Neer Dose Karnataka
Take a fresh look at your lifestyle.

ನಡೆಯುತ್ತಿದೆ ಗ್ರಹಗಳ ಮಹತ್ವದ ಸ್ಥಾನ ಬದಲಾವಣೆ: ಮುಂದಿನ 4 ತಿಂಗಳು ಈ ರಾಶಿಗಳಿಗೆ ಅದೃಷ್ಟದ ಜೊತೆ ಹಣದ ಮಳೆ. ಯಾರ್ಯಾರಿಗೆ ಗೊತ್ತೇ??

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಚಲನೆ ಮತ್ತು ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ಸ್ಥಾನ ಬದಲಾವಣೆ ಮಾಡುತ್ತದೆ. ಹಾಗೆಯೇ ಗ್ರಹಗಳ ಚಲನೆ ಹಾಗೂ ವಕ್ರನಡೆ ಎರಡು ಸಹ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. 2022ರ ಈ ವರ್ಷದಲ್ಲಿ ಈಗಾಗಲೇ 9ನೇ ತಿಂಗಳು ಕಳೆಯುತ್ತಿದೆ. ಈ ವರ್ಷ ಸೂರ್ಯ, ಬುಧ, ಶುಕ್ರ ಹಾಗೂ ಮಂಗಳ ಗ್ರಹ ಸ್ಥಾನ ಬದಲಾವಣೆ ಮಾಡಿದೆ, ಹಾಗೂ ಶನಿ ದೇವರು ಕೂಡ ಸ್ಥಾನ ಬದಲಾವಣೆ ಮಾಡಲಿದ್ದಾರೆ. ಇದರಿಂದಾಗಿ ಕೆಲವು ರಾಶಿಗಳ ಮೇಲೆ ಶುಭ ಪರಿಣಾಮ ಬೀರುತ್ತದೆ. ಇದರಿಂದಾಗಿ ಕೆಲವು ರಾಶಿಯ ಜನರಿಗೆ ಅದೃಷ್ಟ ಬರುತ್ತದೆ, ಹಾಗೂ ಲಾಭ ಗಳಿಸುತ್ತಾರೆ. ಆ ನಾಲ್ಕು ಅದೃಷ್ಟವಂತ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಈ ಸೆಪ್ಟೆಂಬರ್ ಮತ್ತು ಮುಂದಿನ ಮೂರು ತಿಂಗಳುಗಳು ಸಹ ಬಹಳ ಒಳ್ಳೆಯದಾಗಿದೆ. ಈ ಸಮಯದಲ್ಲಿ ಕೆಲಸದ ವಿಚಾರದಲ್ಲಿ ಬಡ್ತಿ ಪಡೆಯುತ್ತಾರೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ವೈಯಕ್ತಿಕವಾಗಿ ನಿಮ್ಮ ಜೀವನದಲ್ಲಿ ಹೃದಯಕ್ಕೆ ಬಹಳ ಸಂತೋಷವಾಗುತ್ತದೆ.

ವೃಶ್ಚಿಕ ರಾಶಿ :- ಇನ್ನು ಉಳಿದಿರುವ ಮೂರೂವರೆ ತಿಂಗಳು ವೃಶ್ಚಿಕ ರಾಶಿಯವರಿಗೆ ಬಹಳ ಒಳ್ಳೆಯ ಸಮಯ ಆಗಿದೆ. ಸೂರ್ಯ ಮತ್ತು ಶುಕ್ರ ಸಂಕ್ರಮಣ ಈ ರಾಶಿಯವರಿಗೆ ಶುಭಫಲ ತರುತ್ತದೆ. ಹಣ ಸಂಪಾದನೆಗೆ ಹೊಸ ಮಾರ್ಗಗಳು ಸಿಗುತ್ತವೆ ಹಾಗೂ ನಿಮ್ಮ ಆದಾಯ ಹೆಚ್ಚಾಗುತ್ತದೆ, ಜೊತೆಗೆ ನಿಮ್ಮ ವ್ಯಾಪಾರ ಸಹ ವಿಸ್ತರಿಸುತ್ತೀರಿ. ಉದ್ಯಮಿಗಳಿಗೆ ಹೆಚ್ಚಿನ ಲಾಭ ಸಿಗುತ್ತದೆ. ವಿದೇಶದಲ್ಲಿ ಇರುವವರಿಗೆ ಶುಭವಾಗುತ್ತದೆ.

ಧನು ರಾಶಿ :- ಈ ರಾಶಿಯವರಿಗೆ ಶುಕ್ರ ಮತ್ತು ಸೂರ್ಯ ಸಂಕ್ರಮಣ ಶುಭಫಲ ನೀಡುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯುತ್ತೀರಿ.. ವ್ಯಾಪಾರದಲ್ಲಿ ಲಾಭವಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ನಿಮ್ಮ ಸಂಬಳ ಹೆಚ್ಚಾಗುತ್ತದೆ. ಹೊಸ ಉದ್ಯೋಗದ ಪ್ರಸ್ತಾಪ ನಿಮಗೆ ಸಿಗಬಹುದು. ಮನೆ ಹಾಗು ಕಾರ್ ಖರೀದಿ ಮಾಡುವ ಅವಕಾಶ ಇದೆ.

ಮೀನ ರಾಶಿ :- ಈ ರಾಶಿಯವರಿಗೆ ಮಂಗಳ ಹಾಗೂ ಬುಧನ ಸ್ಥಾನ ಬದಲಾವಣೆ ಲಾಭ ತರುತ್ತದೆ. ಹಿಮ್ಮುಖ ಚಲನೆ ಶುರು ಮಾಡಿರುವ ಗುರು ಶುಭಾಫಲ ತರುತ್ತಾನೆ. ಕೆಲಸ, ವೃತ್ತಿ ಹಾಗೂ ಬ್ಯುಸಿನೆಸ್ ಮೂರರಲ್ಲೂ ಲಾಭ ಪಡೆಯುತ್ತೀರಿ. ಬೇರೆ ಕಡೆ ಸಿಕ್ಕಿಹಾಕಿಕೊಂಡಿರುವ ನಿಮ್ಮ ಹಣ ವಾಪಸ್ ಬರುತ್ತದೆ. ಆರ್ಥಿಕವಾಗಿ ಸದೃಢರಾಗಿರುತ್ತೀರಿ. ನಿಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ.

Comments are closed.