Neer Dose Karnataka
Take a fresh look at your lifestyle.

ಬಿಡುಗಡೆಯಾಯ್ತು ಬಹು ನಿರೀಕ್ಷಿತ ಟಿಆರ್ಪಿ ಲಿಸ್ಟ್: ಈ ವಾರದ ಟಾಪ್ ಧಾರಾವಾಹಿಗಳು ಯಾವ್ಯಾವು ಗೊತ್ತೇ??

105

ಈಗಿನ ದಿನಗಳಲ್ಲಿ ಪ್ರತಿ ವಾಹಿನಿಯಲ್ಲೂ ಧಾರವಾಹಿಗಳು ಹೊಸದಾಗಿ ಬರುತ್ತಲೇ ಇದೆ. ಪ್ರತಿಯೊಂದು ಧಾರವಾಹಿಯ ನಡುವೆಯು ಕಾಂಪಿಟೇಶನ್ ಗಳು ಇದ್ದೇ ಇದೆ. ಜೀಕನ್ನಡ, ಕಲರ್ಸ್ ಕನ್ನಡ, ಉದಯ ಟಿವಿ ಸ್ಟಾರ್ ಸುವರ್ಣ ಎಲ್ಲಾ ವಾಹಿನಿಯ ಧಾರವಾಹಿಗಳು ಪೈಪೋಟಿಗೆ ನಿಂತಿದೆ. ಧಾರವಾಹಿಗಳು ಆರಂಭದಲ್ಲಿ ಚೆನ್ನಾಗಿಯೇ ಬರುತ್ತದೆ, ಆದರೆ ಕೆಲವು ವಾರಗಳು ಕಳೆದ ನಂತರ, ವೀಕ್ಷಕರನ್ನು ಅದೇ ರೀತಿ ಹಿಡಿದಿಡುವುದು ಕಷ್ಟ. ಒಂದು ಧಾರವಾಹಿ ಬೋರ್ ಹೊಡೆದರೆ, ಮತ್ತೊಂದು ಧಾರವಾಹಿಗೆ ಶಿಫ್ಟ್ ಆಗುತ್ತಾರೆ ಕಿರುತೆರೆ ವೀಕ್ಷಕರು.

ಈ ಎಲ್ಲಾ ಧಾರವಾಹಿಗಳ ಯಶಸ್ಸು ನಿರ್ಧಾರ ಆಗುವುದು, ಟಿ.ಆರ್.ಪಿ ರೇಟಿಂಗ್ ಮೇಲೆ. ಪ್ರತಿವಾರದ ಹಾಗೆ ಈ ವಾರ ಕೂಡ ಟಿ.ಆರ್.ಪಿ ರೇಟಿಂಗ್ ಬಂದಿದ್ದು, ಯಾವ ಧಾರವಾಹಿ ಯಾವ ಸ್ಥಾನದಲ್ಲಿದೆ ಎಂದು ತಿಳಿಸುತ್ತೇವೆ ನೋಡಿ.. ಟಿ.ಆರ್.ಪಿ ರೇಟಿಂಗ್ ನಲ್ಲಿ ಮೊದಲ ಸ್ಥಾನದಲ್ಲಿರುವುದು ಪುಟ್ಟಕ್ಕನ ಮಕ್ಕಲಿ ಧಾರವಾಹಿ, ಪ್ರತಿ ಎಪಿಸೋಡ್ ನಲ್ಲಿ ಹೊಸ ಟ್ವಿಸ್ಟ್ ಗಳ ಮೂಲಕ ವೀಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಇನ್ನು ಎರಡನೇ ಸ್ಥಾನದಲ್ಲಿ ಹಿಟ್ಲರ್ ಕಲ್ಯಾಣ ಧಾರಾವಾಹಿ ಇದೆ. ಎಜೆ ಲೀಲಾ ಮದುವೆ ಬಳಿಕ, ಅತ್ತೆ ಸೊಸೆಯರ ನಡುವಿನ ಎಪಿಸೋಡ್ ಗಳು ವೀಕ್ಷಕರಿಗೆ ಬಹಳ ಇಷ್ಟವಾಗುತ್ತಿದೆ.

ಮೂರನೇ ಸ್ಥಾನದಲ್ಲಿ ಗಟ್ಟಿಮೇಳ ಧಾರವಾಹಿ ಇದೆ, ಈಗ ವೇದಾಂತ್ ಅಮೂಲ್ಯ ಜೊತೆಗೆ ಅಮ್ಮನ ಸೆಂಟಿಮೆಂಟ್ ಈಗ ಗಟ್ಟಿಮೇಳ ಧಾರವಾಹಿಯಲ್ಲಿ ಬಹಳ ವರ್ಕ್ ಆಗುತ್ತಿದೆ. ನಾಲ್ಕನೇ ಸ್ಥಾನದಲ್ಲಿ ಪಾರು ಧಾರವಾಹಿ ಇದೆ. ಅರಸನಕೋಟೆಯ ಜನ, ಪ್ರತಿ ಎಪಿಸೋಡ್ ನಲ್ಲಿ ಸಹ ಪಾರು ಮತ್ತು ಅಖಿಲಾಂಡೇಶ್ವರಿ ಪಾತ್ರ ಗಳಿಂದ ಸಿಗುತ್ತಿರುವ ಟ್ವಿಸ್ಟ್ ಅನ್ನು ಜನರು ಬಹಳ ಇಷ್ಟಪಡುತ್ತಿದ್ದಾರೆ. ಉದಯ ಮತ್ತು ಸ್ಟಾರ್ ಸುವರ್ಣ ವಾಹಿನಿಯ ಧಾರವಾಹಿಗಳು ಸಹ ಒಳ್ಳೆಯ ಟಿ.ಆರ್.ಪಿ ರೇಟಿಂಗ್ ಪಡೆದುಕೊಂಡಿದೆ, ಸ್ಟಾರ್ ಸುವರ್ಣ ವಾಹಿನಿಯ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಧಾರವಾಹಿ 8ನೇ ಸ್ಥಾನದಲ್ಲಿದೆ, 9ನೇ ಸ್ಥಾನದಲ್ಲಿ ಬೆಟ್ಟದ ಹೂವು ಧಾರವಾಹಿ ಇದೆ. ಈ ಧಾರವಾಹಿಯನ್ನು ಸಹ ಜನರು ಇಷ್ಟಪಡುತ್ತಿದ್ದಾರೆ.

Leave A Reply

Your email address will not be published.