚಾರ ಹೊರಗೆ ಬರುವುದೇ ಇಲ್ಲ. ಇದೆಲ್ಲವೂ ಕತ್ತಲೆಯಲ್ಲೇ ನಡೆಯುತ್ತದೆ. ಹೀರೋಯಿನ್ ಗಳು ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರು ಸಹ, ಈ ಸಮಸ್ಯೆ ಎದುರಿಸುತ್ತಾರೆ. ಈ ವಿಚಾರದ ಬಗ್ಗೆ 80 ಮತ್ತು 90ರ ದಶಕದ ಸ್ಟಾರ್ ಹೀರೋಯಿನ್ ಆಗಿರುವ ರಮ್ಯಾ ಕೃಷ್ಣ ಅವರು ಸಹ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ರಮ್ಯಾ ಕೃಷ್ಣ ಅವರು ಮಾಡಿರುವ ಕಮೆಂಟ್ಸ್ ಗಳು ವೈರಲ್ ಆಗಿದೆ. ಬಹಳಷ್ಟು ನಟಿಯರು ಚಿತ್ರರಂಗದಲ್ಲಿ ಅವಕಾಶ ಪಡೆದುಕೊಳ್ಳಬೇಕಾದರೆ ಕಿರುಕುಳಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ನಟಿ ರಮ್ಯಾ ಕೃಷ್ಣ ಹಳೆಯ ಸಂದರ್ಶನ ಒಂದರಲ್ಲಿ ಹೇಳಿದ್ದರು.

ಕೆಲವು ವಿಚಾರಗಳಲ್ಲಿ ನಿಧಾನವಾಗಿ ಇರುವುದರಿಂದ ಯಾವುದೇ ಪ್ರಯೋಜನ ಇಲ್ಲ. ಸಿನಿಮಾರಂಗದಲ್ಲಿ ಉಳಿಯಬೇಕಾದರೆ, ಕೆಲವು ವಿಚಾರಗಳಿಗೆ ತಲೆಬಾಗಬೇಕು ಎಂದು ನಟಿ ರಮ್ಯಾ ಕೃಷ್ಣ ಹೇಳಿದ್ದರು. ಕ್ಯಾಸ್ಟಿಂಗ್ ಕೌಚ್ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಹಾಗಿದೆ ರಮ್ಯಾ ಕೃಷ್ಣ ಅವರ ಮಾತುಗಳು. ರಮ್ಯಾ ಅವರ ಈ ಮಾತುಗಳನ್ನು ಕೇಳಿ, ಅವಕಾಶಕ್ಕಾಗಿ ದೊಡ್ಡ ದೊಡ್ಡ ನಿರ್ಮಾಪಕರ ಹಾಗೂ ನಿರ್ದೇಶಕರ ಕೈಯಲ್ಲಿ ಇರಬೇಕಾದ ಪರಿಸ್ಥಿತಿ ಬರುತ್ತದೆ ಎಂದು ನೆಟ್ಟಿಗರು ಕಮೆಂಟ್ಸ್ ಬರೆಯುತ್ತಿದ್ದಾರೆ. ಇನ್ನು ರಮ್ಯಾ ಕೃಷ್ಣನ್ ಅವರು ಆಡಿರುವ ಮಾತುಗಳು ಈಗ ವೈರಲ್ ಆಗುತ್ತಿದೆ.

Comments are closed.